@ ಮಳೆಗಾಲದಲ್ಲಿ ಈ ಊರಿನ ಜನರಿಗೆ ನಿದ್ದೆನೇ ಬರೋಲ್ಲ..@
ದೇಶಾದ್ಯಂತ ವರುಣನ ಆರ್ಭಟ ಜೋರಾಗಿದೆ.ಎಲ್ಲ ನದಿಗಳು ಹಾಗೂ ಅಣೆಕಟ್ಟುಗಳು ಭರ್ತಿ ಆಗುತ್ತಲಿವೆ ಅಂತ ಈ ವರ್ಷ ನೀರಿನ ಅಭಾವವಿಲ್ಲ ಬಿಡಿ ಅಂತ ಕೆಲವರು ಇನ್ನೂ ಕೆಲವರು ಯಾಕಪ್ಪಾ ಈ ಮಳೆ ಬಂತು ಇನ್ನುಮುಂದೆ ಮತ್ತೇ ನಾವೆಲ್ಲಾ ಮನೆ ಮಠ ದನಕರುಗಳನ್ನು ಅಲ್ಲದೇ ಬೆಳೆ ಕೂಡ ಕಳೆದುಕೊಳ್ಳಬೇಕಲ್ಲಾ ಅಂತ ರಾಯಭಾಗ ತಾಲೂಕಿನ ನಸಲಾಪುರ ಊರಿನ ನದಿ ತೀರದ ಜನ ವ್ಯಥೆ ಪಟ್ಟುಕೊಳ್ತಾರೆ.. ಹೌದು ಸುಮಾರು 5000 ನಷ್ಟು ಜನಸಂಖ್ಯೆ ಇರುವ ಈ ಗ್ರಾಮದಲ್ಲಿ ಮಳೆಗಾಲ ಶುರುವಾದ್ರೆ ಕೃಷ್ಣಾ ನದಿ ಉಕ್ಕಿ ಹರಿಯುತ್ತೆ ಆಗ ಊರಿನ ಅರ್ಧ ಭಾಗವೆಲ್ಲಾ ನದಿ ನೀರಿನಲ್ಲಿ ಕೊಚ್ಚಿ ಹೋಗುತ್ತೆ..ಆಗ ಆ ಭಾಗದ ಜನ ಸರ್ಕಾರ ಏರ್ಪಡಿಸುವ ಗಂಜಿ ಕೇಂದ್ರಗಳೇ ಆಶ್ರಯ..ಇದು ಪ್ರತೀ ವರ್ಷವೂ ನಡೆಯುತ್ತಲೇ ಇರುತ್ತೆ..ಸರ್ಕಾರ ಮಾತ್ರ ಏನೋ ಸಮಾಧಾನಕ್ಕೆ ಅಂತ ಸ್ವಲ್ಪ್ ಹಣ ಕೊಟ್ಟು ಮೂಗಿಗೆ ತುಪ್ಪ ಸವರಿ ಸುಮ್ಮನಾಗುತ್ತಲಿದೆ.. ಪ್ರತೀ ವರ್ಷವೂ ಮಳೆಗಾಲದಲ್ಲಿ ಆಗುವ ಈ ಜನರ ಸಂಕಷ್ಟ ತಪ್ಪಿಸಬೇಕಂದರೇ ಸರ್ಕಾರ ಇವರಿಗೆ ಶಾಶ್ವತವಾದ ಪರಿಹಾರವನ್ನು ಒದಗಿಸಬೇಕು ಅಂದರೇ.. ಇಲ್ಲಿರುವ ಸರ್ಕಾರಿ ಭೂಮಿಯಲ್ಲಿ ಮಳೆಯಿಂದ ಹಾನಿಗೊಳಗಾಗುವ ಪ್ರದೇಶದ ಜನರನ್ನು ಸ್ಥಳಾಂತರಿಸಿ ಅವರಿಗೆ ಪುನರ್ವಸತಿ ಕಲ್ಪಿಸಬೇಕೆಂದು,ಈ ಭಾಗದ ಜನರು ಬೆಳಗಾವಿಯ ಜಿಲ್ಲೆಯ ಜಿಲ್ಲಾಧಿಕಾರಿಗೆ ಮನವಿ ಪತ್ರ ನೀಡಿರುತ್ತಾರೆ.. ಈ ಸಂಧರ್ಭದಲ್ಲಿ ಮಾಜೀ ಗ್ರಾಮ ಪಂಚಾಯತಿ ಉಪಾಧ್ಯಕ್ಷರೂ ಹಾಗೂ ತಾಲೂಕಿನ DSS ಮಹಿಳಾ ಘಟಕದ ರಾಜ್ಯಾಧ್ಯಕ್ಷರಾಗಿರುವ ಶ್ರೀಮತಿ ಸುಜಾತಾ ಕಾಂಬಳೆ ಹಾಗೂ ಬಸವರಾಜ್ ಢಾಕೆ ರಾಯಭಾಗ ತಾಲೂಕಿನ DSS ಘಟಕದ ಉಪಾಧ್ಯಕ್ಷರು,ಮಧುಕರ್ ಮಜಲಟ್ಟಿ ತಾಲೂಕ ಕಾರ್ಯದರ್ಶಿಗಳು,ಹಾಗೂ ಸುದರ್ಶನ ತಮ್ಮಣ್ಣವರ್ ನ್ಯಾವಾದಿಗಳು ಅಲ್ಲದೇ ಇನ್ನೂ ಹಲವಾರು ಜನರು ಉಪಸ್ಥಿತರಿದ್ದರು… ವರದಿ..ಗುಂಡೂರಾವ್ ಜ್ಯೋತಿ (ಚಿಕ್ಕೋಡಿ)
ವರದಿ – ಮಹೇಶ ಶರ್ಮಾ