ಆರೋಗ್ಯ ಇಲಾಖೆಯಿಂದ ಜುಮಲಾಪೂರ ಗ್ರಾಮದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ…
ಕುಷ್ಟಗಿ ತಾಲ್ಲೂಕಿನ ಜುಮಲಾಪೂರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರೋಗ್ಯ ಇಲಾಖೆ ವತಿಯಿಂದ ಇವಿಶ್ವ ಜನಸಂಖ್ಯಾ ದಿನಾಚರಣೆ ಆಚರಿಸಲಾಯಿತು. ಈ ಸಂದರ್ಭದಲ್ಲಿ ಈ ಕಾರ್ಯಕ್ರಮವನ್ನು ಆಡಳಿತ ವೈದ್ಯಾಧಿಕಾರಿ ಶ್ರೀ ಡಾ/ಮುಖೇಶ ಹಾಗೂ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳು ಶ್ರೀ ಶಿವಾನಂದ ಪೂಜಾರ ಗ್ರಾಮ ಪಂಚಾಯ್ತಿ ಸದಸ್ಯರು ಜ್ಯೋತಿ ಬೆಳಗಿಸುವ ಮುಖಾಂತರ ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳು ಶಿವಾನಂದ ಪೂಜಾರ ಇವರು ಗ್ರಾಮದ ಸಾರ್ವಜನಿಕರಿಗೆ ವಿವರವಾಗಿ ಕುಟುಂಬ ಕಲ್ಯಾಣ ವಿವರಗಳ ಬಗ್ಗೆ ಮತ್ತು ಜನಸಂಖ್ಯಾ ಸ್ಫೊಟದಿಂದಾಗುವ ಅನಾನುಕೂಲ ದ ಬಗ್ಗೆ ವಿವರವಾಗಿ ತಿಳಿಸಿ ಹಾಗೆ ಪ್ರತಿಯೊಬ್ಬರು ಕೋವಿಡ್ ಲಸಿಕೆ ಹಾಕಿಸಿಕೊಳ್ಳಬೇಕು ಎಂದರು. ತದನಂತರದಲ್ಲಿ ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸ್ಥಳೀಯ ಆಡಳಿತ ವೈದ್ಯಾಧಿಕಾರಿ ಶ್ರೀ ಡಾ ಮುಖೇಶ ಜನಸಂಖ್ಯಾ ಹೆಚ್ಚಳದಿಂದ ಉಂಟಾಗುತ್ತಿರುವ ಜಾಗತಿಕ ಹಾಗೂ ಆರ್ಥಿಕ ಸಮಸ್ಯೆಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ವಿಶ್ವ ಜನಸಂಖ್ಯಾ ದಿನಾಚರಣೆ ಮಾಡಲಾಗುತ್ತದೆ. ಒಂದು ಮಗುವಿಗೆ ಇನ್ನೊಂದು ಮಗುವಿಗೆ ಕನಿಷ್ಠ 3 ರಿಂದ 5 ವರ್ಷ ಅಂತರವಿರಬೇಕು ಇದರಿಂದ ಹೆಣ್ಣು ದೈಹಿಕವಾಗಿ ಸಾಮಾಜಿಕವಾಗಿ ಆರೋಗ್ಯವಾಗಿ ಇರಬಲ್ಲಳು. ಕುಟುಂಬ ಕಲ್ಯಾಣ ಇಲಾಖೆ ವಿಧಾನಗಳನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ಆರೋಗ್ಯದತ್ತ ಸಾಗಬೇಕು ಈಗಾಗಲೇ ನಮ್ಮ ದೇಶ ಜನಸಂಖ್ಯೆಯಲ್ಲಿ 100ಕೊಟಿ ದಾಟಿಯಾಗಿದೆ ಇದೆ ಮುಂದುವರದರೆ ಜಿವಸಿಲು ಕಷ್ಟ ವಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು. ತಾಲ್ಲೂಕು ಹಿರಿಯ ಆರೋಗ್ಯ ನಿರಿಕ್ಷಣಾಧಿಕಾರಿ ಶ್ರೀ ಸೋಮಶೇಖರ್ ಮೇಟಿ ಪ್ರಾಸ್ತಾವಿಕವಾಗಿ ಮಾತನಾಡಿದರು ಈ ಕಾರ್ಯಕ್ರಮವನ್ನು ಆರೋಗ್ಯ ನಿರಿಕ್ಷಣಾಧಿಕಾರಿ ಜಗನ್ನಾಥ ನಿರೂಪಿಸಿದರು ಅಂಗನವಾಡಿ ಕಾರ್ಯಕರ್ತೆಯರು ಪ್ರಾರ್ಥನೆ ಆಡಿದರು ಆರೋಗ್ಯ ಸಹಾಯಕಿ ಸುಮನ್ ವಂದಿಸಿದರು; ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಸದಸ್ಯರಾದ ಬಾಳಪ್ಪ ಕೊಡಗಲಿ ನಿಂಗಪ್ಪ ಕುರಿ ಶ್ರೀ ಮತಿ ಖಾಜಾಭೀ ಹುಸೆನಸಾಬ ತಿಪ್ಪವ್ವ ಚಲುವಾದಿ, ಗ್ರಾಮಸ್ಥರಾದ ಕನಕಪ್ಪ ಹುಡೇಜಾಲಿ ಶಂಕರಪ್ಪ ಚಲುವಾದಿ ಹಾಗೂ ಶಾಲಾ ಸಿಬ್ಬಂದಿ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
ವರದಿ – ಅಮಾಜಪ್ಪ ಹೆಚ್.ಜುಮಲಾಪೂರ