ಕಾರಟಗಿ ತಾಲೂಕಿನ ಬರಗೂರು ಗ್ರಾಮದ ದಾನಪ್ಪ ಮತ್ತು ಕಕ್ಕರಗೋಳ ಗ್ರಾಮದ ದಲಿತ ಯುವಕರ ಕೊಲೆಗಳಿಗೆ ನ್ಯಾಯ ಸಿಗಲೆಬೇಕು…..
ಈ ಇಬ್ಬರು ಯುವಕರ ಕೊಲೆ ಸೇರಿದಂತೆ ಕೊಪ್ಪಳ ಜಿಲ್ಲೆಯಲ್ಲಿ ದಲಿತ, ದಮನಿತರ, ಮಹಿಳೆಯರ ಮೇಲೆ ನಡೆದ ದೌರ್ಜನ್ಯಗಳ ಕುರಿತು ನ್ಯಾಯಾಂಗ ತನಿಖೆಗೆ ಒತ್ತಾಯಿಸಿ ಮೂರು ದಿನಗಳಿಂದ ಜನಜಾಗೃತಿ ಜಾಥ ಮುಂದುವರೆದಿದೆ. ದಲಿತ ದಮನಿತರ ಒಕ್ಕೂಟ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ನಡೆದ ಜನಜಾಗೃತಿ ಜಾಥ ಸಿದ್ಧಾಪುರ, ಮೆಣದಾಳ ಗ್ರಾಮಗಳಲ್ಲಿ ಕಾರ್ಯಕ್ರಮ ನಡೆಸಿ ಇಂದು ತಾವರಗೇರ ಪಟ್ಟಣಕ್ಕೆ ತಲುಪಿತು. ತಾವರಗೇರ ಪಟ್ಟಣದ ಹರಿಜನ ವಾರ್ಡ ಮತ್ತು ವಿಠ್ಲಾಪುರ ರಸ್ತೆಯ ಅಂಬೇಡ್ಕರ್ ಪ್ರತಿಮೆ ಮುಂದೆ ಕಾರ್ಯಕ್ರಮ ನಡೆಯಿತು. ಒಕ್ಕೂಟದ ಸಂಚಾಲಕರು ಮತ್ತು ಕರ್ನಾಟಕ ರೈತ ಸಂಘ (AIKKS) ದ ರಾಜ್ಯಾಧ್ಯಕ್ ರಾದ ಡಿ.ಹೆಚ್.ಪೂಜಾರ ಮಾತನಾಡಿದರು.ದಲಿತರ ಮೇಲೆ ನಡೆಯುವ ದೌರ್ಜನ್ಯ ಮತ್ತು ಕೊಲೆಗೆ, ಮೋದಿ ಸರ್ಕಾರದ ತಿದ್ದುಪಡಿ ಕಾಯ್ದೆಗಳಿಗೆ ನೇರ ಸಂಬಂಧವಿದೆ. ಜಾತಿ ದ್ವೇಷ ಜಾತಿ ಸಂಘರ್ಷ ಹೆಚ್ಚು ಮಾಡಿ ಜನರ ಐಕ್ಯತೆಯನ್ನು ಛಿದ್ರಗೊಳಿಸಲಾಗುತ್ತಿದೆ. ಪ್ರಸ್ತುತ ಕಾಯ್ದೆ ಗಳ ತಿದ್ದುಪಡಿ ಮತ್ತು ಪೆಟ್ರೋಲ್, ಡೀಸೆಲ್ ಅಗತ್ಯ ವಸ್ತುಗಳ ಬೆಲೆ ಹೇರಿಕೆ ವಿಷಯಗಳನ್ನು ಮರೆ ಮಾಚಲು ಜಾತಿ ಜಗಳ ಮಾಡಿಸಲಾಗುತ್ತಿದೆ. ಮಾದಿಗ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಕರಿಯಪ್ಪಗುಡಿಮನಿ ಮಾತನಾಡಿ ಮಾತನ ತಾವರಗೇರ ಭಾಗದಲ್ಲಿ ನಡೆದ ಕೊಲೆಗಳ ಕುರಿತು ಪ್ರಸ್ತಾಪಿಸಿದರು. ಕರಡುಚಿಲುಮೆ ಗ್ರಾಮದ ಹರಿಜನ ಯುಲತಿಯ ಮೇಲೆ ಅತ್ಯಾಚಾರ ನಡೆಸಿದಿತ್ತು. ಮದುವೆ ಮಾಡಿಕೊಳ್ಳುಲು ಮೇಲ್ ಜಾತಿಯ ಕುಟುಂಬಕ್ಕೆ ಒತ್ತಾಯಸಿದರೆ, 30 ಸಾವಿರ ಹಣ ಕೊಡುವ ಮಾತಗಳನ್ನಾಡಿದ್ದರು. ಕಳೆದ ಮೂರು ತಿಂಗಳ ಹಿಂದೆ ತಾವರಗೇರ ಪಟ್ಟಣ ದಲ್ಲಿ ಭಜಂತ್ರಿ ಜಾತಿಯ ಗೃಹಿಣಿಯನ್ನು ಕೊಲೆ ಮಾಡಲಾಯಿತು. ಜಿಲ್ಲೆಯ ಪೋಲಿಸ್ ಅಧಿಕಾರಿಗಳ ಭ್ರಷ್ಟಾಚಾರ ಮತ್ತು ಬೇಜವಾಬ್ದಾರಿಯಿಂದ, ದಲಿತರಿಗೆ ದಮನಿತರಿಗೆ, ಮಹಿಳೆಯರಿಗೆ ರಕ್ಷಣೆ ಇಲ್ಲವಾಗಿದೆ. ಈ ಹಿನ್ನೆಲೆಯಲ್ಲಿ ದಿನಾಂಕ 19/07/2021 ರಂದು ನಡೆಯುವ ಕೊಪ್ಪಳ ಚಲೋ ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಭಾಗವಹಿಸಲು ಕರೆ ಕೊಡಲಾಯಿತು. ಅಖಿಲ ಭಾರತ ಗ್ರಾಮೀಣ ಕೃಷಿ ಕಾರ್ಮಿಕರ ಸಂಘದ ಅಧ್ಯಕ್ಷ ಸಣ್ಣಹನುಮಂತಪ್ಪ ಹುಲಿಹೈದರ, ಮಹದೇವ, ಹನುಮಂತ ವಿರುಪಾಪುರ, ನಿರುಪಾದಿ ಸಿದ್ದಪೂರ ಪರಶುರಾಮ ಚೌಡಕಿ, ಮಹಿಳಾ ಸಂಘದ ಅಧ್ಯಕ್ಷರಾದ ದ್ಯಾಮಮ್ಮ ಚೌಡಕಿ, ವಿಠಲ್ ದುರ್ಗೇಶ, ದಿನಾಂಕ 12/07/2021 ರಿಂದ ಬರಗೂರು ಗ್ರಾಮದಿಂದ ಜನ ಜಾಗೃತಿ ಜಾಥ ಪ್ರಾರಂಭಗೊಂಡಿದೆ. ದಿನಾಂಕ 13/07/2021 ರಂದು ಕಾರಟಗಿ ಪಟ್ಟಣದ ಹರಿಜನ ವಾರ್ಡಿನಲ್ಲಿ ಮತ್ತು ತಾಲ್ಲೂಕಿನ ಹಗೇದಾಳ, ಕನಕಗಿರಿ ತಾಲೂಕಿನ ಜೀರಾಳು, ಉಮಳಿ ಕಾಟಾಪುರ,ಹೊಸಗುಡ್ಡ ಗ್ರಾಮಗಳಲ್ಲಿ ಕಾರ್ಯಕ್ರಮ ನಡೆಯಿತು.
ವರದಿ – ಸಂಪಾದಕೀಯ