ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿಗೆ ಅವಕಾಶ…..

Spread the love

ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿಗೆ ಅವಕಾಶ…..

ಕೊಪ್ಪಳ, ಜು.07 (ಕರ್ನಾಟಕ ವಾರ್ತೆ): ರಾಜ್ಯ ಚುನಾವಣಾ ಆಯೋಗವು ಮುಂಬರುವ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯತಿಗಳ ಸಾರ್ವತ್ರಿಕ ಚುನಾವಣೆ-2021 ರ ಸಂಬAಧ ಕೊಪ್ಪಳ ತಾಲ್ಲೂಕಿನ 9 ಜಿಲ್ಲಾ ಪಂಚಾಯತಿ ಹಾಗೂ 24 ತಾಲ್ಲೂಕು ಪಂಚಾಯತಿ ಮೀಸಲಾತಿ ಕ್ಷೇತ್ರಗಳ ಕರಡು ಅಧಿಸೂಚನೆ ಹೊರಡಿಸಿದೆ.  ಅದರಂತೆ ಕೊಪ್ಪಳ ತಾಲ್ಲೂಕಿನ ನಗರ ಪ್ರದೇಶದಲ್ಲಿ ವಾಸವಿರುವ ಮತದಾರರು ಹೊಂದಿರುವ ಗುರುತಿನ ಚೀಟಿ ಹಾಗೂ ಈಗಾಗಲೇ ಚುನಾವಣಾ ಆಯೋಗದಿಂದ ಹೊರಡಿಸಲಾದ ಅಂತಿಮ ಮತದಾರರ ಪಟ್ಟಿಯಲ್ಲಿ ಹೆಸರು ನಮೂದಾಗಿದ್ದು ಇರುತ್ತದೆ. ಅದರೆ ಗ್ರಾಮೀಣ ಪ್ರದೇಶದಲ್ಲಿ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ನಗರ ಪ್ರದೇಶದಿಂದ ಗ್ರಾಮೀಣ ಪ್ರದೇಶಕ್ಕೆ ಆನ್‌ಲೈನ್ ಮುಖಾಂತರವಾಗಲೀ, ಸೂಕ್ತ ದಾಖಲೆಗಳೊಂದಿಗೆ ತಹಶೀಲ್ ಕಛೇರಿ, ನಾಡ ಕಛೇರಿ, ಗ್ರಾಮ ಲೆಕ್ಕಾಧಿಕಾರಿಗಳ ಕಛೇರಿಯಲ್ಲಿ ನಮೂನೆ-6, ಸ್ಥಳಾಂತರ, ಡಬಲ್, ಮರಣ, ಕಾರಣಕ್ಕಾಗಿ ನಮೂನೆ-7,  ತಿದ್ದುಪಡಿ ಮಾಡಲು ನಮೂನೆ-8 ಮತ್ತು ವರ್ಗಾವಣೆಗಾಗಿ ನಮೂನೆ-8ಎ ಭರ್ತಿ ಮಾಡಿ ನೀಡಿದಲ್ಲಿ, ನಿರಂತರ ಪರಿಷ್ಕರಣೆಗೆ ಅವಕಾಶ ಇರುವುದರಿಂದ ಹೆಸರು ಸೇರ್ಪಡೆ, ತಿದ್ದುಪಡಿ ಮಾಡಬಹುದು. ಆದ್ದರಿಂದ 18-21 ವರ್ಷದ ಯುವ ಮತದಾರರು ಕಡ್ಡಾಯವಾಗಿ ತಂದೆ/ತಾಯಿಯ ಗುರುತಿನ ಚೀಟಿ, ಅರ್ಜಿದಾರರ ಶಾಲಾ ವರ್ಗಾವಣೆ ಪ್ರಮಾಣ ಪತ್ರ ಅಥವಾ ಅಂಕಪಟ್ಟಿ, ಆಧಾರ್ ಝರಾಕ್ಸ್ ಪ್ರತಿ ಹಾಗೂ ಇತ್ತೀಚಿನ ಕಲರ್ ಭಾವಚಿತ್ರ, 21 ವರ್ಷ ಮೇಲ್ಪಟ್ಟ ಮತದಾರರು ಕಡ್ಡಾಯವಾಗಿ ಕುಟುಂಬ ಸದಸ್ಯರೊಬ್ಬರ ಗುರುತಿನ ಚೀಟಿ, ಅರ್ಜಿದಾರರ ಆಧಾರ್ ಕಾರ್ಡ, ಇತ್ತೀಚಿನ ಕಲರ್ ಭಾವಚಿತ್ರ, ವಾಸ ಇರುವ ಬಗ್ಗೆ ದೃಢೀಕರಣ ಪತ್ರ, ಇನ್ನುಳಿದ ಮತದಾರರು ಕಡ್ಡಾಯವಾಗಿ ಕುಟುಂಬ ಸದಸ್ಯರೊಬ್ಬರ ಗುರುತಿನ ಚೀಟಿ, ಅರ್ಜಿದಾರರ ಆಧಾರ್ ಕಾರ್ಡ್, ಇತ್ತೀಚಿನ ಕಲರ್ ಭಾವಚಿತ್ರ, ವಾಸ ಇರುವ ಬಗ್ಗೆ ದೃಢೀಕರಣ ಪತ್ರ ಹಾಗೂ ಈ ಮೊದಲು ವಾಸವಿರುವ ವಿಧಾನಸಭಾ ಕ್ಷೇತ್ರದಿಂದ ನಮೂನೆ-7 ರ ಸ್ವೀಕೃತಿ ಪ್ರತಿಗಳೊಂದಿಗೆ ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಹಾಗೂ ನಗರ ಪ್ರದೇಶದಿಂದ ಗ್ರಾಮೀಣ ಪ್ರದೇಶಕ್ಕೆ ಸ್ಥಳಾಂತರ ಗೊಳಿಸಬೇಕಾದಲ್ಲಿ ಅಂತಹವರು ಸೂಕ್ತ ಕಾರಣಗಳನ್ನು ನಮೂದಿಸಿ ನಮೂನೆ-6 ರೊಂದಿಗೆ ದಾಖಲೆಗಳನ್ನು ಸಲ್ಲಿಸತಕ್ಕದ್ದು. ಸಲ್ಲಿಸಿದ ಎಲ್ಲಾ ದಾಖಲೆಗಳ ಪರಿಶೀಲನಾ ಸಮಯದಲ್ಲಿ ಯಾವುದೇ ಸುಳ್ಳು ಮಾಹಿತಿ ಹಾಗೂ ದಾಖಲೆಗಳನ್ನು ನೀಡಿರುವುದು ಕಂಡುಬAದಲ್ಲಿ ಅಂತಹವರ ವಿರುದ್ಧ ಸಂಬAಧಪಟ್ಟ ಪೊಲೀಸ್ ಠಾಣೆಯಲ್ಲಿ ಚುನಾವಣಾ ಆಯೋಗದ ನಿಯಮಾವಳಿಗಳನ್ವಯ ದೂರು ದಾಖಲಿಸಲಾಗುವುದು ಎಂದು ಕೊಪ್ಪಳ ತಹಶೀಲ್ದಾರ ಅಮರೇಶ ಬಿರಾದಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 ವರದಿ – ಸಂಪಾದಕೀಯ

Leave a Reply

Your email address will not be published. Required fields are marked *