ಕೊರೋನ ಸಂಕಷ್ಟದಲ್ಲಿರುವ ಬಡವರಿಗೆ ಡಬ್ಬ ಅಂಗಡಿ ವಿತರಣೆ ಮಾಡಿ ಮಾನವೀಯತೆ ಮೆರೆದ ಆನಂದ್ ಉಳ್ಳಾಗಡ್ಡಿ….

Spread the love

ಕೊರೋನ ಸಂಕಷ್ಟದಲ್ಲಿರುವ ಬಡವರಿಗೆ ಡಬ್ಬ ಅಂಗಡಿ ವಿತರಣೆ ಮಾಡಿ ಮಾನವೀಯತೆ ಮೆರೆದ ಆನಂದ್ ಉಳ್ಳಾಗಡ್ಡಿ….

ಬಸುವರಾಜ್ ಸಿಳ್ಳಿನ ವಕೀಲರು ಪ್ರಾಸ್ತಾವಿಕವಾಗಿ ಮಾತನಾಡಿ ದಿ. ಶಂಕರಗೌಡ ಉಳ್ಳಾಗಡ್ಡಿ ಮತ್ತು ಶಿವಮ್ಮ ಉಳ್ಳಾಗಡ್ಡಿ ಇವರ ಸ್ಮರಣರ್ಥಕವಾಗಿ ಹಾಗೂ ಆನಂದ್ ಉಳ್ಳಾಗಡ್ಡಿ ಅವರ ಹುಟ್ಟುಹಬ್ಬದ ದಿನದಂದು ಪ್ರತಿವರ್ಷದಂತೆ ಈ ವರ್ಷವೂ ಪ್ರತಿಯೊಂದು ಗ್ರಾಮೀಣ ಪ್ರದೇಶಕ್ಕೆ ಭೇಟಿ ನೀಡಿ ಬಡವರಿಗೆ ಡಬ್ಬ ಅಂಗಡಿ ವಿತರಣೆ ಮಾಡಿ ಮಾನವೀಯತೆ ಮೆರೆದರು ಹೇಳಿದರು. ಯಲಬುರ್ಗಾ ತಾಲ್ಲೂಕಿನ ಮುಧೋಳ ಗ್ರಾಮದಲ್ಲಿ ತಾಲೂಕಿನ ವಕೀಲರ ಸಂಘದ ಅಧ್ಯಕ್ಷರಾದ ಆನಂದ ಉಳ್ಳಾಗಡ್ಡಿ ಯವರು ಕಾರ್ಯಕ್ರಮ ಹಮ್ಮಿಕೊಂಡಿದ್ದರು ಕೊರೋನ ಅನ್ನೋ ಮಹಾಮಾರಿಯಿಂದ  ಸಿಲುಕಿರುವ  ಬಡ ಕುಟುಂಬದ ಬಸವ ರಾಜ್ ಕುಮಾರ್ ಇವರಿಗೆ ಡಬ್ಬ ಅಂಗಡಿ ವಿತರಣೆ ಮಾಡಿದರು.  ನಂತರ ಕುದರಿಮೋತಿ ಗ್ರಾಮದ ಸಂಸ್ಥಾನ ಮೈಸೂರು ಮಠದ ವಿಜಯ ಮಹಾಂತ ಸ್ವಾಮೀಜಿಯವರು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ ಮಾತನಾಡಿ.  ಕಾಯಕವೇ ಕೈಲಾಸ ಸಿದ್ದಾಂತ ಮೈಗೂಡಿಸಿಕೊಂಡು ಬದುಕಿದ್ದರೆ ಮಾನವ ಜನ್ಮ ಸಾರ್ಥಕವಾಗುತ್ತದೆ ಅಂಥವರಲ್ಲಿ ಉಳಾಗಡ್ಡಿ ಮನೆತನದ ಆನಂದ್ ಉಳ್ಳಾಗಡ್ಡಿ ಯವರು ಚಿಕ್ಕವಯಸ್ಸಿನಲ್ಲಿ ಬಡವರ ಬಗ್ಗೆ ಕಾಳಜಿ ಇರುವ ಕಾಳಜಿ ನಿಜಕ್ಕೂ ಮೆಚ್ಚಲೇಬೇಕು ಎಂದು ಮಾತನಾಡಿದರು. ತಾಲ್ಲೂಕ ವಕೀಲರ ಸಂಘದ ಅಧ್ಯಕ್ಷ ಯುವ ಮುಖಂಡರಾದ ಆನಂದ್ ಉಳ್ಳಾಗಡ್ಡಿ ಅವರು ಮಾತನಾಡಿ ಕೊರೋನ ಎರಡನೇ ಅಲೆಯಿಂದ ಸಾಕಷ್ಟು ಬಡ ಕುಟುಂಬಗಳು ಅಸಂಘಟಿತ ಕಾರ್ಮಿಕರು ಬಡಕುಟುಂಬಗಳಿಗೆ ಲಾಕ್ಡೌನ್  ಸಂದರ್ಭದಲ್ಲಿ ಜೀವನ ನೆಡಸಲು ತುಂಬಾ ಕಷ್ಟಕರವಾಗಿದೆ ಇಂಥ ಕಠಿಣ ಪರಿಸ್ಥಿತಿಯಲ್ಲಿ ಬಡಕುಟುಂಬಕ್ಕೆ ಸಹಾಯಮಾಡುವ ಧರ್ಮ ನಮ್ಮದಾಗಬೇಕು ಕಳೆದ ವರ್ಷ ಕೊರೋನ ಮೊದಲ ನೇ ಅಲೆ ಸಂದರ್ಭದಲ್ಲಿ ತಳ್ಳುಗಾಡಿಗಳನ್ನು ಬಡಕುಟುಂಬಗಳಿಗೆ ಜೀವನದ ಸಲು ಉಚಿತವಾಗಿ ನೀಡಲಾಗಿತ್ತು ಅದರಂತೆ ಈ ವರ್ಷ ಕೂಡ ಬಡಕುಟುಂಬಕ್ಕೆ ಮತ್ತೆ ಡಬ್ಬ ಅಂಗಡಿಗಳನ್ನು ನೀಡುವ ಮೂಲಕ ಇಂತಹ ಬಡಕುಟುಂಬಕ್ಕೆ ನನ್ನ ಕೈಲಾದಷ್ಟು ಸಹಾಯ ಮಾಡಿದ್ದೇನೆ ನೆಂದು ಅವರ ಜೀವನಮಟ್ಟ ಸುಧಾರಿಸಿಕೊಳ್ಳುವಲ್ಲಿ ಸಾಧ್ಯವಾಗುತ್ತದೆ ಎಂದು ಮಾತನಾಡಿದರು. ಇಮಾಮ್ ಮೋತೆಖಾನ್ ಗೆಳೆಯರ ಬಳಗ ಮತ್ತು ಚೆತ್ರಪ್ಪ ಛಲವಾದಿ ಎರಡು ಕೇಕುಗಳನ್ನು ತಂದು ಆನಂದ ಉಳಾಗಡ್ಡಿ ಅವರಿಂದ ಕೇಕ್ ಕತ್ತರಿಸಿ ಎಲ್ಲರಿಗೂ ಸಿಹಿ ಅಂಚಿದರು.  ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಹೇಮರೆಡ್ಡಿ ರೆಡ್ಡೇರ. ಚಂದ್ರು ದೇಸಾಯಿ. ಕಳಕಪ್ಪ ಕುರಿ. ಮಾಜಿ ಗ್ರಾಮ ಪಂ ಅಧ್ಯಕ್ಷ ಶರಣಪ್ಪ ಹಿರೇಹಳ. ಹುಸೇನ್ ಹಿರೇಮನಿ ವಕೀಲರು. ಛತ್ರಪ್ಪ ಚೆಲುವಾದಿ. ಬಸುವರಾಜ್ ಪುರತಗೇರಿ. ಉಮೇಶ್ ಹವಳದ. ಗ್ರಾಮ ಸರ್ ಪಂಚಾಯಿತಿ ಸದಸ್ಯರಾದ ಬಸಪ್ಪ ಅಕ್ಕಿ. ಖಾದರ್ ಭಾಷಾ ತೋಳಗಲ್. ಹುಸೇನ್ ಹಿರೇಮನಿ. ಭಾಷಸಾಬ್ ಆರಬಳ್ಳಿನ್. ಇನ್ನು ಹಲವಾರು ಉಪಸ್ಥಿತರು ಭಾಗಿಯಾಗಿದ್ದರು.

ವರದಿ – ಹುಸೇನಭಾಷ ಮೋತೆಖಾನ್

Leave a Reply

Your email address will not be published. Required fields are marked *