“ಜಗತ್ತಿನಲ್ಲಿ ಪ್ರೀತಿ ಎಂಬುದು ಮಾಯೆ ಅಲ್ಲ, ಮಾಯೆಯಿಂದ ಸೃಷ್ಟಿಯಾದುದು ಪ್ರೀತಿನೇ ಅಲ್ಲ..”

Spread the love

“ಜಗತ್ತಿನಲ್ಲಿ ಪ್ರೀತಿ ಎಂಬುದು ಮಾಯೆ ಅಲ್ಲ, ಮಾಯೆಯಿಂದ ಸೃಷ್ಟಿಯಾದುದು ಪ್ರೀತಿನೇ ಅಲ್ಲ..”

🌹ಶ್ರೀ ಕೃಷ್ಣ ತನಯ🌹

💛ಹತ್ವರ್ಷದ್ ಪ್ರೀತಿ❤️

ಹತ್ತು ವರುಷ ತುಂಬಿತು

ನನ್ನ ಅವಳ ಪ್ರೀತಿಗೆ

ಅಳೆದು ತೂಗಿದ್ರೂ ಕಮ್ಮಿಯಿಲ್ಲ

ನನ್ನಲ್ಲಿನ ಅವಳ ಪ್ರೀತಿಗೆ

ಹತ್ತು ವರುಷ ಆಗೇ ಬಿಡ್ತು

ನನ್ನಲ್ಲಿನ ಇಂತ ಪ್ರೀತಿಗೆ

 

ಅವಳನ್ನು ನೋಡ್ದೆ, ಮಾತನಾಡ್ದೆ

ನನ್ನ ಪ್ರೀತಿ ಹಾಗೆ ಸಾಗಿದೆ

ಊಹೆ ಎಂಬ ಹೂವಿಗಿಂದು

ಕನಸಲ್ಲಿ ಮನಸ್ಸು ಶರಣಾಗಿದೆ

ಹತ್ತು ವರುಷ ಆಗೇ ಬಿಡ್ತು

ನನ್ನಲ್ಲಿನ ಇಂತ ಪ್ರೀತಿಗೆ

 

ಮಾತಿಲ್ದೆನೇ! ಕಥೆಯಿಲ್ದೆನೇ!

ಮನಸಲ್ಲಿ ಪ್ರೀತಿ ಹುಟ್ಟಿತು

ಅವಳ್ಯಾರಂತ ಗೊತ್ತಿಲ್ದೇನೇ!

ಹೃದಯ ಅವಳನ್ನೇ ಬಯಸಿತು

ಹತ್ತು ವರುಷ ಆಗೇ ಬಿಡ್ತು

ನನ್ನಲ್ಲಿನ ಇಂತ ಪ್ರೀತಿಗೆ

ಸಂಜ್ಞೆಯಿಲ್ಲ? ಸಂದೇಶವಿಲ್ಲ?

ನಾನು ಕಂಡ ಪ್ರೀತೀಲಿ

ಸಂಶಯವಿಲ್ಲ? ಸಂದೇಹವಿಲ್ಲ?

ನನ್ನ ಅನುಭವದ ಪ್ರೀತೀಲಿ

ಹತ್ತು ವರುಷ ಆಗೇ ಬಿಡ್ತು

ನನ್ನಲ್ಲಿನ ಇಂತ ಪ್ರೀತಿಗೆ

 

ಫೋಟೋ ನೋಡ್ತಾ ನೋಡ್ತಾ

ಸೃಷ್ಟಿಯಾದ ನನ್ನ ಪ್ರೀತಿಯು

ನನ್ನಕ್ಷಿಯೊಳಗೆ ಸಾಕ್ಷಿಯಾಗಿ

ಅದೃಶ್ಯವಾಗಿಯೇ ಉಳಿಯಿತು

ಹತ್ತು ವರುಷ ಆಗೇ ಬಿಡ್ತು

ನನ್ನಲ್ಲಿನ ಇಂತ ಪ್ರೀತಿಗೆ

 

ಮಿಥ್ಯವಿಲ್ಲದೆ ಸತ್ಯ ತುಂಬಿದ

ನನ್ನಲ್ಲಿನ ಅವಳ ಪ್ರೀತಿಯು

ಶತ್ರುವಿಲ್ಲದೆ? ಅರ್ಥವಿಲ್ಲದೆ?

ನನ್ನಲ್ಲೆ ಸಾಯುವ ಪ್ರೀತಿಯು

ಹತ್ತು ವರುಷ ಆಗೇ ಬಿಡ್ತು

ನನ್ನಲ್ಲಿನ ಇಂತ ಪ್ರೀತಿಗೆ

ಪ್ರೇಮಿ ಸತ್ತರು ಸಾಯೋದಿಲ್ಲ?

ಪ್ರೀತಿಯೇ ಇಲ್ಲಿ ಅಜರಾಮರ

ಪ್ರೀತಿ ಸತ್ತರು ಮರೆಯೋದಿಲ್ಲ?

ಪ್ರೇಮಿಯೇ ಇಲ್ಲಿ ಅಜರಾಮರ

ಹತ್ತು ವರುಷ ಆಗೇ ಬಿಡ್ತು

ನನ್ನಲ್ಲಿನ ಇಂತ ಪ್ರೀತಿಗೆ

ಬಸವರಾಜ್ ಯು ಗುಣಸಾಗರ

Leave a Reply

Your email address will not be published. Required fields are marked *