ನಟ ದರ್ಶನ್ ಕರ್ನಾಟಕ ಕೃಷಿ ಇಲಾಖೆಯ ರಾಯಭಾರಿಯಾಗಿ ನೇಮಕ

Spread the love

ನಟ ದರ್ಶನ್ ಕರ್ನಾಟಕ ಕೃಷಿ ಇಲಾಖೆಯ ರಾಯಭಾರಿಯಾಗಿ ನೇಮಕ

ಬೆಂಗಳೂರು (16/02/2021) : ಸ್ಯಾಂಡಲ್ ವುಡ್ ನಟ ದರ್ಶನ್ ಅವರನ್ನು ಸರ್ಕಾರದ ಕೃಷಿ ಇಲಾಖೆಯ ರಾಯಭಾರಿಯಾಗಿ ಕರ್ನಾಟಕ ಸರ್ಕಾರ ನೇಮಿಸಿದೆ. ದರ್ಶನ್​ ಯಾವುದೇ ಸಂಭಾವನೆ ಪಡೆಯದೆ ಈ ಜವಾಬ್ದಾರಿ ವಹಿಸಿಕೊಳ್ಳಲು ಒಪ್ಪಿಕೊಂಡಿದ್ದಾರೆ ಎಂದು ಕೃಷಿ ಇಲಾಖೆ ಪ್ರಕಟಣೆ ಹೊರಡಿಸಿದೆ. ನಟ ದರ್ಶನ್ ಕೃಷಿ ಇಲಾಖೆಯ ಕಾರ್ಯಕ್ರಮಗಳು ಮತ್ತು ಯೋಜನೆಗಳನ್ನು ಉತ್ತೇಜಿಸುತ್ತಾರೆ ಮತ್ತು ರೈತರಲ್ಲಿ ಭರವಸೆಯನ್ನು ಹುಟ್ಟುಹಾಕುತ್ತಾರೆ ಎಂದು ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ. 2014 ರಲ್ಲಿ ನಟರಾದ ಪುನೀತ್ ರಾಜ್‌ಕುಮಾರ್ ಮತ್ತು ರಾಧಿಕಾ ಪಂಡಿತ್ ಅವರು ಶಿಕ್ಷಣ ಹಕ್ಕಿನ (ಆರ್‌ಟಿಇ) ರಾಯಭಾರಿಗಳಾಗಿದ್ದರು. ಇತ್ತೀಚೆಗೆ ಪುನೀತ್ ಅವರನ್ನು ಹಿಂದುಳಿದ ಚಾಮರಾಜನಗರ ಜಿಲ್ಲೆಯ ‘ಅಭಿವೃದ್ಧಿ ರಾಯಭಾರಿ’ ಆಗಿ ನೇಮಕ ಮಾಡಲಾಗಿತ್ತು.

Leave a Reply

Your email address will not be published. Required fields are marked *