ಕ.ಕ.ಮಾ.ಸಂ ಕೃಷಿ ಮತ್ತು ಸಾಂಸ್ಕೃತಿಕ ಸಂಘ ಕೈಗೊಳ್ಳುವ ಅಭಿವೃದ್ಧಿಪರ ಚಟುವಟಿಕೆಗಳಿಗೆ ಸಿ ಎಂ ಯಡಿಯೂರಪ್ಪ 500. ಕೋಟಿ ಅನುದಾನ ಮೀಸಲಿಟ್ಟಿದ್ದಾರೆ

Spread the love

ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಮತ್ತು ಸಾಂಸ್ಕೃತಿಕ ಸಂಘ ಕೈಗೊಳ್ಳುವ ಅಭಿವೃದ್ಧಿಪರ ಚಟುವಟಿಕೆಗಳಿಗೆ ಸಿ ಎಂ ಯಡಿಯೂರಪ್ಪ 500. ಕೋಟಿ ಅನುದಾನ ಮೀಸಲಿಟ್ಟಿದ್ದಾರೆ ಎಂದು ಕೊಪ್ಪಳ ಸಂಸದ ಕರಡಿ ಸಂಗಣ್ಣ ಅವರು ಹೇಳಿದರು….

ಯಲಬುರ್ಗಾ ಪಟ್ಟಣದ ಬುದ್ಧ ಬಸವ ಅಂಬೇಡ್ಕರ್ ಭವನದಲ್ಲಿ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸೇಡಂ ವಿಕಾಸ ಅಕಾಡೆಮಿ ಕಲಬುರ್ಗಿ ವಿನೂತನ ಶಿಕ್ಷಣ ಸಂಸ್ಥೆ ಅಳವಂಡಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕೋವಿಡ್ ಕಿಟ್ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಈ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿ ಸಂಸ್ಥೆಗೆ 500 ಕೋಟಿ ರೂಪಾಯಿ ಅನುದಾನ ಮೀಸಲಿಟ್ಟಿದ್ದಾರೆ ಈ ಸಂಸ್ಥೆಯ ಸಂಸ್ಥಾಪಕರಾದ ಬಸವರಾಜ ಪಾಟೀಲ್ ಸೇಡಂ ಪ್ರಾಮಾಣಿಕ ವ್ಯಕ್ತಿಯಾಗಿ ರೈತರ ಅನುಕೂಲಕ್ಕೆ ಸಾವಯವ ಕೃಷಿ ಅರಣ್ಯ ರಕ್ಷಣೆಗೆ ಸಸಿ ನೆಡುವ ಕಾರ್ಯ ನಡೆಯಲಿ ದೇಶಿಯ ಗೋ ತಳಿಯ ಉತ್ಪನ್ನಗಳಿಂದ ಭೂಮಿಯ ಫಲವತ್ತತೆ ಹೆಚ್ಚಿಸುವ ಜೊತೆಗೆ ವ್ಯಕ್ತಿ ಕೂಡ ದೈಹಿಕವಾಗಿ ಸದೃಢ ಆಗಲು ಸಾಧ್ಯವಾಗುತ್ತದೆ ಈಗಿನ ಯುವಕರು ರಾಜಕಾರಣದಲ್ಲಿ ದುಡಿಯುವ ಬದಲು ಹೆಚ್ಚಾಗಿ ಕೃಷಿ ಚಟುವಟಿಕೆಗಳಲ್ಲಿ ತೊಡಗಬೇಕಾಗಿದೆ ಎಂದು ಮಾತನಾಡಿದರು. ಯಲಬುರ್ಗಾ ತಾಲೂಕ ಶಾಸಕರಾದ ಹಾಲಪ್ಪ ಆಚಾರ್ ಮಾತನಾಡಿ ಹೈದ್ರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿ ಸ್ಥಾಪಿಸಲಾಯಿತು ಯಡಿಯೂರಪ್ಪ ಸರ್ಕಾರ ಕಲ್ಯಾಣ ಕರ್ನಾಟಕ ಮಾನವ ಹಾಗೂ ಸಾಂಸ್ಕೃತಿಕ ಸಂಘಕ್ಕೆ ಕ್ರಿಯಾಶೀಲವಾಗಿರುವ ವ್ಯಕ್ತಿಗಳನ್ನ ನೇಮಿಸಿದ್ದಾರೆ. ಗ್ರಾಮೀಣ ಭಾಗದ ಜನರ ಸ್ವಾವಲಂಬಿ ಬದುಕಿಗೆ ಇಂತಹ ಸಂಘ ಸಂಸ್ಥೆಗಳು ನೇರವಾಗಲಿದೆ ಎಲ್ಲರೂ  ಪಡೆದುಕೊಳ್ಳಬೇಕು ಎಂದು ಮಾತನಾಡಿದರು.  ತಾಲ್ಲೂಕಿನ ಅರ್ಹ ಫಲಾನುಭವಿಗಳಿಗೆ ಹೊಲಿಗೆ ಯಂತ್ರ ಸ್ಕರ್ಟ್ ಕ್ಲಾಸ್ ಯಂತ್ರಗಳು ಯುಪಿಎಸ್ಸಿ ಬ್ಯಾಟರಿಗಳನ್ನು ವಿತರಿಸಿದರು.  ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಪ್ರಭುರಾಜ್ ಕಲಬುರ್ಗಿ. ವಿ ಎಮ್ ಭೂಸನೂರಮಠ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಅಮರೇಶ್ ಹುಬ್ಬಳ್ಳಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ವಸಂತ ಬಾವಿಮನಿ ಗಣ್ಯರಾದ ಬಸಲಿಂಗಪ್ಪ ಭೂತೆ ಸಿ ಎಚ್ ಪಾಟೀಲ್ ವೀರಣ್ಣ ಹುಬ್ಬಳ್ಳಿ ಸಿದ್ದಲಿಂಗಯ್ಯ ಹಿರೇಮಠ ಸುಧಾಕರ್ ದೇಸಾಯಿ ಪಿಎಸ್ಐ ಶಿವಕುಮಾರ್ ಮುಗ್ಗಳ್ಳಿ ಭೀಮಣ್ಣ ಅವಳಿ ಜಿಲ್ಲಾ ಸಂಚಾಲಕರಾದ ಶೇಖರ್ ಗಡಾದ್. ಕವಿತಾ ಮತ್ತು ಶಾರದಾ ಹೂಗಾರ್ ಇತರರು ಇದ್ದರು

ವರದಿಹುಸೇನ್ ಮೋತೆಖಾನ್

Leave a Reply

Your email address will not be published. Required fields are marked *