ಬೆಳೆಯುವ  ಸಿರಿ ಮೊಳಕೆಯಲ್ಲಿ ಕು. ಅಥರ್ವ

Spread the love

ಲೇಖನ – ಬೆಳೆಯುವ  ಸಿರಿ ಮೊಳಕೆಯಲ್ಲಿ ಕು. ಅಥರ್ವ

ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ನಾಣ್ಣುಡಿಯಂತೆ ಪ್ರತಿಭೆ ಅನಾವರಣಗೊಳ್ಳುವುದು ಶೇಷಾವಸ್ಥೆಯಲ್ಲಿ ಕಲಿಕೆಗೆ ವಯಸ್ಸಿನ ಭೇದ- ಭಾವವಿಲ್ಲ ಅದಕ್ಕೆ ಬೇಕಾಗಿರುವುದು ಅಭಿರುಚಿ ಮತ್ತು ಆಸಕ್ತಿ. ಹಾಗಾಗಿ ಆಸಕ್ತಿಯ ಜೊತೆಗೆ ಪ್ರಯತ್ನ, ನಿಷ್ಠೆ, ಪ್ರಮಾಣಿಕತೆ ಮೈಗೂಡಿಸಿಕೊಂಡರೆ ಎಂತಹ ಅದ್ಭುತವಾದ

ಸಾಧನೆಯನ್ನು ಮಾಡಬಹುದು ಎನ್ನುವುದಕ್ಕೆ ನಮಗೆ ತಾಜಾ ಉದಾಹರಣೆಯಾಗಿ ನಮ್ಮ ಕಣ್ಣಮುಂದೆ ನಿಲ್ಲುವ ವ್ಯಕ್ತಿಯೇ ಪುಟ್ಟ ಬಾಲಕ,ಬಾಲ ಪ್ರತಿಭೆ ಕು. ಅಥರ್ವ ರವರು.ಅವರು ಮಾಡಿರುವ ವಿಶೇಷ ಸಾಧನೆ ನೋಡಿ ನಮ್ಮೆಗೆಲ್ಲರಿಗೂ ಬೆರಗು ಹುಟ್ಟಿಸುತ್ತದೆ. ಈ ತನ್ಮೂಲಕ

ಈ ಪುಟ್ಟ ಬಾಲಕ ಸಾಧನೆ ಶ್ರೇಯಸ್ಸಿನ ಆಧಾರದ ಮೇಲೆ

ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ಗೆ ಸೇರ್ಪಡೆಯಾಗಿ, ನಮ್ಮಗೆಲ್ಲರಿಗೂ ಸ್ಪೂರ್ತಿ ಮತ್ತು ಮಾದರಿಯಾಗಿ ನಿಲ್ಲುತ್ತಾನೆ. ಆದಕಾರಣ

ಈತನ ಕಠಿಣ ಪರಿಶ್ರಮ ಬಲದ ಸಾಧನೆಯಿಂದ ನಮ್ಮ ಕರುನಾಡಿಗೆ ಕೀರ್ತಿಯನ್ನು ತಂದಿದ್ದಾನೆ.ಇದು ನಮ್ಮಗೆಲ್ಲರಿಗೂ ಖುಷಿ ಕೊಡುವ ವಿಚಾರವಾಗಿದೆ ಬಂಧುಗಳೆ.ಆದ್ದರಿಂದ ಈ ಪುಟ್ಟ ಪೋರ  ಕು. ಅಥರ್ವ ರವರು ಮಾಡಿರುವ ಸಾಧನೆ ಅದ್ಭುತ ಮತ್ತು ಅಮೂಲ್ಯವಾಾಗಿದೆ.ಈ ನಿಟ್ಟಿನಲ್ಲಿ ಅವನು ಮಾಡಿರುವ ಸಾಧನೆ ವಿವರಗಳನ್ನು ತಮ್ಮ ಮುಂದೆ ಹಂಚಿಕೊಳ್ಳುತ್ತೀರುವೆ.

ಕು. ಅಥರ್ವ ಹುಟ್ಟಿದ್ದು ಕರ್ನಾಟಕ ರಾಜ್ಯದ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಗೊಲ್ಲರಹಳ್ಳಿ ಗ್ರಾಮದ ಗಣೇಶ ಮತ್ತು ರಕ್ಷಿತಾ ದಂಪತಿಗಳ ಮಗನಾಗಿ ದಿನಾಂಕ 9 ಡಿಸೆಂಬರ್ 2015 ರಂದು ಜನಿಸಿರುತ್ತಾನೆ.ಸಧ್ಯ ಈತ ಎಲ್ .ಕೆ .ಜಿ ತರಗತಿ ಯನ್ನು ಬ್ಲೂಫೀಲ್ಡ್ ಪ್ರೀ ನರ್ಸರಿ ಸ್ಕೂಲ್ ತ್ಯಾಗರಾಜನಗರ, ಬಸವನಗುಡಿ ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ.

ಕಲಿಕೆಯಲ್ಲಿ ಅತಿ ಬುದ್ಧಿವಂತನಾಗಿದ್ದಾನೆಂದು ಹೇಳಬಹುದಾಗಿದೆ. ಈತ ಒಂದರಿಂದ-ಇಪ್ಪತ್ತರವರೆಗೆ ಇಂಗ್ಲಿಷ್ನಲ್ಲಿ ಗುಣಾಕಾರದ ಮಗ್ಗಿಗಳು ಹಾಗೂ ಒಂದರಿಂದ ಇನ್ನೂರರವರೆಗೆ ಅಂಕಿಗಳು, ಒಂಬೈನೂರಕ್ಕೂ ಹೆಚ್ಚು ಇಂಗ್ಲಿಷ್ ಪದಗಳ ಸ್ಪೆಲ್ಲಿಂಗ್ ಗಳನ್ನು ನೀರಗಳವಾಗಿ ಹೇಳುತ್ತಾನೆ. ಇವುಗಳಲ್ಲದೆ ಮೂವತ್ತೈದು ಇಂಗ್ಲೀಷ್ ರೈಮ್ಸ್ ಗಳು, 8 ಕಥೆಗಳು, ನೂರಾಮೂವತ್ತೈದು ಕ್ಕೂ ಹೆಚ್ಚು ಜನರಲ್ ನಾಲೆಡ್ಜ್ ಪ್ರಶ್ನೋತ್ತರಗಳು, ಇಪ್ಪತ್ತಕ್ಕೂ ಹೆಚ್ಚು ದೇಶಗಳ ರಾಜಧಾನಿಗಳು ಸೇರಿದಂತೆ ಭಾರತದ ರಾಜ್ಯಗಳು ಮತ್ತು ರಾಜಧಾನಿಗಳು, ಕರ್ನಾಟಕದ ಜಿಲ್ಲೆಗಳು, ಇಪ್ಪತ್ತು ಪ್ರಸಿದ್ಧ ಕಂಪೆನಿಗಳ ಸಂಸ್ಥಾಪಕರುಗಳ ಹೆಸರುಗಳು, ಮೂವತ್ತೈದು ವಿಜ್ಞಾನಿಗಳ ಹೆಸರು, ಐವತ್ತು ಸ್ವಾತಂತ್ರ್ಯ ಹೋರಾಟಗಾರರ ಹೆಸರುಗಳು,

ಇಪ್ಪತ್ತು ನೃತ್ಯಪ್ರಕಾರಗಳು, ಇಪ್ಪತ್ತು ಕ್ರಿಕೆಟ್ ಆಟಗಾರರ ಹೆಸರುಗಳು, ರಾಮಾಯಣ ಹಾಗೂ ಮಹಾಭಾರತಕ್ಕೆ ಸಂಬಂಧಪಟ್ಟ ನೂರಿಪ್ಪತ್ತಕ್ಕೂ ಹೆಚ್ಚು ಪ್ರಶ್ನೋತ್ತರಗಳು ಹಾಗೂ ಇತರ ಮಾಹಿತಿಗಳನ್ನು ಕ್ಷಣಾರ್ಧದಲ್ಲಿ ಹೇಳುತ್ತಾನೆ.ಹೇಳುವ ಮೂಲಕ ಕರ್ನಾಟಕ ಬುಕ್ ಆಫ್ ರೆಕಾರ್ಡ್ಸ್ ಸಂಸ್ಥೆಯವರು ಈ ಬಾಲಕ ಪ್ರತಿಭೆಯನ್ನು ಕಂಡು ಅಧಿಕೃತವಾಗಿ ಈತನ ಹೆಸರನ್ನು (ಅವರ ಸಂಸ್ಥೆಯ ಲ್ಲಿ)ನೋಂದಾಯಿಸಿ ಮೆಚ್ಚುಗೆಯ ಪ್ರಮಾಣ ಪತ್ರವನ್ನು ನೀಡಿದ್ದಾರೆ.ಜೊತೆಗೆ ಇವನ ಈ ಅಪ್ರತಿಮ ಸಾಧನೆ ಕಂಡು ಹಲವು ಸಂಘ – ಸಂಸ್ಥೆಯವರು ಶುಭಹಾರೈಸಿದ್ದಾರೆ.ಶಿಕ್ಷಕ ವೃಂದದವರು ಶುಭಾಶಿರ್ವಾದ ಮಾಡಿರುತ್ತಾರೆ. ಕರ್ನಾಟಕ ಆಚೀವರ್ಸ್ ಬುಕ್ ಆಫ್ ರೆಕಾರ್ಡ್ ಸಂಸ್ಥಾಪಕ ಅಧ್ಯಕ್ಷೆ  ಮತ್ತು ಮುಖ್ಯಸ್ಥರು ಆದ ಡಾ.ಅಂಬಿಕಾ ಹಂಚಾಟೆಯವರು ಈ ಬಾಲಕನನ್ನು ಅಭಿನಂದಿಸಿ, ಸನ್ಮಾನಿಸಿ ಗೌರವಿಸಿದಾರೆ.

ಅಭಿನಂದನೆ ನುಡಿ:- ಕು. ಅಥರ್ವ ರವರು ಇನ್ನು ಹೆಚ್ಚಿನ ಸಾಧನೆ ಮಾಡಲಿ ಜೊತೆಗೆ ಎಲ್ಲಾ ಕ್ಷೇತ್ರದಲ್ಲಿಯೂ ಮಿನುಗುತ್ತಾ, ನಮ್ಮ ನಾಡಿಗೆ ಶ್ರೇಯಸ್ಸು ಮತ್ತು ಕೀರ್ತಿ ತರುವ ಕೆಲಸ ಮಾಡಲೆಂದು ತಾವರಗೇರಾ ನ್ಯೂಸ್ ಪತ್ರಿಕೆ ಬಳಗದವತಿಯಿಂದ ಹರಸುತ್ತೇವೆ.

ಲೇಖಕರು – ಸಂಗಮೇಶ ಎನ್ ಜವಾದಿ, ಬೀದರ ಜಿಲ್ಲೆ.

Leave a Reply

Your email address will not be published. Required fields are marked *