ಕಳ್ಳರ ಹಾವಳಿಯಿಂದ ಹಳ್ಳಿಗಳಲ್ಲಿ ಜಾಗೃತಿ ಮೂಡಿಸುತ್ತಿರುವ ತಾವರಗೇರಾ ಠಾಣೆಯ ಪ್ರಭಾರ ಪಿ ಎಸ್ ಐ ಮಲ್ಲಪ್ಪ ವಜ್ರದ……

Spread the love

ಕಳ್ಳರ ಹಾವಳಿಯಿಂದ ಹಳ್ಳಿಗಳಲ್ಲಿ ಜಾಗೃತಿ ಮೂಡಿಸುತ್ತಿರುವ ತಾವರಗೇರಾ ಠಾಣೆಯ ಪ್ರಭಾರ ಪಿ ಎಸ್ ಮಲ್ಲಪ್ಪ ವಜ್ರದ…..

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ತಾವರಗೇರ ಠಾಣೆಯ ವ್ಯಾಪ್ತಿಯ ನಾರಿನಾಳ ಗ್ರಾಮದಲ್ಲಿ ಹಗಲು ಹೊತ್ತಿನಲ್ಲಿ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿರುವುದರಿಂದ ಇದನ್ನು ಅರಿತ ತಾವರಗೇರಾ ಠಾಣೆಯ ಪ್ರಭಾರಿ ಪಿ ಎಸ್ ಐ ಮಲ್ಲಪ್ಪ ವಜ್ರದ ಅವರು ಠಾಣಾ ವ್ಯಾಪ್ತಿಯ ಹಳ್ಳಿಗಳಿಗೆ ಭೇಟಿ ನೀಡಿ ಸಾರ್ವಜನಿಕರಲ್ಲಿ ಜಾಗೃತಿ ಎಚ್ಚರಿಕೆ ಮೂಡಿಸಿದರು.  ಜುಮಲಾಪೂರ ಗ್ರಾಮದಲ್ಲಿ ಸಾರ್ವಜನಿಕರ ಸಮ್ಮುಖದಲ್ಲಿ ಮಾತನಾಡಿದ ಪಿ ಎಸ್ ಐ ಮಲ್ಲಪ್ಪ ವಜ್ರದ ಅವರು ಯಾರಾದರೂ ನಿಮ್ಮ ಊರಿನಲ್ಲಿ ಅಪರಿಚಿತ ವ್ಯಕ್ತಿಗಳು ಕಂಡು ಬಂದರೆ  ತಕ್ಷಣ ನಮ್ಮನ್ನು ಸಂಪರ್ಕಿಸಿ ಹಾಗೆ ನೀವು ಮನೆ ಬೀಗ ಹಾಕಿ ಮನೆ ಮೇಲೆ ಮಲುಗುದು ಹಾಗೆ ಕಟ್ಟೆಮೇಲೆ ಮಲಗುವುದು ಮಾಡಬೇಡಿ  ನೀವು ಜಾಗೃತರಾಗಿರಿ, ತಾವರಗೇರಾ  ವ್ಯಾಪ್ತಿಯ ನಾರಿನಾಳ ಗ್ರಾಮದ ಲಿಂಗಪ್ಪ ಮೇರಟಗೇರಿ ಯವರ ಮನೆಯನ್ನು ಹಗಲು ಹೊತ್ತಿನಲ್ಲಿ ಮನೆಯ ಬೀಗ ಮುರಿದು 1 ಲಕ್ಷ 3000 ಸಾವಿರ ಬೆಲೆ ಬಾಳುವ ಬಂಗಾರ ಹಾಗೂ 15000 ಸಾವಿರ ರೂಪಾಯಿ ಹಣವನ್ನು  ಕಳ್ಳತನ ಮಾಡಿರುವುದು ತಾವರಗೇರಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು  ಮೊದಲು ನಿಮ್ಮ ರಕ್ಷಣೆ ನಿಮ್ಮ ಕೈಯಲ್ಲಿ  ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿ,  ಊರಿನಲ್ಲಿ ಡಂಗುರ ಸಾರುವಂತೆ ಹೆಳಿದರು ಅದರಂತೆ ಜುಮಲಾಪೂರ ಗ್ರಾಮದಲ್ಲಿ ಪ್ರತಿ ಓಣಿ ಓಣಿಗಳಲ್ಲಿ  ಸಾರ್ವಜನಿಕರಿಗೆ (ಚೈಯಂ ಚೈಕ್ಕಂ) ತಾಳ ಹಾಕುವ ಮುಖಾಂತರ ಸಾರ್ವಜನಿಕರಲ್ಲಿ ವಿಶೇಷವಾಗಿ ಎಚ್ಚರಿಸುತ್ತ  ತಾಲೂಕಿನ ಗ್ರಾಮಗಳ ಸುತ್ತ ಮುತ್ತ ಯಾರೇ ಕಂಬಳಿ ಇತರೆ ಹೊದಿಕೆಗಳನ್ನು ಮಾರಲು ತಮ್ಮ ಬಳಿ ಬಂದಲ್ಲಿ ಅವರ ಗುರುತಿನ ಚೀಟಿ ಹಾಗೂ ವಿಳಾಸವನ್ನು ಖಾತರಿ ಮಾಡಿಕೊಂಡುಕೊಳ್ಳುವುದದು, ಏಕೆಂದರೆ ಮಾರುವೇಶದಲ್ಲಿ ಕಂಬಳಿ ಮಾರುವವರಾಗಿ ಬಂದು ತಮ್ಮ ಮನೆಯ ಸಂಪೂರ್ಣ ವಿವರ ತಿಳಿದುಕೊಂಡು ಮನೆ ಕಳ್ಳತನ ದರೋಡೆ ಸುಲಿಗೆ ಇತ್ಯಾದಿ ಕಳ್ಳತನಗಳನ್ನು ಇರಾನಿ ಗ್ಯಾಂಗ್ ಎಂಬ ಹೆಸರಿನ ಹೊರ ರಾಜ್ಯಗಳಿಂದ ಬಂದ ಕಳ್ಳರು, ಕಳ್ಳರು ಕಳ್ಳತನ ದರೋಡೆ ಸುಲಿಗೆ ಅತ್ಯಾಚಾರ ಮಾಡುತ್ತಿದ್ದು ಅವರ ಮೇಲೆ ನಿಗಾ ಇಡಲು ಮಾನ್ಯ ರಾಜ್ಯ ಸರ್ಕಾ‍ರದ ಗುಪ್ತಚರ ಇಲಾಖೆಯು ತಿಳಿಸಿರುತ್ತದೆ.

ವರದಿ – ಅಮಾಜಪ್ಪ ಹೆಚ್.ಜುಮಲಾಪೂರ

Leave a Reply

Your email address will not be published. Required fields are marked *