ನಂದವಾಡಗಿ,ರಾಂಪೂರ,ಎನ್,ಆರ್.ಬಿ.ಸಿ ಅಕ್ರಮ, ತನಿಖೆಗೆ ಒತ್ತಾಯಿಸಿ,CPIML ಹೋರಾಟ 2 ನೇ ದಿನಕ್ಕೆ…..
2 ಜುಲೈ ರಂದು ಬ ಎರಡನೇ ದಿನದ ಧರಣಿಯು ಆರಂಭವ. ಪಕ್ಷದ ಪಾಲಿಟಿ ಬ್ಯುರೊ ಸದಸ್ಯ ಆರ್. ಮಾನಸಯ್ಯ ಹಾಗೂ ಜಿಲ್ಲಾ ಕಾರ್ಯದರ್ಶಿ ಜಿ.ಅಮರೇಶ ಅವರ ನೇತೃತ್ವದಲ್ಲಿ ಬಿಜೆಪಿ ಸರಕಾರದ ಭ್ರಷ್ಟಾಚಾರದ ವಿರುದ್ದ ಘೋಷಣೆಯೊಂದಿಗೆ ಧರಣಿಯ ಕಲಾಪಗಳು ಪ್ರಾರಂಭವಾದವು. ನಿನ್ನೆ ಧರಣಿಗಾರರು ಲಿಂಗಸಗೂರು ಸಹಾಯಕ ಆಯುಕ್ತರ ಮೂಲಕ ಅಧ್ಯಕ್ಷರು ಕ್ರುಷ್ಣ ಭಾಗ್ಯ ಜಲ ನಿಗಮ,ಶ್ರೀ ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರು ಕರ್ನಾಟಕ ರಾಜ್ಯ ವಿಧಾನ ಸಭೆ, ಶ್ರೀ ಲಕ್ಷ್ಮಣ ಎಸ್ ಸವದಿ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರು, ಡಿ.ಎಸ್.ಹುಲಗೆರಿ ಶಾಸಕರು ಲಿಂಗಸಗೂರು,ಕೆ.ಶಿವನಗೌಡ ನಾಯಕ ಶಾಸಕರು ದೇವದುರ್ಗ,ರಾಜಾ ವೆಂಕಟಪ್ಪ ನಾಯಕ ಶಾಸಕರು ಮಾನ್ವಿ,ಆರ್.ಬಸನಗೌಡ ತುರ್ವಿಹಾಳ ಶಾಸಕರು ಮಸ್ಕಿ ಹಾಗೂ ಜಿಲ್ಲಾಧಿಕಾರಿಗಳು ರಾಯಚೂರು ಇವರಿಗೆ ಕಳುಹಿಸಲಾದ ವಿವರವಾದ ಒತ್ತಾಯ ಪತ್ರ- 2 ತಲುಪಿರುವ ಬಗ್ಗೆ ಸರಕಾರದ ಸಂಂಬಂಧಪಟ್ಟ ಮೂಲಗಳಿಂದ ಖಚಿತ ಪಡಿಸಲಾಯಿತು. ತದನಂತರ ಧರಣಿಯ ಉಸ್ತುವಾರಿ ವಹಿಸಿದ ಆರ್. ಮಾನಸಯ್ಯನವರು ಅಕ್ರಮ ಗುತ್ತಿಗೆ ನಿಲ್ಲಿಸದಿದ್ದರೆ ಪರಿಸ್ಥಿತಿ ವಿಕೋಪಕ್ಕೆ ಹೋದೀತು ಎಂದು ಕೆಬಿಜೆಎನ್ಎಲ್ ಅಧಿಕಾರಿ ವರ್ಗಕ್ಕೆ ಎಚ್ಚರಿಸಿದರು.ತದನಂತರ ಜಿ.ಅಮರೇಶ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರಕಾರಗಳು ಕಾರ್ಪೋರೇಟ್ ಕಂಪನಿಗಳ ತೊಗಲು ಗೊಂಬೆಗಳಾಗಿವೆ ಎಂದರು.ಮುಂದುವರೆದು ಅಡಿಗೆ ಅನಿಲ ಹಾಗೂ ಪೆಟ್ರೋಲ್ ಬೆಲೆ ಏರಿಕೆಯು ಬಿಜೆಪಿ ಸರಕಾರದ ಅಸಲಿ ಜನದ್ರೋಹಿ ಬಣ್ಣವನ್ನು ಸಂಪೂಣ೯ವಾಗಿ ಬಯಲು ಮಾಡಿದೆ ಎಂದು ವಿವರಿಸಿದರು.ಹಾಗೆಯೆ, ಹೋರಾಟದಲ್ಲಿ ಪಾಲ್ಗೊಂಡವರು ಲಿಂಗಪ್ಪ ಪರಂಗಿ ವಿಭಾಗಿಯ ಸಂಚಾಲಕರು ದಸಂಸ (ಅಂಬೇಡ್ಕರವಾದ) ಇವರು ತಮ್ಮಸಂಘಟನೆಯ ಸಂಪೂಣ೯ ಬೆಂಬಲ ವ್ಯಕ್ತ ಪಡಿಸಿದರು. ಸಂಜೀವಪ್ಪ ದಲಿತ ಮುಖಂಡರು ಧರಣಿಯನ್ನುದ್ದೇಶಸಿ ಮಾತಾಡಿದರು. ಧರಣಿ ಹೋರಾಟವನ್ನು ಬಸವರಾಜ ಮುದಗಲ್ ತಿಪ್ಪರಾಜ ಗೆಜ್ಜಲಗಟ್ಟಾ ಡಿ.ಜಿ. ಶಿವು. ಗೆಜ್ಜಲಗಟ್ಟಾ, ತಿಪ್ಪಣ್ಣ ಚಿಕ್ಕಹೆಸರೂರು ,ಪಾಮನಕಲ್ಲೂರಿನ ಚಂದಸಾಬ್ ಬಸಣ್ಣ ನಾಗಪ್ಪ ತಳವಾರ ಆದೇಶ ಹಿರೇನಗನೂರು ಮುಂತಾದವರು ಅಚ್ಚುಕಟ್ಟಾಗಿ ಸಂಘಟಿಸಿದ್ದರು. ರಾಯಚೂರು ತಾಲೂಕ ಕಾರ್ಯದರ್ಶಿ ಕಾಮ್ರೇಡ್ ರವಿ ದಾದಾಸ್ ಇಂದಿನ ಧರಣಿಯ ಕಲಾಪಗಳನ್ನು ನಡೆಸಿಕೊಟ್ಟರು. ಸೂಚನೆ; ಶನಿವಾರ ಹಾಗೂ ಭಾನುವಾರ ವಿಕೆಂಡ್ ಲಾಕ್ ಡೌನ್ ಇರುವುದರಿಂದ ಈ ದಿನಗಳಲ್ಲಿ ಧರಣಿ ನಡೆಯುವುದಿಲ್ಲ.ದಿ.5-7-2021ರಿಂದ ಪುನಾ: ಧರಣಿ ಹೋರಾಟ ಆರಂಭಿಸಲಾಗುವುದು. ಹಾಗಾಗಿ, ನಂದವಾಡಗಿ ರಾಂಪೂರ 9A ಹಾಗೂ 5A ನಾಲೆಯ ವ್ಯಾಪ್ತಿಯಲ್ಲಿ ಬರುವ ಹೋರಾಟ ಬೆಂಬಲಿಸಿ ಜಿಲ್ಲಾ ಕಾರ್ಯದರ್ಶಿ ಸಿ.ಪಿ.ಐ. ಎಂ.ಎ ಲ. ಜಿ ಅಮರೇಶ ಪತ್ರಿಕೆ ಮನವಿ ಮಾಡಿದರು.
ವರದಿ – ಸಂಪಾದಕೀಯ