ವಿಜಯನಗರ:ಬಳ್ಳಾರಿ: ಜಿಲ್ಲಾಧಿಕಾರಿಗಳ  ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ್ ಮುಂದೆಯೇ  ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ಕೈ ಕೈ ಮಿಲಾಯಿಸಿದ ಘಟನೆ‌..

Spread the love

ವಿಜಯನಗರ:ಬಳ್ಳಾರಿ: ಜಿಲ್ಲಾಧಿಕಾರಿಗಳ  ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ್ ಮುಂದೆಯೇ  ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ಕೈ ಕೈ ಮಿಲಾಯಿಸಿದ ಘಟನೆ‌..

ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಕುಮಾರನಹಳ್ಳಿ ತಾಂಡದಲ್ಲಿ ನಡೆದ ಘಟನೆಯಾಗಿದೆ. ಕುಮಾರನಹಳ್ಳಿ ತಾಂಡದಲ್ಲಿ ಜುಲೈ.07 ರಂದು ಸುರಿದ ಬಾರಿ ಗಾಳಿ ಮಳೆಗೆ ಹಾನಿಯಾದ 30 ಕ್ಕೂ ಹೆಚ್ಚು ಮನೆಗಳ ವೀಕ್ಷಣೆಗೆ ಬಳ್ಳಾರಿ ಜಿಲ್ಲಾಧಿಕಾರಿ ಪವನ್‌ಕುಮಾರ್ ಮಾಲಪಾಟಿ ಬಂದಿದ್ದರು. ಈ ವೇಳೆ ಜಿಲ್ಲಾಧಿಕಾರಿಗಳ ಜತೆ ಹೂವಿನಹಡಗಲಿ ಶಾಸಕ ಪಿ.ಟಿ ಪರಮೇಶ್ವರ್ ನಾಯ್ಕ್ ಸಹ ಆಗಮಿಸಿದ್ದರು. ಮಳೆಗೆ ಹಾನಿಯಾಗಿದ್ದ ಹೊಲ ಗದ್ದೆಗಳಿಗೆ ಭೇಟಿ ನೀಡುವ ವಿಷಯಕ್ಕೆ ಸಂಬಂದಿಸಿದಂತೆ ರೈತರು ಶಾಸಕರ ಬೆಂಬಲಿಗರ ಹೊಲಕ್ಕೆ ಬೇಟಿ ನೀಡಲ್ಲ ಎನ್ನುವ ಕಾರಣಕ್ಕೆ ಮರಾಮಾರಿ ನಡೆದಿದೆ ಎನ್ನಲಾಗುತ್ತಿದೆ. ಜಿಲ್ಲಾಧಿಕಾರಿಗಳ ಮುಂದೆಯೇ ಗಲಾಟ ನಡೆಯುತ್ತಿದ್ದರೂ ಪೊಲಿಸ್ ಸಿಬ್ಬಂದಿಗಳು ಸುಮ್ನೆ ನೊಡುತ್ತಾ ನಿಂತಿದ್ದರು. ಸ್ವತಃ ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿಯವರ ಮುಂದಯೇ ಗಲಾಟೆ ನಡೆಯಿತು. ಇದೇ ಸಂದರ್ಭದಲ್ಲಿ ಶಾಸಕರು ಸಹ ಇದ್ದರೂ ಏನು ಮಾಡದೇ ನಿಂತಿದ್ದರು. ಮತ್ತೆ ಗಲಾಟೆಯಾಗುವುದನ್ನ ಡಿಸಿ ನೋಡುಬೆಕೆನ್ನುಷ್ಟರಲ್ಲಿ ಅಲ್ಲಿನ ಸ್ಥಳೀಯರು ಸಾರ್ ನೀವು ಹೋಗಿ ಸಾರ್ ಇದು ಇಷ್ಟೆ ಇದ್ದದ್ದು ಅಂತ ಹೇಳಿ ಡಿಸಿಯವರನ್ನ ಕಾರ್ ನಲ್ಲಿ ಹತ್ತಿ ಕಳಿಸಿದರು. ಜಿಲ್ಲಾಧಿಕಾರಿ ಗ್ರಾಮದಿಂದ ಹೊರಟು ಹೋದ ನಂತರ ಮತ್ತೆ ಗಲಾಟೆ ಪ್ರಾರಂಭವಾಗಿದೆ. ಶಾಸಕ ಪಿ.ಟಿ ಪರಮೇಶ್ವರ ನಾಯ್ಕ್ ರ ಬೆಂಬಲಿಗರಿಂದ ಹಲ್ಲೆ ಮಾಡಿದ್ದಾರೆ ಅನ್ನುವ ಆರೋಪ ಕೇಳಿ ಬರುತ್ತಿದೆ. ಶಾಸಕರು ನಂತರ ಗ್ರಾಮದಿಂದ ಹೊರಟರು. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿರುವುದನ್ನು ಅರಿತ ಪೊಲೀಸರು ತಿಳಿ ಮಾಡಿದರು. ಪಿ.ಟಿ ಪರಮೇಶ್ವರ ನಾಯ್ಕ್ ಬೆಂಬಲಿಗರಿಂದ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ವ್ಯಕ್ತಿ ದೂರು ನೀಡಿದ್ದಾನೆ. ಆರು ಜನರ ವಿರುದ್ದ ಹೂವಿನ ಹಡಗಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ. ನಿನ್ನೆ ನಡೆದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ  ವೈರಲ್.

ವರದಿ – ಚಲುವಾದಿ ಅಣ್ಣಪ್ಪ

Leave a Reply

Your email address will not be published. Required fields are marked *