ಎಡ ವಿದ್ಯಾರ್ಥಿ ಸಂಘಟನೆಗಳ ಒಕ್ಕೂಟ–ಕರ್ನಾಟಕ AISF-SFI-AIDSO-AISA-KVS ಇವರಿಂದ ಸಹಾಯಕ ಆಯುಕ್ತರು ಲಿಂಗಸ್ಗೂರು ಇವರ ಮುಖಾಂತರ ಮಾನ್ಯ ಉನ್ನತ ಶಿಕ್ಷಣ ಸಚಿವರು. ಕರ್ನಾಟಕ ರಾಜ್ಯ ಸರ್ಕಾರ ಇವರಿಗೆ.
ವಿಷಯ: ಎನ್.ಈ.ಪಿ ಅನುಷ್ಠಾನದ ಭಾಗವಾಗಿ ಪದವಿ ಶಿಕ್ಷಣವನ್ನು ಮೂರು ವರ್ಷದಿಂದ ನಾಲ್ಕು ವರ್ಷಕ್ಕೆ ಏರಿಸುತ್ತಿರುವುದನ್ನು ಹಾಗೂ ಭಾಷಾ ನೀತಿಯಲ್ಲಿ ಮಾತೃಭಾಷೆಯನ್ನು ಒಂದು ವರ್ಷಕ್ಕೆ ಸೀಮಿತಗೊಳಿಸುತ್ತಿರುವುದನ್ನು ವಿರೋಧಿಸಿ. ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಉನ್ನತ ಶಿಕ್ಷಣವನ್ನು ಮೂರು ವರ್ಷದ ಪದವಿಯಿಂದ ನಾಲ್ಕು ವರ್ಷದ ಪದವಿಗೆ ಏರಿಕೆ ಮಾಡಬೇಕೆಂಬ ಹೊಸ ಶಿಕ್ಷಣ ನೀತಿ (ಎನ್ಇಪಿ2020)ಯ ಪ್ರಸ್ತಾಪವನ್ನು ರಾಜ್ಯ ಸರ್ಕಾರ ಈ ಶೈಕ್ಷಣಿಕ ವರ್ಷದಿಂದಲೇ ಜಾರಿಗೆ ತರಲು ಸರ್ಕಾರಗಳು ಹೊರಟಿದೆ. ಅಲ್ಲದೆ ಅದಕ್ಕಾಗಿ ಸಮಿತಿಯೊಂದನ್ನು ರಚಿಸಿ ಕೇವಲ ಹತ್ತು ದಿನದಲ್ಲಿಯೇ ವರದಿ ನೀಡಲೂ ಕೇಳಿತ್ತು! ಮಾತೃ ಭಾಷಾ ಕಲಿಕೆಯನ್ನೂ ಒಂದು ವರ್ಷಕ್ಕೆ ಸೀಮಿತಿಗೊಳಿಸುವ ಪ್ರಯತ್ನವೂ ನಡೆಯುತ್ತಿದೆ. ಇದೆಲ್ಲವನ್ನೂ ರಾಜ್ಯ ಸರ್ಕಾರ ದೇಶದಲ್ಲಿ ನಾವೇ ಮೊದಲು ಜಾರಿ ಮಾಡುತ್ತೇವೆ ಎಂದು ಹೊರಟಿದೆ. ʻʻಪದವಿ ವ್ಯಾಸಂಗವನ್ನು ನಾಲ್ಕು ವರ್ಷಗಳಿಗೆ ವಿಸ್ತರಿಸಿರುವುದು ಕೇವಲ ಮೂರು ವರ್ಷಗಳಲ್ಲೆ ಪದವಿ ವ್ಯಾಸಂಗ ಮುಗಿಸಿ, ನಿರುದ್ಯೋಗ ಸೈನ್ಯ ಸೇರುವವರನ್ನು ಕನಿಷ್ಠ ಒಂದು ವರ್ಷ ನಿಯಂತ್ರಿಸುವ ದುಷ್ಟ ಯೋಚನೆಯಾಗಿದೆ ಮತ್ತು ವಿದ್ಯಾರ್ಥಿ ಹಾಗೂ ಆತನ ಪೋಷಕರು ಮತ್ತೊಂದು ವರ್ಷದ ವ್ಯಾಸಂಗಕ್ಕೆ ದುಬಾರಿ ಶುಲ್ಕ ಮತ್ತಿತರೇ ವೆಚ್ಚ ಭರಿಸುವ ಹೊರೆಯನ್ನು ಹೇರುವ ಮತ್ತು ಆ ಮೂಲಕ ಖಾಸಗೀ ಶಿಕ್ಷಣ ಸಂಸ್ಥೆಗಳ ಲೂಟಿಯ ಹರಿವನ್ನು ವಿಸ್ತರಿಸುವ ಸಂಚಾಗಿದೆʼʼ. ಆದ್ದರಿಂದ ಪದವಿ ಮೂರು ವರ್ಷಗಳಿಂದ ನಾಲ್ಕು ವರ್ಷಗಳಿಗೆ ವಿಸ್ತರಿಸಿರುವುದನ್ನು ಕೂಡಲೇ ವಾಪಸ್ಸು ಪಡೆಯಬೇಕೆಂದು ಎಡ ವಿದ್ಯಾರ್ಥಿ ಸಂಘಟನೆಗಳ ಒಕ್ಕೂಟ ರಾಜ್ಯ ಸರಕಾರವನ್ನು ಒತ್ತಾಯ ಮಾಡುತ್ತದೆ. ಹಾಗೆಯೇ, ಮೂರು ವರ್ಷಗಳ ಪದವಿ ವ್ಯಾಸಂಗದ ಸಂದರ್ಭದಲ್ಲಿದ್ದ ನಾಲ್ಕು ಸೆಮಿಸ್ಟರ್‌ಗಳ ಕನ್ನಡ ಭಾಷಾ ವ್ಯಾಸಂಗವನ್ನು ಎರಡು ಸೆಮಿಸ್ಟರ್‌ಗಳಿಗೆ ಮೊಟಕುಗೊಳಿಸಲಾಗಿದೆ. ರಾಜ್ಯ ಸರಕಾರದ ಈ ನಾಡದ್ರೋಹಿ ಕ್ರಮಗಳು ವಿದ್ಯಾರ್ಥಿ ಹಾಗೂ ಕನ್ನಡ ವಿರೋಧಿ ಮತ್ತು ರಾಜ್ಯದ ಅಭಿವೃದ್ದಿ ವಿರೋಧಿ ಕ್ರಮಗಳಾಗಿವೆ . ತಕ್ಷಣವೇ ಈ ಎರಡು ಜನ ವಿರೋಧಿ ಶಿಕ್ಷಣ ಕ್ರಮಗಳನ್ನು ವಾಪಾಸು ಪಡೆಯುವಂತೆ ಎಡ ವಿದ್ಯಾರ್ಥಿ ಸಂಘಟನೆಗಳ ಒಕ್ಕೂಟ ರಾಜ್ಯ ಸರಕಾರವನ್ನು ಒತ್ತಾಯಿಸುತ್ತದೆ ದಶಕಗಳಿಂದ ಉಚಿತ ಮತ್ತು ಗುಣಮಟ್ಟದ ಸಮಾನ ಶಿಕ್ಷಣದ ಜಾರಿಗಾಗಿ ಸುದೀರ್ಘವಾಗಿ ಹೋರಾಟಗಳು ನಡಿಯುತ್ತಲೇ ಬಂದಿವೆ. ಬೆಳೆಯುವ ಕುಡಿಗಳಲ್ಲಿ ಅಸಮಾನತೆಯನ್ನು ಬಿತ್ತುವ ಶಿಕ್ಷಣ ವ್ಯವಸ್ತೆಯ ಬದಲಾಗಿ ಸಮಾನತೆ ಮತ್ತು ಸೌಹಾರ್ದತೆಯ ಸಮಾಜ ನಿರ್ಮಾಣಕ್ಕಾಗಿ ಸಮಾನ ಶಿಕ್ಷಣದ ಕೂಗು ಇದ್ದರೂ ಇದರ ಬಗ್ಗೆ ಸರ್ಕಾರ ತಲೆ ಕೆಡಿಸಿಕೊಂಡಿಲ್ಲ. ಇನ್ನು ಶಿಕ್ಷಣಕ್ಕಾಗಿ ಕೇಂದ್ರ ಸರ್ಕಾರ ಜಿಡಿಪಿಯ ಶೇ.6% ಅಥವಾ ರಾಜ್ಯ ಬಜೆಟ್ ನ ಶೇ.30% ಹಣವನ್ನು ಮೀಸಲಿಡಬೇಕು ಎಂದು ಶಿಕ್ಷಣ ಆಯೋಗಗಳು, ಶಿಕ್ಷಣ ತಜ್ಞರು ಶಿಫಾರಸು ಮಾಡುತ್ತಿದ್ದಾರಲ್ಲದೆ ಎನ್ಇಪಿ2020 ಕೂಡ ಹೇಳುತ್ತಿದೆ. ಇವುಗಳಿಗಾಗಿ ಯಾವುದೇ ಸರ್ಕಾರಗಳಾಗಲಿ, ಸಚಿವರಾಗಲಿ ತುರ್ತು ಸಮಿತಿಗಳು ರಚಿಸಿ ವರದಿ ಕೇಳಲಿಲ್ಲ, ಅನುಷ್ಠಾನಕ್ಕೆ ಉತ್ಸುಕುರಾಗುತ್ತಿಲ್ಲ ಎನ್ನುವುದು ಆಶ್ಚರ್ಯವಾಗಿದೆ! ಆದರೆ ಈ ಕೋವಿಡ್ ಸಂದರ್ಭದಲ್ಲಿ ಗಡಿಬಿಡಿಯಲ್ಲಿ ಸರ್ಕಾರವು ಆತುರದ ನಿರ್ಧಾರಗಳನ್ನು ತೆಗೆದುಕೊಂಡು ಸಮಿತಿಗಳನ್ನು ರಚಿಸಿರುವುದು ಅಪ್ರಜಾತಾಂತ್ರಿಕ ನಡೆಯಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ದೊಡ್ಡ ಆಘಾತವನ್ನು ಉಂಟಾಗಿದೆ. ಸರ್ಕಾರವು ಆತುರದಲ್ಲಿ ತೆಗೆದುಕೊಂಡ ನಾಲ್ಕು ವರ್ಷಗಳ ಪದವಿ ಕೋರ್ಸ್ ಮತ್ತು ಕನ್ನಡ ಭಾಷೆ ಕಲಿಕೆ ಒಂದು ವರ್ಷಕ್ಕೆ ಸೀಮಿತಗೊಳಿಸುವ ಜನವಿರೋಧಿ ನಿರ್ಧಾರವನ್ನು ಕೂಡಲೇ ಕೈ ಬಿಡಬೇಕು ಎಂದು ಆಗ್ರಹಿಸುತ್ತಾ ಈ ಕೆಳಗಿನ ಹಕ್ಕೊತ್ತಾವನ್ನು ಸರ್ಕಾರದ ಮುಂದಿಡುತ್ತಿದ್ದೇವೆ.
- ಎನ್.ಇ.ಪಿ-2020 ಅನ್ನು ಸಂಸತ್ತಿನಲ್ಲೂ ಹಾಗೂ ರಾಜ್ಯದ ವಿಧಾನಸಭೆಯಲ್ಲಿ ಚರ್ಚಿಸಲಿಲ್ಲ. ಶಿಕ್ಷಣವು ಶೆಡ್ಯೂಲ್-7ರ ಸಮವರ್ತಿ ಪಟ್ಟಿಯಲ್ಲಿ ಬರುತ್ತದೆ ಹೀಗಾಗಿ ಶಿಕ್ಷಣ ನೀತಿ ಕುರಿತಂತೆ ರಾಜ್ಯಗಳಿಗೆ ಸಮಾನ ಹಕ್ಕುಗುಳು ಇವೆ. ಆದರೆ ಈ ವಿಷಯದಲ್ಲಿ ರಾಜ್ಯಗಳನ್ನು ಕಡೆಗಣಿಸಿ ಏಕ ಪಕ್ಷಿಯವಾಗಿ ದೇಶದ ಮೇಲೆ ಎನ್ಇಪಿ2020 ಹೇರಲು ಹೊರಟಿದೆ. ಈ ಕಾರಣಕ್ಕಾಗಿ ರಾಜ್ಯದ ವಿಧಾನ ಮಂಡಲದಲ್ಲಿ ಎನ್.ಇ.ಪಿ-2020ರ ಸಮಗ್ರ ಚರ್ಚೆ ಆಗಬೇಕು 2. ಮಾತೃಭಾಷಾ ಕನ್ನಡ ಕಲಿಕೆ ಎಲ್ಲಾ ಹಂತದಲ್ಲಿಯೂ ಇರಬೇಕು ಮತ್ತು ಮಾತೃಭಾಷೆಯಲ್ಲಿ ವ್ಯಾಸಂಗ ಮಾಡಿದವರಿಗೆ ಆದ್ಯತೆಯ ಮೇಲೆ ಶಿಶ್ಯವೇತನ ಮತ್ತು ಉದ್ಯೋಗವಕಾಶಗಳನ್ನು ಸೃಷ್ಟಿ ಮಾಡುವ ನಿಟ್ಟಿನಲ್ಲಿ ನೀತಿಗಳು ರೂಪಿಸಬೇಕು 3. ರಾಜ್ಯದ ಶಿಕ್ಷಣ ಹಕ್ಕುದಾರರೊಂದಿಗೆ (ವಿದ್ಯಾರ್ಥಿಗಳು, ಪೋಷಕರು, ಶಿಕ್ಷಣ ತಜ್ಞರು, ವಿದ್ಯಾರ್ಥಿ ಸಂಘಟನೆಗಳು) ಎನ್.ಇ.ಪಿ2020ರ ಕುರಿತಂತೆ ಸಮಗ್ರವಾಗಿ ಚರ್ಚಿಸಬೇಕು. 4. ಕಳೆದ ಒಂದು ವರ್ಷದಿಂದ ವಿದ್ಯಾರ್ಥಿಗಳಿಗೆ ಶೇ.30% ಕಲಿಕೆ ಆಗಿಲ್ಲವೆಂದು ಸರ್ಕಾರವೇ ತಿಳಿಸುತ್ತಿದೆ. ಕೊರೋನಾ ಸಾಂಕ್ರಮಿಕ ಚಾಲ್ತಿಯಲ್ಲಿರುವ ಈ ಸಂದರ್ಭದಲ್ಲಿ ಇಂತಹ ಮುಖ್ಯ ನಿರ್ಧಾರಗಳನ್ನು ಏಕ ಪಕ್ಷವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುವುದು ಉನ್ನತ ಶಿಕ್ಷಣಕ್ಕೆ ಮಾರಕವಾಗಿದೆ. 5. ಸಮಿತಿಯೊಂದಿಗೆ ನಡೆಯುವ ಚರ್ಚೆ ಮತ್ತು ವರದಿಗಳು ಪಾರದರ್ಶಕವಾಗಿರಿಸಬೇಕು, ಅವುಗಳು ಎಲ್ಲರಿಗೂ ತಲುಪುವಂತೆ ಕಾಲಕಾಲಕ್ಕೆ ಪ್ರಕಟಿಸಬೇಕು. 6. ಈ ಎಲ್ಲಾ ವಿಷಯಗಳು ಬಗೆಹರೆಯವವರೆಗೂ ರಾಜ್ಯದಲ್ಲಿ ಎನ್.ಇ.ಪಿ2020 ಅನ್ನು ಜಾರಿ ಮಾಡಬಾರದು. ವರದಿ – ಸಂಪಾದಕೀಯ