ಅನಂತಕುಮಾರ್ ಪ್ರತಿಷ್ಠಾನದ ವತಿಯಿಂದ ಭಾರತೀಯ ಔಷಧ ವಲಯದ ಸಮಸ್ಯೆಗಳೂ ಹಾಗೂ ಅವಕಾಶಗಳ ಬಗ್ಗೆ ವೆಬಿನಾರ್..
ಬೆಂಗಳೂರು ಜುಲೈ 09: ಅನಂತಕುಮಾರ್ ಪ್ರತಿಷ್ಠಾನದ “ದೇಶ ಮೊದಲು” ವೆಬಿನಾರ್ ಸರಣಿಯ 6 ಕಂತಿನಲ್ಲಿ ಭಾರತೀಯ ಔಷದ ವಲಯ ಎದುರಿಸುತ್ತಿರುವ ಸವಾಲುಗಳು ಹಾಗೂ ಅವಕಾಶಗಳ ಬಗ್ಗೆ ನಾಳೆ (ಶನಿವಾರ ಜುಲೈ 09,2021) ರಂದು ಸಂಜೆ 4 ಗಂಟೆಗೆ ವೆಬಿನಾರನ್ನು ಆಯೋಜಿಸಲಾಗಿದೆ. ಕರೋನಾ ಸಾಂಕ್ರಾಮಿಕದಿಂದ ಔಷದ ವಲಯ – ಔಷಧ ಮತ್ತು ಲಸಿಕೆ ಎರಡರ ಜೊತೆಗೆ ಸಂಪೂರ್ಣ ಆರೋಗ್ಯ ಕ್ಷೇತ್ರದ ಬಗ್ಗೆ ಬಹಳಷ್ಟು ಚರ್ಚೆಗಳು ನಡೆಯುತ್ತಿವೆ. ಅಲ್ಲದೆ, ಭಾರತ ದೇಶದವನ್ನು ವಿಶ್ವದ ಔಷಧಾಲಯ ಎಂದು ಕರೆಯಲಾಗುತ್ತಿದ್ದು, ನಮ್ಮ ದೇಶದ ಸಾಮರ್ಥ್ಯವೇನು? ಸಮಸ್ಯೆಗಳು ಹಾಗೂ ಅವಕಾಶಗಳೇನು ಎಂಬುದರ ಬಗ್ಗೆ ದೇಶದ ಔಷಧ ಕ್ಷೇತ್ರದ ಪ್ರಮುಖರಾದ ರೆಡ್ಡಿ ಲ್ಯಾಬೋರೇಟರಿ ಸಿಇಓ (ಏಪಿಐ ಮತ್ತು ಸರ್ವೀಸಸ್), ಐಕ್ಯೂಜಿಇಎನ್-ಎಕ್ಸ್ ಫಾರ್ಮಾ ಪ್ರೈ ಲಿಮಿಟೆಡ್‌ನ ಅಧ್ಯಕ್ಷರು ಹಾಗೂ ಸಿಇಓ ಮಂದರ್ ಕೊಡಗುಲೆ ತಮ್ಮ ವಿಚಾರಗಳನ್ನು ಹಂಚಿಕೊಳ್ಳಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮತ್ತು ಹೆಚ್ಚಿನ ಮಾಹಿತಿಗಾಗಿ 8884182415 ಗೆ ಸಂಫರ್ಕಿಸಬಹುದಾಗಿದೆ.
ವರದಿ – ಹರೀಶ ಶೇಟ್ಟಿ ಬೆಂಗಳೂರು