ಕವನದ ಶೀರ್ಷಿಕೆ :  ಭಕ್ತ ಕನಕದಾಸ…..

Spread the love

ಕವನದ ಶೀರ್ಷಿಕೆ :  ಭಕ್ತ ಕನಕದಾಸ…..

ಕೀರ್ತನೆ,ಪ್ರವಚನೆ ಹೇಳುತ್ತಾ, ಪ್ರಾಮಾಣಿಕತೆಯ ಬೀಜವ ಬಿತ್ತಿ,ಸೌಹಾರ್ದತೆಯ ಸೌಧ ಕಟ್ಟಿ,ಸತ್ಯ ತತ್ವದ ಸೇವಕರಾಗಿ, ಭಕ್ತಿಯ ಸನ್ಮಾರ್ಗದ ಪ್ರೇರಕ,ಸರ್ವಜನಾಂಗದ ಕಿಂಕರ,  ದಾಸರಲ್ಲಿಯೇ ಸರ್ವ ಶ್ರೇಷ್ಠ ಭಕ್ತ ಕನಕದಾಸರ ಪಾದಗಳಿಗೆ ಕೋಟಿ ಕೋಟಿ ಶರಣು ಶರಣಾರ್ಥಿ. ಭಕ್ತಿಯ ಬಂಡಾರಿ,ಸರ್ವಧರ್ಮ ಸಮನ್ವಯತೆಯ ಪ್ರತಿಪಾದಕ, ಸಕಲರಿಗೂ ಲೇಸನ್ನೇ ಬಯಸಿದ ಧೀಮಂತ, ಮಾನವೀಯ ಗುಣಗಳನ್ನು ಸರ್ವರಿಗೂ ಬೋಧಿಸಿದ ಬೊಧಕ,ನಿಸ್ವಾರ್ಥ ಭಕ್ತಿಯೇ ಜ್ಞಾನಕ್ಕೆ ಮೂಲ ಎಂದ ದಾಸರ ದಾಸ ಭಕ್ತ ಕನಕದಾಸರ ಪಾದಗಳಿಗೆ ಕೋಟಿ ಕೋಟಿ ಶರಣು ಶರಣಾರ್ಥಿ. ಜಾತಿ ಮತ ಪಂಥಗಳನ್ನು ಬದಿಗೊತ್ತಿ, ಸಮಾನತೆಯ ಸಂದೇಶಗಳು ಸಾರಿದ ಸಾಧಕ,ಭಕ್ತಿ ತತ್ವ ಮೌಲ್ಯಗಳನ್ನು ಬೋಧಿಸಿದ ಸಂತ. ಅಜ್ಞಾನವನ್ನು ಅಳಸಿ, ಸುಜ್ಞಾನವನ್ನು ಬಿತ್ತಿದ ಕರುಣಾಮಯಿ ದಾಸರ ತಿಲಕ, ಭಕ್ತ ಕನಕದಾಸರ ಪಾದಗಳಿಗೆ ಕೋಟಿ ಕೋಟಿ ಶರಣು ಶರಣಾರ್ಥಿ. ಮಮತೆ ಜ್ಯೋತಿ ಸರ್ವರಲ್ಲಿಯೂ ಹಚ್ಚಿದ ಕರುಣಾಮೂರ್ತಿ ಕಿಂಕರ.ಇವನಾರವ ಇವನಾರವ ಎನ್ನದೆ, ಇವನಮ್ಮವ ಇವನಮ್ಮವ ಎನ್ನುವ ನೀತಿಯ ಪಾಠವ ಸರ್ವರಿಗೂ ಉಣಬಡಿಸಿದ ಸಂತರ ಸಂತ ,ಮಾಹಾ ಸಂತ, ಭಕ್ತ ಕನಕದಾಸರ ಪಾದಗಳಿಗೆ ಕೋಟಿ ಕೋಟಿ ಶರಣು ಶರಣಾರ್ಥಿ.

ರಚನೆ: ಸಂಗಮೇಶ್ ಎನ್ ಜವಾದಿ

Leave a Reply

Your email address will not be published. Required fields are marked *