ಮುದೇನೂರಿನ ಸರ್ಕಾರಿ ಪ್ರೌಢ ಶಾಲೆಯಲ್ಲಿ ಅನೈತಿಕ ಚಟುವಟಿಕೆಗಳು ಕಂಡು ಬಂದಲ್ಲಿ ಅವರನ್ನು ಬಂದಿಸಿ ಕರೆದೊಯ್ಯಲಾಗುವುದು.….
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಮುದೇನೂರ ಸರಕಾರಿ ಪ್ರೌಢ ಶಾಲೆಯಲ್ಲಿ ಆಯೋಜಿಸಿದ್ದ ಎಸ್ ಡಿ ಎಮ್ ಸಿ ಸಭೆಯಲ್ಲಿ ಮಾತನಾಡಿದ ತಾವರಗೇರಾ ಪೊಲೀಸ್ ಠಾಣೆಯ ಪ್ರಭಾರಿ ಪಿ ಎಸ್ ಐ ಮಲ್ಲಪ್ಪ ವಜ್ರದ. ಶಾಲೆ ಅಂದರೆ ನಮ್ಮ ಸಂಸ್ಕೃತಿಯಲ್ಲಿ ದೆವಾಸ್ಥಾನವಿದ್ದಂತೆ ಪೂಜ್ಯ ಮನೋಭಾವದಿಂದ ಕಾಣುವ ಸ್ಥಳ ಇದು ಇಂತಹ ಸ್ಥಳದಲ್ಲೇ ಅನೈತಿಕ ಚಟುವಟಿಕೆ ಮಾಡುವವರು ಕಂಡು ಬಂದರೆ ನೇರವಾಗಿ ಅವರನ್ನೇ ಅಪರಾಧಿಗಳೆಂದು ಬಂದಿಸಿ ಕರೆದೊಯ್ಯಲಾಗುವುದು ಎಂದು ಎಸ್ ಡಿ ಎಮ್ ಸಿ ಸಭೆಯಲ್ಲಿ ಭಾಗವಹಿಸಿ ಎಚ್ಚರಿಕೆ ಸಂದೇಶ ರವಾನಿಸಿದರು, ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರು ಎಸ್ ಡಿ ಎಮ್ ಸಿ ಸರ್ವ ಸದಸ್ಯರು ಗ್ರಾಮ ಪಂಚಾಯಿತಿ ಸದಸ್ಯರು ಡಿ ಆರ್ ಸಿ ಅಧಿಕಾರಿಗಳು ಇನ್ನಿತರರು ಪಾಲ್ಗೊಂಡಿದ್ದರು.
ವರದಿ – ಅಮಾಜಪ್ಪ ಹೆಚ್.ಜುಮಲಾಪೂರ