ಅನ್ನದಾತರ ಬಾಳು ಹಸನಾಗಲು ಏತ ನೀರಾವರಿ ಯೋಜನೆಗೆ ಚಾಲನೆ….
ಇಂದು ನಿಪ್ಪಾಣಿ ಮತಕ್ಷೇತ್ರದ ಸೌಂದಲಗಾ ಗ್ರಾಮದಲ್ಲಿ, ಸಣ್ಣ ನೀರಾವರಿ ಇಲಾಖೆ ವತಿಯಿಂದ ಮಂಜೂರಾದ 1 ಕೋಟಿ 49 ಲಕ್ಷ ರೂ. ಮೊತ್ತದಲ್ಲಿ ದೂಧಗಂಗಾ ನದಿಯಿಂದ ಏತ ನೀರಾವರಿ ಯೋಜನೆಗೆ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಹಾಗೂ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಯವರು ಚಾಲನೆ ನೀಡಿದರು. ನಮ್ಮ ಹಸಿವು ನೀಗಿಸುತ್ತಿರುವ ಅನ್ನದಾತರ ಹಿತ ಕಾಪಾಡುವುದು ನಮ್ಮ ಜವಾಬ್ದಾರಿ. ಹೀಗಾಗಿ ರೈತರ ಕೃಷಿ ಚಟುವಟಿಕೆಗಳಿಗೆ ಪೂರಕವಾಗಲು ದೂಧಗಂಗಾ ನದಿಯಿಂದ ಶ್ರೀ ಅಂಬಾಬಾಯಿ ಗಂಗಾ ಕಲ್ಯಾಣ ಪೈಪ್ ಲೈನ್ ಮೂಲಕ ನೀರು ಹರಿಸಲು ವ್ಯವಸ್ಥೆ ಕಲ್ಪಿಸಲಾಗಿದೆ. ಇದರಿಂದ ಈ ಭಾಗದ ರೈತರ ಸುಮಾರು 40 ಎಕರೆ ಕೃಷಿ ಪ್ರದೇಶಗಳಿಗೆ ನೀರು ಹರಿಯಲಿದ್ದು, ಅನ್ನದಾತರ ಕೃಷಿ ಚಟುವಟಿಕೆಗಳು ಸಮೃದ್ಧಿಯಾಗಲಿ ಎಂದು ಹಾರೈಸಿದರು. ಈ ಸಂದರ್ಭದಲ್ಲಿ ಗಣ್ಯರು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.
ವರದಿ – ಮಹೇಶ ಶರ್ಮಾ