ಕುಷ್ಟಗಿ: ದಲಿತರನ್ನು ಸಿ.ಎಂ ಮಾಡಿದರೆ ತಪ್ಪೇನು ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಪ್ರಶ್ನಿಸಿದರು.

Spread the love

ಕುಷ್ಟಗಿ: ದಲಿತರನ್ನು ಸಿ.ಎಂ ಮಾಡಿದರೆ ತಪ್ಪೇನು ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಪ್ರಶ್ನಿಸಿದರು.

ಕುಷ್ಟಗಿ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ  ಮಾತನಾಡಿದ ಅಮರೇಗೌಡ ಬಯ್ಯಾಪುರ ಅವರು, ದಲಿತರು ಸಿಎಂ ಸ್ಥಾನ ಕೇಳೋದು ತಪ್ಪಲ್ಲ. ಅವರಿಗೆ ಅವಕಾಶ ಸಿಕ್ಕರೆ ದಲಿತರು ಸಿ.ಎಂ ಆಗಲಿ. ಇದುವರೆಗೂ ದಲಿತರಿಗೆ ಸಿಎಂ ಸ್ಥಾನ ಸಿಕ್ಕಿಲ್ಲ. ಅವರು ಕೇಳುವುದರಲ್ಲಿ ತಪ್ಪಿಲ್ಲ, ಅವಕಾಶ ಸಿಕ್ಕರೇ ದಲಿತರನ್ನೇ ಸಿಎಂ ಮಾಡಬೇಕು ಎಂದರು. ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಬಣಕ್ಕೆ ಶಾಕ್ ನೀಡಿದ ಅವರು ಇನ್ನು ಸಮಯ ಸಿಕ್ಕರೆ ನಾನೂ ಸಿಎಂ ಅಗಬೇಕಂತಿನಿ ಆದರೆ ಸಿಗಬೇಕಲ್ಲ ? ದಲಿತರು ಆಸೆ ಪಡೋದು ಸಹಜ. ಆದರೆ ಕಾಂಗ್ರೆಸ್ ಪಕ್ಷ ಬಿಟ್ಟು ಹೋದವರು ಪಕ್ಷಕ್ಕೆ ಮರಳಿ ಬರುವುದಕ್ಕೆ ಅರ್ಜಿ ಹಾಕಿಲ್ಲ. ಪಕ್ಷ ಬಿಟ್ಟು ಹೋದವರು ಸತತವಾಗಿ ನಮ್ಮ ಸಂಪರ್ಕದಲ್ಲಿದ್ದಾರೆ. ಆದರೆ ಅವರು ಕಾಂಗ್ರೆಸ್ ಪಕ್ಷಕ್ಕೆ ಅರ್ಜಿ ಹಾಕಿದ ಮೇಲೆ ಹೇಳುತ್ತೇನೆ, ಯಾರದೋ ಮಾತು ಕೇಳಿ ಪಕ್ಷ ಬಿಟ್ಟು ತಪ್ಪು ಮಾಡಿರುತ್ತಾರೆ. ಅಂತವರು ಮರಳಿ ಬಂದ್ರೆ ಪರಿಶೀಲನೆ ಮಾಡಲಾಗುವುದು ಎಂದು ಮಾತನಾಡಿದರು.

ವರದಿ : ಹುಸೇನ್ ಮೋತೆಖಾನ್

Leave a Reply

Your email address will not be published. Required fields are marked *