” ಭ್ರಷ್ಟಾಚಾರದ ಕೂಪವಾಗಿರುವ  ವ್ಯವಸ್ಥೆಗಳನ್ನು ಹೊಡೆದೋಡಿಸಿ”..!!

Spread the love

” ಭ್ರಷ್ಟಾಚಾರದ ಕೂಪವಾಗಿರುವ  ವ್ಯವಸ್ಥೆಗಳನ್ನು ಹೊಡೆದೋಡಿಸಿ”..!!

—————————–

ಪ್ರಜಾಪ್ರಭುತ್ವದಲ್ಲಿ..

ಪ್ರಜಗಳೇ ಪ್ರಭುಗಳು..!

ಪ್ರಭುತ್ವವು ದಕ್ಕಿದಾಗ ಚಲ್ಲಾಪಿಲ್ಲಿಯಾಗುವರು ಪ್ರಜೆಗಳು..!

ಕಾರಣ…?

ಭ್ರಷ್ಟಾಚಾರದಲ್ಲಿ ಹುಟ್ಟಿ..! ಭ್ರಷ್ಟಾಚಾರದಲ್ಲಿ ಬೆಳೆದು..!

ಭ್ರಷ್ಟಾಚಾರದಲ್ಲೇ ಅಂತ್ಯವಾಗುವ ಅಧಿಕಾರವೇ ಪ್ರಜರಾಜ್ಯ.. !!

ಅದುವೇ..??

“ಪ್ರಜಾಪ್ರಭುತ್ವ”..!!

ಇಂತಹ…..

ಭ್ರಷ್ಟಾಚಾರವನ್ನು ತುಂಬು ಹೃದಯದಿಂದ ಪೋಷಿಸುವ..!

ಸಮಾನತೆ ಮನಸ್ಸಿನ ಉತ್ತಮ ಸಮಾಜದ ಸತ್ಪ್ರಜೆಗಳು ನಾವು..!!

ಹಣ… ಹೆಂಡ..ಖಂಡ ಹಂಚಿ ಲಂಚದ ಮಂಚದಲ್ಲಿ ಅಧಿಕಾರ ಪಡೆದು ಕೊಳ್ಳುವ ನಯವಂಚಕರಿಂದ ಸೃಷ್ಟಿಯಾಗುವ..!

ಅಧಿಕಾರದ ಅರಮನೆಯಂತಿರುವ ಈ  ಉತ್ತಮ ಸಮಾಜದ ಸತ್ಪ್ರಜೆಗಳು ನಾವು..!!

ಚುನಾವಣೆ ಸಂದರ್ಭದಲ್ಲಿ..!

ಊರು ಉದ್ದಾರ ಮಾಡುವವರಿಗಿಂತ..!

ಮತದಾರರ ಮನವ ತಣಿಸುವ ಹಣವನ್ನು ಹೊಂದಿದ “ಅನಕ್ಷರಸ್ಥ ಅಜ್ಞಾನಿಯೇ ಮೇಲು”..!

ಪ್ರತಿನಿಧಿಗಳನ್ನು ಕೂಡಿಸಿ..ಕಳೆದು..ಗುಣಿಸಿ..ಭಾಗಿಸುವರು..ಹಣಗುಣಗಳನ್ನೆಲ್ಲಾ  ಓಟು ಹಾಕುವ ನೆಪದಲ್ಲಿ..!

ಖಂಡ ತುಂಡಿನ ಬಾಯಿ ರುಚಿಗೆ..!

ಹೆಂಡ..ಹಣದ ಆಸೆಗೆ… !

ಓಡಾಡುವರು ಜನಪ್ರತಿನಿಧಿಗಳನ್ನು ಆರಿಸಲು.. !

ಯಾರು ಹೆಚ್ಚು ಕೊಡುವರೋ ಎಂಬ ಲೆಕ್ಕಚಾರವು ಇರಳು ಹಗಲು…!

ಇಂತಹ ಅನೇಕ ಭ್ರಷ್ಟಾಚಾರದ ಕೂಪವಾಗಿರುವ ಈ    ವ್ಯವಸ್ಥೆಗಳನ್ನು ಹೊಡೆದೋಡಿಸಿ..!!

ಬಡವರನ್ನು ಉದ್ದಾರ ಮಾಡುವಂತಹ ಪ್ರಜೆಗಳದೇ ಆದ “ಪ್ರಜರಾಜ್ಯ”ದಲ್ಲಿ “ಉತ್ತಮ ಸಮಾಜವನ್ನು ನಿರ್ಮಿಸುವ  ಸತ್ಪ್ರಜೆಗಳು ನಾವಾಗಬೇಕು” ..!!

 

✍️ ಹನುಮಂತಪ್ಪ.. ಕಿಡದೂರು @  ನಾರಿನಾಳ

Leave a Reply

Your email address will not be published. Required fields are marked *