ಕೃಷ್ಣರಾಜಪೇಟೆ ತಾಲ್ಲೂಕಿನ ರೈತರ ಜೀವನಾಡಿಯಾಗಿರುವ ಮಾಕವಳ್ಳಿಯ ಕೋರಮಂಡಲ್ ಸಕ್ಕರೆ ಕಾರ್ಖಾನೆ .. ಬಾಯ್ಲರ್ ಗೆ ಅಗ್ನಿಸ್ಪರ್ಷ ..
ವಿಶೇಷ ಪೂಜೆ, ಹೋಮ ಹವನ ನಡೆಸಿದ ಕಾರ್ಖಾನೆಯ ಹಿರಿಯ ಉಪಾಧ್ಯಕ್ಷ ರವಿರೆಡ್ಡಿ ದಂಪತಿಗಳು.. ಕಾರ್ಖಾನೆಯಲ್ಲಿ ಹಬ್ಬದ ವಾತಾವರಣ.. ಮುಗಿಲು ಮುಟ್ಟಿದ ಸಂಭ್ರಮ…ಕಬ್ಬು ಬೆಳೆಗಾರರ ಮೊಗದಲ್ಲಿ ಮೂಡಿದ ಮಂದಹಾಸ.. 2021-22ನೇ ಸಾಲಿನ ಪ್ರಸಕ್ತ ಕಬ್ಬು ಹಂಗಾಮಿನಲ್ಲಿ 8ಲಕ್ಷ ಟನ್ ಕಬ್ಬು ಅರೆಯುವ ಗುರಿ..ವಿ.ಜೆ.ರವಿರೆಡ್ಡಿ ಪ್ರಕಟಣೆ… ಕೆ.ಆರ್.ಪೇಟೆ ತಾಲ್ಲೂಕಿನ ರೈತರ ಜೀವನಾಡಿಯಾಗಿರುವ ಕೋರಮಂಡಲ್ ಸಕ್ಕರೆ ಕಾರ್ಖಾನೆಯು ಪ್ರಸಕ್ತ ಸಾಲಿನ ಕಬ್ಬು ಹಂಗಾಮಿನಲ್ಲಿ ಜುಲೈ-16ರಿಂದ ಅಧಿಕೃತವಾಗಿ ಕಬ್ಬು ಅರೆಯುವ ಕಾರ್ಯಕ್ಕೆ ಚಾಲನೆ ನೀಡಲಿದ್ದು ಇಂದು ಕಾರ್ಖಾನೆಯ ಹಿರಿಯ ಉಪಾಧ್ಯಕ್ಷರಾದ ರವಿರೆಡ್ಡಿ ದಂಪತಿಗಳು ಕಾರ್ಖಾನೆಯ ಆವರಣದಲ್ಲಿ ಹೋಮಹವನ ನಡೆಸಿ ಯಂತ್ರೋಪಕರಣಗಳು ಹಾಗೂ ಬಾಯ್ಲರ್ ಗೆ ವಿಶೇಷಪೂಜೆ ಸಲ್ಲಿಸಿ ಅಗ್ನಿಸ್ಪರ್ಷ ಮಾಡಿದರು … 2021-22 ನೇ ಸಾಲಿನಲ್ಲಿ ಕಾರ್ಖಾನೆಯು 08ಲಕ್ಷ ಟನ್ ಕಬ್ಬು ಅರೆಯುವ ಗುರಿಯನ್ನು ಹೊಂದಿದ್ದು ಕಾರ್ಖಾನೆಗೆ ಕಬ್ಬು ಬೆಳೆಗಾರರು ಸರಬರಾಜು ಮಾಡಿರುವ ಕಬ್ಬಿನ ಬಾಕಿ ಹಣವನ್ನು ಸಂಪೂರ್ಣವಾಗಿ ಪಾವತಿಸಿರುವ ಏಕೈಕ ಸಕ್ಕರೆ ಕಾರ್ಖಾನೆಯೆಂಬ ಹೆಗ್ಗಳಿಕೆಗೆ ಕೋರಮಂಡಲ್ ಸಕ್ಕರೆ ಕಾರ್ಖಾನೆ ಪಾತ್ರವಾಗಿದ್ದು ರೈತರು ಬೆಳೆದಿರುವ ಕಬ್ಬನ್ನು ಆಧ್ಯತೆಯ ಮೇರೆಗೆ ಅರೆಯಲು ಕಾರ್ಖಾನೆಯು ಬದ್ಧವಾಗಿದ್ದು ತಾಲ್ಲೂಕಿನ ಕಬ್ಬು ಬೆಳೆಗಾರರು ಎಂದಿನಂತೆ ಕಾರ್ಖಾನೆಗೆ ಕಬ್ಬನ್ನು ಸರಬರಾಜು ಮಾಡಬೇಕು ಎಂದು ಕಾರ್ಖಾನೆಯ ಹಿರಿಯ ಉಪಾಧ್ಯಕ್ಷ ರವಿರೆಡ್ಡಿ ಮನವಿ ಮಾಡಿದರು.. ಬಾಯ್ಲರ್ ಗೆ ಅಗ್ನಿಸ್ಪರ್ಷ ಮಾಡುವ ಕಾರ್ಯಕ್ರಮ ಹಾಗೂ ಹೋಮಹವನದ ಪೂಜಾ ಕಾರ್ಯಕ್ರಮದಲ್ಲಿ ತಾಲ್ಲೂಕು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕಾರಿಗನಹಳ್ಳಿ ಕುಮಾರ್, ಕಬ್ಬು ವಿಭಾಗದ ಹಿರಿಯ ವ್ಯವಸ್ಥಾಪಕ ಕೆ.ಬಾಬೂರಾಜ್, ಮಾನವ ಸಂಪನ್ಮೂಲ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ಪದ್ಮನಾಭ, ಕಿಕ್ಕೇರಿ ಪೋಲಿಸ್ ಠಾಣೆ ಇನ್ಸ್ ಪೆಕ್ಟರ್ ಜಗಧೀಶ್, ಸಬ್ ಇನ್ಸ್ ಪೆಕ್ಟರ್ ನವೀನ್ ಸೇರಿದಂತೆ ತಾಲ್ಲೂಕಿನ ಕಬ್ಬು ಬೆಳೆಗಾರರು ಹಾಗೂ ಪ್ರಗತಿಪರ ರೈತರು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಿಶೇಷ ವರದಿ. ಸಂಗ್ರಹಗಾರರು ಡಾ.ಕೆ.ಆರ್.ನೀಲಕಂಠ . ಕೃಷ್ಣರಾಜಪೇಟೆ . ಮಂಡ್ಯ
ವರದಿ – ಮಹೇಶ ಶರ್ಮಾ