ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ : ಸಂಗಮೇಶ ಎನ್ ಜವಾದಿ…..
ಚಿಟಗುಪ್ಪ : ಕಲ್ಯಾಣ ಕರ್ನಾಟಕ ಮಾನವನ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘ (ರಿ) ಮತ್ತು ವಿಕಾಸ್ ಅಕಾಡೆಮಿ ಚಿಟಗುಪ್ಪ ತಾಲೂಕಿನ ಸಂಯುಕ್ತಾಶ್ರಯದಲ್ಲಿ ಇಂದು ಇಟಗಾ ಗ್ರಾಮದ ಸಂತೋಷ ಗಾದಾ ರವರ ಹೊಲದಲ್ಲಿ 2 ಸಾವಿನ ಸಸಿಗಳನ್ನು ನೆಡುವ ಕಾರ್ಯಕ್ಕೆ ತಾಲೂಕು ವಿಕಾಸ್ ಅಕಾಡೆಮಿಯ ಸಂಚಾಲಕರಾದ ಸಂಗಮೇಶ ಎನ್ ಜವಾದಿಯವರು ಚಾಲನೆ ನೀಡಿದರು. ನಂತರ ಅವರ ಮಾತನಾಡಿ ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಇದೆ.ಅದಕ್ಕಾಗಿ ಪ್ರತಿಯೊಬ್ಬ ತಮ್ಮ ಮನೆ,ಆವರಣ, ಹೊಲಗಳಲ್ಲಿ ಸಸಿಗಳನ್ನು ನೆಡುವ ಮೂಲಕ oxygen ಸಮಸ್ಯೆ ಆಗದಂತೆ ನಾವೆಲ್ಲರೂ ನಿಗಾವಹಿಸಬೇಕಾಗಿದೆ.ಆದ್ದರಿಂದ ಪರಿಸರ ರಕ್ಷಣೆ ಮುಂದಾಗಿ ವಿಶ್ವದ ಸಂರಕ್ಷಣೆ ಮಾಡಬೇಕು ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ನಿವೃತ್ತ ಜಿಲ್ಲಾ ತೆರಿಗೆ ಅಧಿಕಾರಿಗಳಾದ ದಯಾನಂದ ಕಾಂಬ್ಳೆಯವರು ಇಂದು ವಿಶ್ವ oxygenಗಾಗಿ ಪರದಾಡುವಂತಾಗಿದೆ. ಇದಕ್ಕೆ ನಾವೆಲ್ಲರೂ ಕಾರಣ ಎಂಬುದು ಮರೆಯಬಾರದು. ದಿನನಿತ್ಯ ಮರಗಳನ್ನು ಕಡೆಯುತ್ತಾ ಹೋದರೆ ಬರುವ ದಿನಗಳಲ್ಲಿ ಅರಣ್ಯ ಸಂಪತ್ತು ಬರಿದಾಗುತ್ತದೆ.ಆದಕಾರಣ ಎಲ್ಲರೂ ಸಸಿಗಳನ್ನು ನೆಡುವ ಮೂಲಕ ಅರಣ ಸಂಪತ್ತು ರಕ್ಷಣೆ ಮಾಡಬೇಕೆಂದು ತಿಳಿಸಿದರು. ಅತಿಥಿಯಾಗಿ ಆಗಮಿಸಿದ ಸಮಾಜಿಕ ಕಾರ್ಯಕರ್ತ ಅಸ್ಲಾಮಿಯಾ ಆಜಮ ಸ್ವಿಟ್ ಹೌಸ್ ರವರು ಪ್ರತಿಯೊಬ್ಬರು ಸಸ್ಯಗಳು ಹಚ್ಚಿ, ದೇಶವನ್ನು ರಕ್ಷಣೆ ಮಾಡಬೇಕು. ಹಾಗೆ ಶಾಲಾ ಕಾಲೇಜು ಸಂಘ ಸಂಸ್ಥೆಗಳು ಈ ದಿಸೆಯಲ್ಲಿ ಕೆಲಸ ಮಾಡಬೇಕೆಂದರು.ಕಾರ್ಯಕ್ರಮದಲ್ಲಿ ತಿಪ್ಪಣ್ಣಾ ಶರ್ಮಾ, ಸಂತೋಷ ಗಾದಾ,ಈರಣ್ಣಾ ಚೀಮಕೋಟೆ,ಸಚ್ಚಿದಾನಂದ ಗಾದಾ ಸೇರಿದಂತೆ ಹಲವರು ಉಪಸ್ಥಿತರಿದ್ದರು. ತುಕರಾಮ ಅಂಬೆಗಾರ ರವರು ನಿರೂಪಿಸಿ,ವಂದಿಸಿದರು.
ವರದಿ – ಸಂಗಮೇಶ ಎನ್ ಜವಾದಿ