ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ– ರಾಜೇಶ್ ನಾಯಕ್……
ಕವಿತಾಳ: ಪಟ್ಟಣದ ಮೌನೇಶ್ ಕಲಶೆಟ್ಟಿ ಹಾಗೂ ಸಂತೋಷ್ ಕಲಶೆಟ್ಟಿ ಇವರ ತಾಯಿಯಾದ ದಿವಂಗತ ಶ್ರೀಮತಿ ಮಲ್ಲಮ್ಮ ಕಲಶೆಟ್ಟಿ ಅವರ ಆರನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮ ಇಂದು ಮಧ್ಯಾಹ್ನ 12 :30 ಕ್ಕೆ ಕವಿತಾಳ ಪೊಲೀಸ್ ಠಾಣೆ ಆವರಣ ಮತ್ತು ಪ್ರವಾಸಿಮಂದಿರ ಹೊಸ ಬಸ್ ನಿಲ್ದಾಣ ಹಾಗೂ ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಾದೇಶಿಕ ಅರಣ್ಯ ವಲಯ ಅಧಿಕಾರಿ ರಾಜೇಶ್ ನಾಯಕ್ ಅವರು ತಾಯಿಯ ಸ್ಮರಣಾರ್ಥಕ ವಾಗಿ ಇಂದು ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮ ಬಹಳ ವಿಶೇಷತೆಯಿಂದ ಕೂಡಿದೆ ತಾಯಿಯ ಋಣವನ್ನು ಎಂದಿಗೂ ತೀರಿಸಲಾಗದು ಕಲಶೆಟ್ಟಿ ಕುಟುಂಬ ಅವರ ಪರಿಸರ ಪ್ರೇಮ ಅಮೋಘವಾದದ್ದು ಇಂತಹ ಮಹತ್ವ ಕಾರ್ಯವನ್ನು ಕೈಗೊಂಡಿರುವ ಕಲಶೆಟ್ಟಿ ಕುಟುಂಬಕ್ಕೆ ಅಭಿನಂದನೆ ತಿಳಿಸಿದರು. ಸಸಿ ನೆಡುವ ಮೂಲಕ ತಾಯಿಯ ಋಣ ತೀರಿಸಲು ಮುಂದಾದ ಮಕ್ಕಳ ಕಾರ್ಯ ಶ್ಲಾಘನೀಯವಾದದ್ದು ಎಂದು ಹೇಳಿದರು. ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ ಪ್ರತಿನಿತ್ಯವೂ ಉಸಿರಾಡಲು ಪರಿಸರ ನಮಗೆ ಅತ್ಯಗತ್ಯ ಅವಶ್ಯಕತೆಯಾಗಿದೆ ಪ್ರತಿಯೊಬ್ಬರೂ ಕೂಡ ಸಸಿಗಳು ನಡುವುದು ಅಷ್ಟೇ ಅಲ್ಲ ಅವುಗಳನ್ನು ಮಕ್ಕಳಂತೆ ಪಾಲಿಸಿ ಪಾಲಿಸಿ ಪೋಷಣೆ ಮಾಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು ಈ ಸಂದರ್ಭದಲ್ಲಿ ಪಿಎಸ್ಐ ವೆಂಕಟೇಶ್. ಎಂ. ಆರೋಗ್ಯ ಕೇಂದ್ರ ವೈದ್ಯಾಧಿಕಾರಿಗಳಾದ ಡಾಕ್ಟರ್ ಅಮೃತ ಎಸ್ ಬಿ ಐ ಬ್ಯಾಂಕಿನ ವ್ಯವಸ್ಥಾಪಕರಾದ ಉಮೇಶ್ ವಡ್ಡರ್ ವಿಜಯಕುಮಾರ್ ಕತ್ತಲ್ ಡಿವೈಎಫ್ಐ ನಗರ ಘಟಕ ಅಧ್ಯಕ್ಷರಾದ ಮಹಮ್ಮದ್ ರಫಿ ಕರವೇ ಉಪಾಧ್ಯಕ್ಷ ಅಜ್ಜಪ್ಪ ವಾಲ್ಮೀಕಿ ನಗರ ಘಟಕ ಅಧ್ಯಕ್ಷರಾದ ಅಧ್ಯಕ್ಷರಾದ ಹನುಮನ್ ಗೌಡ ನಾಯಕ್ ಮತ್ತು ಸುರೇಶ್ ಜಾನಿ ಮಹಮದ್ ರಫಿ ಸೋಮಶೇಖರ್ ಮೌಲಾಲಿ ರಮೇಶ್ ಡ್ರೈವರ್ ವಸಂತ್ ಶೆಟ್ಟಿ ಉಪಸ್ಥಿತರಿದ್ದರು.
ವರದಿ – ಆನಂದ್ ಸಿಂಗ್ ಕವಿತಾಳ.