ದೇವದುರ್ಗ NRBC ಕಾಲುವೆಗಳ ಪುನರ್ ನಿರ್ಮಾಣಕ್ಕಾಗಿ ಆಗ್ರಹಿಸಿ ಹೋರಾಟ…..
ದೇವದುರ್ಗ ತಾಲೂಕಿನ 9ನೇ ವಿತರಣೆ ಕಾಲುವೆಯಿಂದ 18ನೇ ಕಾಲುವೆ ವರೆಗೆ ಕಾಲುವೆಗಳ ಪುನರ ನಿರ್ಮಾಣ ಕಾರ್ಯಕ್ಕೆ ಸರ್ಕಾರ ಮುಂದಾಗಿದ್ದು, ಅವೈಜ್ಞಾನಿಕವಾಗಿ ಕಾಲುವೆಗಳನ್ನು ಅಗೆದು ರೈತರಿಗೆ ತೊಂದರೆ ಮಾಡಿದ ಗುತ್ತೆದಾರರ ನಡೆಯನ್ನು ಖಂಡಿಸಿ ಹೋರಾಟ ನಡೆಸಲಾಯಿತು. ಸ್ಥಳಕ್ಕೆ ಆಗಮಿಸಿದ KBGNL ಅಧಿಕಾರಿಗಳು ರೈತರಿಗೆ ಅನುಕೂಲವಾಗುವಂತೆ ಸದ್ಯದ ಮಟ್ಟಿಗೆ ದುರಸ್ತಿ ಮಾಡಿ ನಂತರದಲ್ಲಿ ಕಾಲುವೆಗಳ ಪುನರ್ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಲಾಗುವುದು ಎಂದು ಭರವಸೆ ನೀಡಿದ ನಂತರ ಹೋರಾಟವನ್ನು ತಾತ್ಕಾಲಿಕವಾಗಿ ಹಿಂತೆಗದು ಕೊಳ್ಳಲಾಯಿತು. ಈ ಸಂದರ್ಭದಲ್ಲಿ NRBC ಕಾಲುವೆಗಳ ಪುನರ್ ನಿರ್ಮಾಣ ಹೋರಾಟ ಸಮಿತಿ ಗೌರವ ಸಲಹೆಗಾರರಾದ ಬಸನಗೌಡ ದೇಸಾಯಿ, ರೂಪಾ ಶ್ರೀನಿವಾಸ ನಾಯಕ, ಉಮಾದೇವಿ, ಸಂಚಾಲಕರಾದ ನರಸಣ್ಣ ನಾಯಕ, ಶಬ್ಬೀರ ಜಾಲಹಳ್ಳಿ, ರಂಗಪ್ಪ ನಾಯಕ, ಹನುಮಂತ ಮಂಡಲಗುಡ್ಡ, ಮರಿಲಿಂಗ ಪಾಟೀಲ್, ಮೇಲಪ್ಪ ಬಾವಿಮನಿ, ವಿಶ್ವನಾಥ ಬಲ್ಲಿದವ್, ಮೋಹನ್ ಬಲ್ಲಿದವ್, ಮುಕ್ಕನಗೌಡ, ಮೈಹಿಬೂಬ್ ಕುರಕುಂದಿ,ವ ಮೌನೇಶ ದಾಸರ, ಮಕ್ತುಂಪಾಷ, ರಮೇಶ್ ವೀರಾಪೂರು, ನಿಂಗಪ್ಪ ಎಂ, ಶಿವರಾಜ್ ಕಪಗಲ್ ಮುಂತಾದವರು ಭಾಗವಹಿಸದ್ದರು.
ವರದಿ – ಸಂಂಪಾದಕೀಯ