ಚಂದ್ರಜೀತ ಪವಾರ ಅವರಿಗೆ ದೇಣಿಗೆ ರೂಪದಲ್ಲಿ ಆಮ್ಲಜನಕ ಮಶೀನ ನೀಡಿ ಮಾನವೀಯತೆ ಮೆರೆದ,,,,
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮದಭಾವಿ ಗ್ರಾಮದ ಜನ ಸೇವಾ ಅರೋಗ್ಯ ಕೇಂದ್ರ ಆಸ್ಪತ್ರೆಗೆ ಕರೋನ ಮಹಾಮಾರಿ ರೋಗಕ್ಕೆ ತುತ್ತಾಗಿರುವ ಜನರಿಗೆ ಆಮ್ಲಜನಕ ತೊಂದರೆ ಅನುಭವಿಸುತ್ತಿರುವ ಜನರಿಗೆ ಅನುಕೂಲ ಆಗುವ ಹಾಗೂ 3 ನೇ ಅಲೆ ರೋಗದ ದೃಷ್ಟಿಯಿಂದ ಮದಭಾವಿ ಗ್ರಾಮದ ಆರ್ಯ ಆರ್ಗ್ಯಾನಿಕ ಸೊಸೈಟಿಯ ಅಧ್ಯಕ್ಷರಾದ ಮನಸೂರಅಲಿ ಶೇಖ ಅವರು ವಯಕ್ತಿಕವಾಗಿ ಆಮ್ಲಜನಕ ಮಶೀನ ವನ್ನು ವೈದ್ಯರಾದ ಚಂದ್ರಜೀತ ಪವಾರ ಅವರಿಗೆ ದೇಣಿಗೆ ರೂಪದಲ್ಲಿ ನೀಡಿ ಮಾನವೀಯತೆ ಮೆರೆದಿದ್ದಾರೆ.ಈ ಸಂದರ್ಭದಲ್ಲಿ ಸತ್ಕರಿಸಲಾಯಿತು.ಕಾರ್ಯಕ್ರಮದಲ್ಲಿ ಆರ್ಯ ಆರ್ಗ್ಯಾನಿಕ ಸೊಸೈಟಿ ಪ್ರಧಾನ ಕಾರ್ಯದರ್ಶಿ ಪ್ರವೀಣ ನಾಯಿಕ ,ಎಸ್ ಡಿ ಎಂ ಸಿ ಉಪಾಧ್ಯಕ್ಷ ಮಹಾದೇವ ನಾಯಿಕ ,ಯುವ ಮುಖಂಡರಾದ ರಾಮು ಮಗದುಮ್ಮ ,ಶರದ ಶೆಟ್ಟಿ ,ಸಂಜಯ ಪೂಜಾರಿ ಹಾಗೂ ಮುಂತಾದವರು ಉಪಸ್ಥಿತರಿದ್ದರು.
ವರದಿ – ಮಹೇಶ ಶರ್ಮಾ