ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಲೆಟರ್ಹೆಡ್ ದುರುಪಯೋಗ ಪಡಿಸಿಕೊಳ್ಳುತ್ತಿರುವ ಕಿಡಿಗೇಡಿಗಳು….
ಬೆಂಗಳೂರು : ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ನ ನಕಲಿ ಲೆಟರ್ಹೆಡ್ ಉಪಯೋಗಿಸೊಕೊಂಡು ಕೆಲ ಕಿಡಿಗೇಡಿಗಳು ಗುತ್ತಗೆದಾರರಿಗೆ ಮತ್ತು ಕೆಲವು ಕಚೇರಿಗಳಿಗೆ ಬೆದರಿಕೆ ಹಾಕಿ ಹಣ ವಸೂಲಾತಿಗೆ ಒತ್ತಾಯಿಸುತ್ತಿರುವ ವಿಷಯ ಅಧ್ಯಕ್ಷರ ಗಮನಕ್ಕೆ ಬಂದ ಕಾರಣ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಕಚೇರಿಯಲ್ಲಿ “ಪತ್ರಿಕಾ ಗೋಷ್ಠಿ” ಯನ್ನು ಕರೆಯಲಾಗಿತ್ತು. ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅಧ್ಯಕ್ಷರಾದ ಡಾ. ಟಿ. ಶಿವಕುಮಾರ್ ನಾಗರ ನವಿಲೆಯವರು ಈವರೆಗೂ ಯಾರಿಗೂ ನಾವು ನಮ್ಮ ಸಂಸ್ಥೆಯ ಲೆಟರ್ಹೆಡ್ ನೀಡಿರುವುದಿಲ್ಲ.ಆದರೆ ಇತ್ತೀಚಿಗೆ ಕೆಲ ಕಿಡಿಗೇಡಿಗಳು ನಮ್ಮ ಸಂಸ್ಥೆಯ ನಕಲಿ ಲೆಟರ್ಹೆಡ್ ಉಪಯೋಗಿಕೊಂಡು ಹಣದ ವಸೂಲಾತಿಗೆ ಇಳಿದಿದ್ದಾರೆ. ಮುಂದೆ ಯಾರಿಗಾದರೂ ಈ ರೀತಿ ಬೆದರಿಕೆಗಳು ಬಂದರೆ, ದಾಖಲೆ ಸಮೇತ ನಮ್ಮ ಕಚೆರಿಗೆ ನೀಡಿದ್ದಲ್ಲಿ, ಸೂಕ್ತ ಕ್ರಮ ಕೈಗೊಂಡು ಕಾನೂನಿನ್ವಯ ಶಿಕ್ಷೆಗೆ ಒಳಪಡಿಸಲಾಗುವುದು ಎಂದರು. ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ರಾಜ್ಯ ಸಂಘಟನಾಧಿಕಾರಿ ಡಾ. ಮಂಜುನಾಥ್ ರವರು ಮಾತನಾಡಿ, ನಮ್ಮ ಸಂಸ್ಥೆ ಇಡೀ ರಾಜ್ಯಾದ್ಯಂತ ಹಲವಾರು ಸಾಮಾಜಿಕ ಸೇವೆ ಮಾಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ ಇಂತ ಸಂಸ್ಥೆಯ ಹೆಸರನ್ನು ಹಾಳುಮಾಡುವ ಕುತಂತ್ರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು. ಅನಂತರ ಮಾತನಾಡಿದ ಧನಂಜಯ್ ರವರು ನಮ್ಮ ಸಂಸ್ಥೆಯ ಉದ್ದೇಶ ಅನ್ಯಾಯದ ವಿರುದ್ಧ ಹೋರಾಟವಾಗಿದ್ದು, ಯಾರೇ ಅನ್ಯಾಯ ಮಾಡುವುದು, ಬೆದರಿಕೆ ಹಾಕುವುದು ಕಂಡು ಬಂದರೆ, ತಡಮಾಡದೆ ನಮ್ಮ ಸಂಸ್ಥೆಗೆ ದೂರು ನೀಡಬೇಕಾಗಿ ಮನವಿ ಎಂದರು. ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡ ಎಲ್ಲ ಪದಾಧಿಕಾರಿಗಳು ನಮ್ಮ ಸಂಸ್ಥೆಯ ನಕಲಿ ಲೆಟರ್ ಗೆ ತಾವುಗಳು ಭಯಪಡದೆ ಅಂತಹ ಕಿಡಿಗೇಡಿಗಳಿಗೆ ಬಲಿಯಾಗದೇ ನಮ್ಮ ಕಚೇರಿಗೆ ದೂರ ದಾಖಲಿಸಿ. ನಿಮಗೆ ನ್ಯಾಯ ಒದಗಿಸುವ ಕೆಲಸ ನಾವು ಮಾಡುತ್ತೇವೆ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು. ಈ ಸಂಧರ್ಭದಲ್ಲಿ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಉಪಾಧ್ಯಕ್ಷರಾದ ರವಿಕುಮಾರ್, ಡಾ. ಮಂಜುನಾಥ್, ಅರುಣ್ ಶಿವಾಗ್, ಕಲ್ಪನಾ, ಧನಂಜಯ್, ಮಾಲತೇಶ್, ವಾಸುದೇವ್ ಮತ್ತು ಮಂಜಮ್ಮ ಪಾವಗಡ ಇನ್ನಿತರೇ ಗಣ್ಯರು ಉಪಸ್ಥಿತರಿದ್ದರು.
ವರದಿ – ಅಮಾಜಪ್ಪ ಹೆಚ್.ಜುಮಲಾಪೂರ