ಹ್ಯಾಂಗ್ ಬದುಕಬೇಕಬೆ….ಸಮಾಜದಾಗ

Spread the love

ಹ್ಯಾಂಗ್ ಬದುಕಬೇಕಬೆ….

ಹ್ಯಾಂಗ್ ಬದುಕಬೇಕಬೆ ಈ ನೆಲದಾಗ
ರಕ್ತ ಹಂಚಿಕೊಂಡು ಬಂದವರ
ರಕ್ತ ಕುಡಿಯೋ ರಾಕ್ಷಸರಾಗ್ಯಾರ
ಇದ್ದದ್ದೇಲ್ಲಾ ನೆಕ್ಕಿ ನೆಲಕ ಬಿದ್ದ
ಸಗಣಿಗೂ ನಾಲಿಗೆ ಹಾಕಿದ
ನಾಯಕ ನ್ಯಾಯವಂತರ ಮುಂದ
ಹ್ಯಾಂಗ್ ಬದುಕಬೇಕಬೆ ಈ ನೆಲದಾಗ.

ವೃದ್ಧರು, ಅಬಲರು ನೆಲೆ ನೀಡಿದವರ
ಕಣ್ಣಾಗ ನೀರು ಅಲ್ಲ ರಕ್ತ ಬರಸಾಕಾಂತರ
ಮಾಡಿದ್ದು ಉಣ್ಣಾಕಾ ಬೇಕು
ಅನ್ನೋದು ಮರೆತು ನಿಂತಾರ
ಬಾಯಿನ ಬಂಡವಾಳ ಮಾಡಿ
ಅಪಪ್ರಚಾರ ಮಾಡಾಕ ಮೂರು ಬಿಟ್ಟ ನಿಂತವರ ಮುಂದ.
ಹ್ಯಾಂಗ ಬದುಕಬೇಕಬೆ ಈ ನೆಲದಾಗ.

ಇನ್ನೊಬ್ಬರ ಮನಿಗೆ ಬೆಂಕಿ ಹಚ್ಚಿ.
ಆ ಬೆಂಕಿನ ತಮ್ಮ ಮನಿ ದೀಪ ಮಾಡಿಕೊಂಡು.
ನೀತಿಬಿಟ್ಟವರ್ನ ಸಾಕ್ಷಿ ಕಟಗೊಂಡು.
ಸುಡಾಗಡ ದಾರಿಹಿಡಕೊಂಡು ಕ್ಯಾಕಿ ಹಾಕೊಂತ
ಮೆರವಣಿಗೆ ಹೊಂದಿರುವ ಮುಂದ.
ಹ್ಯಾಂಗ ಬದುಕ ಬೇಕಬೆ ಈ ನೆಲದಾಗ..

ತಮ್ಮದ ತೋಳಿಲಾರದವರು ಇನ್ನೋಬ್ಬರದು ತೊಳಿಲಾರರು ಗಾದಿಯಂಗ.
ಮಾಟ ಮದ್ದು ಮಾಡಿ. ಧರ್ಮ ವಂತರಿಗೆ ದಾರಿಬಿಡಸಿ. ಭಯ ಹುಟ್ಟಿಸುವ.
ಬದುಕಿನ ಸಹಜ ನೋವುಗಳಿಗೆ.
ನನ್ನ ಶಕ್ತಿ ಕಾರಣ ಎಂದು ಡಂಗುರ ಸಾರೊ ದಗಲ್ ಬಾರಿಗೆ ಮುಂದ.
ಹ್ಯಾಂಗ ಬದುಕಬೇಕಬೆ ಈ ನೆಲದಾಗ….

ಅನೀತಿ, ಅನ್ಯಾಯ. ಅ ಧರ್ಮಕ್ಕೆ. ಶಕ್ತಿ ಇರತೈತಿ ಅಂತ ನೀವು ನಂಬಿದರೆ.
ಇವುನೆಲ್ಲ ಮೆಟ್ಟಿ ನಿಲ್ಲೋ ಧರ್ಮನಾ ಸಭ್ಯರು ನಂಬ್ಯಾರ.
ಇವುನೆಲ್ಲ ಮರತಮಂದಗೆಡಿಗಳ ಮುಂದ ಹ್ಯಾಂಗ ಬದುಕಬೇಕಬೆ ಈ ನೆಲದಾಗ……

ಅಂಕಲಿ ಬಸಮ್ಮ

Leave a Reply

Your email address will not be published. Required fields are marked *