ಸಚಿವೆ ಸೌ. ಶಶಿಕಲಾ ಜೊಲ್ಲೆ ಜಿ, ಯವರ ಬಹುದಿನಗಳ ಕನಸು ಸಾಕಾರ…..

Spread the love

ಸಚಿವೆ ಸೌ. ಶಶಿಕಲಾ ಜೊಲ್ಲೆ ಜಿ, ಯವರ ಬಹುದಿನಗಳ ಕನಸು ಸಾಕಾರ…..

ತಮ್ಮ ಜೀವನೋಪಾಯಕ್ಕಾಗಿ ಒಂದೇ ಕಡೆ ನೆಲೆಯೂರದೇ ಅಲೆದಾಡುವ ಬಹುರೂಪಿ ಅಲೆಮಾರಿ ಜನಾಂಗದವರು, ತಮ್ಮದೇ ಆದ ಭಾಷೆ, ಕಲೆ, ಸಾಹಿತ್ಯ, ಸಂಸ್ಕೃತಿ ಹೊಂದಿದ್ದು, ಸಮಾಜದ ಸಾಂಸ್ಕೃತಿಕ ಸಂಪತ್ತನ್ನು ಹೆಚ್ಚಿಸಿದ್ದಾರೆ. ಪಾರಂಪರಿಕ ಸಾಂಸ್ಕೃತಿಕ ಲೋಕಕ್ಕೆ ಅಪಾರ ಕೊಡುಗೆ ನೀಡಿರುವ ಇಂತಹ ಜನಾಂಗದವರಿಗೆ ಸೂರು ಒದಗಿಸಿ, ನೆಮ್ಮದಿಯ ಬದುಕು ನಡೆಸಲು ಅನುಕೂಲ ಕಲ್ಪಿಸಿಕೊಡಬೇಕು ಎಂಬುದು ನನ್ನ ಬಹುದಿನಗಳ ಕಸನಾಗಿತ್ತು. ಪ್ರಸ್ತುತ ಈ ನನ್ನ 8 ವರ್ಷಗಳ ಪ್ರಯತ್ನಕ್ಕೆ ಫಲ ಸಿಕ್ಕಿದೆ. ಬಿಜೆಪಿ ಸರ್ಕಾರ ನಿಪ್ಪಾಣಿ ಮತಕ್ಷೇತ್ರದ ಬೋರಗಾಂವ ಪಟ್ಟಣದ ಅಲೆಮಾರಿ ಜನಾಂಗದವರಿಗೆ ಸೂರು ನಿರ್ಮಿಸಲು 2 ಎಕರೆ ಪ್ರದೇಶವನ್ನು ಮಂಜೂರು ಮಾಡಿದ್ದು, ಈ ಹಿನ್ನೆಲೆಯಲ್ಲಿ 38 ಫಲಾನುಭವಿ ಕುಟುಂಬಗಳಿಗೆ, ನಿವೇಶನ ಹಕ್ಕುಪತ್ರಗಳನ್ನು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಹಾಗೂ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಯವರು ವಿತರಿಸಿದರು. ನನ್ನ ಬಹುವರ್ಷಗಳ ಕನಸು ನನಸಾಗಿದ್ದು, ಮಂಜೂರಾಗಿರುವ ಜಾಗದಲ್ಲಿ ಶೀಘ್ರದಲ್ಲಿ ಸೂರು ನಿರ್ಮಿಸಿ ಅಲೆಮಾರಿ ಜನಾಂಗದವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೇಳಿದರು. ಈ ಸಂದರ್ಭದಲ್ಲಿ ಗಣ್ಯರು, ಜನಪ್ರತಿನಿಧಿಗಳು ಅಧಿಕಾರಿಗಳು, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ – ಮಹೇಶ ಶರ್ಮಾ

Leave a Reply

Your email address will not be published. Required fields are marked *