ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ವತಿಯಿಂದ ಕಂದನ ಉಳಿಸುವ ಅಭಿಯಾನ….

Spread the love

ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ವತಿಯಿಂದ ಕಂದನ ಉಳಿಸುವ ಅಭಿಯಾನ….

ಒಂದು ವರ್ಷದ ಮಗು ಜನೀಶ್ ಅಪರೂಪದ ಅನುವಂಶೀಯ ಕಾಯಿಲೆಯ ಬೆನ್ನುಮೂಳೆಯ ಸ್ನಾಯು ಕ್ಷೀಣತೆಯಿಂದ ಬಳಲುತ್ತಿದ್ದು, ಮಗುವಿನ ಚಿಕಿತ್ಸ ವೆ ಚ್ಚ ಭರಿಸಲು ಮುಂದೆ ಬಂದ  ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಅಧ್ಯಕ್ಷರಾದ  ಟಿ. ಶಿವಕುಮಾರ್ ನಾಗರ ನವಿಲೆ ಹಾಗೂ ಪದಾಧಿಕಾರಿಗಳು. ಈ ಸಂದರ್ಭದಲ್ಲಿ  ಕನ್ನಡ ಚಲನಚಿತ್ರ ಸಾಹಿತಿಗಳು, ಸಂಭಾಷಣಕಾರರು, ಬರಹಗಾರರು, ನಿರ್ದೇಶಕರು ಡಾ.ವಿ. ನಾಗೇಂದ್ರ ಪ್ರಸಾದ್ ರವರು ಇಂದು ನಮ್ಮ ಕಾರ್ಯಕ್ರಮಕ್ಕೆ ಆಗಮಿಸಿ, ಕಂದನ ಉಳಿಸು ಲಾಂಛನವನ್ನು ಬಿಡುಗಡೆಗೊಳಿಸಿ, ಮಾತನಾಡಿ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಸಂಸ್ಥೆ ಈಗಾಗಲೇ ಹಲವಾರು ಸಾಮಾಜಿಕ ಸೇವೆಗಳನ್ನ ಮಾತಾಡುತ್ತಾ ಬಂದಿದ್ದು ತನ್ನದೇ ಮಹತ್ವವನ್ನು ಪಡೆದುಕೊಂಡಿದೆ. ಇಂದು ಮಗುವಿನ ಚಿಕಿತ್ಸಾ  ವೆಚ್ಚ ಬರಿಸಲು ಮುಂದೆ ಬಂದಿದ್ದೂ, ಇವರೊಂದಿಗೆ ನಾವೆಲ್ಲರೂ ಕೈಜೋಡಿಸಿ ಮಗುವಿನ ಪ್ರಾಣ ಉಳಿಸುವ ಕೆಲಸ ಮಾಡೋಣ ಎಂದರು. ಅನಂತರ ಮಾತನಾಡಿದ ಅಧ್ಯಕ್ಷರು,  ನಮ್ಮ ಗುರಿ ಮಗುವನ್ನು ಉಳಿಸುವದಾಗಿದ್ದು, ನಮ್ಮೊಂದಿಗೆ ಪ್ರತಿಯೊಬ್ಬರು ಕೈಜೋಡಿಸಬೇಕಾಗಿ ವಿನಂತಿ. ಎಲ್ಲರೂ ತಮ್ಮ ತಮ್ಮ ಜವಾಬ್ದಾರಿಗಳನ್ನು ಶಿಸ್ತಿನಿಂದ ನಿಭಾಯಿಸಿ ಹಣ ಸಂಗ್ರಹ ಕಾರ್ಯಕ್ರಮಕ್ಕೆ ಪ್ರೋತ್ಸಾಹಿಸಬೇಕಾಗಿ ಮನವಿ ಮಾಡಿ ಡಾ. ನಾಗೇಂದ್ರ ಪ್ರಸಾದ್ ರವರಿಗೆ ಗೌರವ ಸೂಚಿಸಿ ಅಭಿನಂದಿಸಲಾಯಿತು. ಈಗಾಗಲೇ ಕರ್ನಾಟಕದಾದ್ಯನಂತ ಹಲವು ಮೂಲಗಳಿಂದ 7 ಕೋಟಿ 19 ಲಕ್ಷ ಹಣ ಸಂಗ್ರಹವಾಗಿದ್ದು, ಬಾಕಿ 9ಕೋಟಿ 81 ಲಕ್ಷ ಹಣ ಸಂಗ್ರಹವಾಗಬೇಕಿದೆ. ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಸಂಸ್ಥೆಯು ಬಾಕಿ ಹಣ ಸಂಗ್ರಹಣೆಗಾಗಿ ಅಂತಾರಾಷ್ಟ್ರೀಯ ಮಟ್ಟದ ಅದ್ದೂರಿ ಕಾರ್ಯಕ್ರಮ ಮಾಡುವುದರ ಮೂಲಕ ಹಣ ಸಂಗ್ರಹಣೆಗೆ  ಸಜ್ಜಾಗಿದೆ. ಈ ಅದ್ದೂರಿ ಕಾರ್ಯಕ್ರಮದಲ್ಲಿ ಹಲವು ಕಲಾವಿದರು, ಸಾಹಿತಿಗಳು, ಸಮಾಜಸೇವಕರು ಅಂತರಾಷ್ಟ್ರೀಯ ಕಲಾವಿದರು ಹಾಗೂ ಇನ್ನಿತರೇ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮವನ್ನು ಸಂಪೂರ್ಣವಾಗಿ ಯಶಸ್ವಿಗೊಳಿಲು ಈ ದಿನ ಪ್ರಮುಖ ಸಭೆ ಕರೆಯುವುದರ ಮೂಲಕ ಕಾರ್ಯಕ್ರಮದ ರೂಪುರೇಷೆಗಳನ್ನ ಸಿದ್ದಪಡಿಸಲಾಯಿತು. ಈ ಸಂಧರ್ಭದಲ್ಲಿ ಡಾ. ಮಂಜುನಾಥ್,  ರವಿ ಸಂತು,  ಕಲ್ಪನ, ಸಾಹಿತಿ ಅನುರಾಧ, ಧನಂಜಯ್, ಅರುಣ್ ಶಿವಾಗ್,ಆಶಾ ಸೂರ್ಯನಾರಾಯಣ್,ಮಂಜಮ್ಮ ಪಾವಗಡ, ಸೌಭಾಗ್ಯ ಶ್ರೀಮಂತ ಮಂಜು,ಪರಮ ಗುಬ್ಬಿ, ಅನುನಿತ್ಯ,ಮಗುವಿನ ತಂದೆ ನವೀನ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.

ವರದಿ – ಅಮಾಜಪ್ಪ ಹೆಚ್.ಜುಮಲಾಪೂರ

Leave a Reply

Your email address will not be published. Required fields are marked *