ಹಂಪಿಯ ಶ್ರೀ ವಿದ್ಯಾರಣ್ಯ ವಿಹಾರ ಸ್ಥಳವನ್ನ ಸ್ವಚ್ಛಗೊಳಿಸಿದ ವಕೀಲ ಮೋಹನ್ ಕುಮಾರ್ ದಾನಪ್ಪ ಅಂಡ್ ಟೀಂ….
(ಬಳ್ಳಾರಿ )July: 11: ಕಂಪ್ಲಿ ಸಮೀಪದ ರಾಮಸಾಗರ ಗ್ರಾಮ ವ್ಯಾಪ್ತಿಯಲ್ಲಿನ ದರೋಜಿ ಕರಡಿಧಾಮ ಅರಣ್ಯ ಪ್ರದೇಶದ ತುಂಗಭದ್ರಾ ನದಿ ದಡದಲ್ಲಿರುವ ಶ್ರೀ ವಿದ್ಯಾರಣ್ಯ ವಿದ್ಯಾ ವಿಹಾರಕ್ಕೆ ಹೈ ಕೋರ್ಟ್ ವಕೀಲರಾದ ಮೊಹನ್ ಕುಮಾರ್ ದಾನಪ್ಪ ಮತ್ತು ಅವರ ಕುಟುಂಬ ಹಾಗೂ ಕಂಪ್ಲಿ ಯುವಕರ ಬಳಗದವರೊಂದಿಗೆ ಭೇಟಿ ನೀಡಿದ್ದರು. ಪ್ರೇಕ್ಷಣೀಯ ಸ್ಥಳವಾದ ಶ್ರೀ ವಿದ್ಯಾರಣ್ಯ ವಿದ್ಯಾ ವಿಹಾರಕ್ಕೆ ಸಾರ್ವಜನಿಕರು ಕುಟುಂಬ ಸಮೇತ ಸುಂದರ ಪರಿಸರದಲ್ಲಿ ಸಮಯ ಕಳೆಯಲು ಮತ್ತು ಭೋಜನಕೂಟಕ್ಕೆ ವಾರಾಂತ್ಯ ಹಾಗೂ ಭಾನುವಾರದ ರಜೆ ಕಳೆಯಲು, ಯುವಕ ಯುವತಿಯರು ಫೋಟೋ ಶೂಟ್ ಗಾಗಿ ಆಗಮಿಸುತ್ತಿದ್ದು ಭೋಜನದ ನಂತರ ಪ್ಲಾಸ್ಟಿಕ್ ತಟ್ಟೆಗಳನ್ನ ಮತ್ತು ತಂಪು ಪಾನೀಯಗಳನ್ನ ಕುಡಿದು ಅದರ ಟಿನ್ ಬಾಟಲಿ ಹಾಗೂ ಸ್ನಾನದ ನಂತರ ಹಳೆ ಬಟ್ಟೆಗಳನ್ನ ಎಲ್ಲೆಂದರಲ್ಲೇ ಬೀಸಾಡಿ ಸುಂದರ ಪರಿಸರವನ್ನ ಹದಗೆಡಿಸಿದ್ದು ಕಂಡು ತಕ್ಷಣ ಕಾರ್ಯ ಪ್ರವೃತ್ತರಾದ ಹೈ ಕೋರ್ಟ್ ವಕೀಲರಾದ ಮೊಹನ್ ಕುಮಾರ ದಾನಪ್ಪ ಅವರು ತಮ್ಮ ಯುವಕರ ತಂಡದೊಂದಿಗೆ ಸ್ವಚ್ಛತಾ ಕಾರ್ಯದಲ್ಲಿ ತೊಡಗಿ ಹದಗೆಟ್ಟ ಪರಿಸರವನ್ನ ಸಂಪೂರ್ಣವಾಗಿ ಸ್ವಚ್ಛಗೊಳಿಸಿದರು. ನಂತರ ” ಸುಂದರವಾದ ಪರಿಸರದ ಗಾಳಿ, ಬೆಳಕು, ಶಾಂತ ವಾತಾವರಣವನ್ನ ಸವಿಯಲು ಆಗಮಿಸುವ ನಾವು ಪರಿಸರವನ್ನ ಮಲೀನಗೊಳಿಸುವುದರಿಂದ ನೋಡಲು ಬರುವ ಪ್ರೇಕ್ಷಣೀಯರಿಗೆ ಅಸಹ್ಯ ಉಂಟಾಗುವುದರ ಜೊತೆ ನಮ್ಮ ಸ್ಥಳಗಳ ಬಗ್ಗೆ ಅಸಹ್ಯ ಭಾವನೆ ಉಂಟು ಮಾಡುತ್ತದೆ, ಆದ್ದರಿಂದ ಸ್ಥಳೀಯರು ನಮ್ಮ ಮನೆ, ನಮ್ಮ ಮನೆಯ ಅಂಗಳವೆಂಬಂತೆ ಇಂತಹ ಸ್ಥಳವನ್ನ ಸ್ವಚ್ಛವಾಗಿಟ್ಟುಕೊಳ್ಳುವುದು ನಮ್ಮೆಲ್ಲೆರ ಆದ್ಯ ಕರ್ತವ್ಯವಾಗಬೇಕೆಂದು ಸ್ಥಳೀಯರಿಗೆ” ಕರೆ ನೀಡಿದರು! ಸ್ವಚ್ಛತಾ ಕಾರ್ಯಕ್ರಮದಲ್ಲಿ ಸೈಯ್ಯದ್ ವಾರೀಶ್, ಕಾನೂನು ವಿದ್ಯಾರ್ಥಿ ಹೇಮಂತ್ ಕುಮಾರ್.ಡಿ, ಮನೋಜ್ ಕುಮಾರ್ ಡಿ, ಪಿ.ಸಿ.ಈರಣ್ಣ, ಹೆಚ್.ವೆಂಕಟೇಶ್.ಹೆಚ್.ಮುತ್ತಣ್ಣ, ಮಲ್ಲಿಕಾರ್ಜುನ್ ಕಟ್ಟಿಮನಿ, ಹಾಗೂ ಮುಂತಾದವರು ಕಾರ್ಯದಲ್ಲಿ ತೊಡಗಿದ್ದರು!
ವರದಿ – ಮಹೇಶ ಶರ್ಮಾ
My brother suggested I might like this website.
He was totally right. This post truly made my day. You cann’t imagine just how much time I had spent for this
information! Thanks!
tqu sir