ನನ್ನ ನೆಚ್ಚಿನ ಹೀರೊ ಲಂಡನ್ ತೋಡ್ ಸಿಂಗ್   ಅವರಿಗೆ ಕ್ರಾಂತಿಕಾರಿ ಕೆಂಪು ನಮನಗಳು…

Spread the love

ನನ್ನ ನೆಚ್ಚಿನ ಹೀರೊ ಲಂಡನ್ ತೋಡ್ ಸಿಂಗ್   ಅವರಿಗೆ ಕ್ರಾಂತಿಕಾರಿ ಕೆಂಪು ನಮನಗಳು

ಅಂದು ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಭಾರತೀಯರು ರಣಕಹಳೆ ಮೊಳಗಿಸಿದ ಸಂದರ್ಭವದು. ಸಣ್ಣ ಪ್ರಾಯದ ಬಾಲಕರೂ, ವೃದ್ಧರಾದಿಯಾಗಿ ಎಲ್ಲರೂ ಹುಮ್ಮಸ್ಸಿನಿಂದ ಸ್ವಾತಂತ್ರ್ಯಕ್ಕಾಗಿ ನಡೆದ  ಹೋರಾಟದಲ್ಲಿ ತೊಡಗಿದ್ದರು. ಅದೇ ಸಂದರ್ಭದಲ್ಲಿ ಪಂಜಾಬಿನಲ್ಲಿ ಅಂದಿನ ಕಾಂಗ್ರೆಸ್‌  ಭಾರತದ ಧ್ವಜವನ್ನು ಹಾರಿಸಬೇಕೆಂದು ಕರೆ ನೀಡಿತ್ತು ಇದರ ಸುಳಿವನ್ನರಿತ ಬ್ರಿಟಿಷರು  ಭಾರತದ ಧ್ವಜ ಹಾರಿಸದಂತೆ ತಡೆಯಲು ಶಸ್ತ್ರ ಸಜ್ಜಿತ ಪೋಲಿಸರನ್ನು ನಿಯೋಜಿಸಿದರು ಬೆದರಿದ ಕಾಂಗ್ರೆಸ್ ಮುಖಂಡರು ಧ್ವಜ ಹಾರಿಸುವ ಕರೆ ಹಿಂಪಡೆದರು. ಭಗತ್ ಸಿಂಗ್ ರ ಅಪ್ಪಟ ಅಭಿಮಾನಿಯಾಗಿದ್ದ ಬಾಲಕ ಸುರ್ಜಿತ್ ಗೆ ಕರೆ ರದ್ದುಗೊಳಿಸಿರುವುದು ಗೊತ್ತಿರಲಿಲ್ಲವಾದ್ದರಿಂದ ಧ್ವಜ ಹಾರಿಸಲು ಬರ್ತಾರೆ ಆಗ ಅಲ್ಲಿನ ಕೆಲವರು ಕಾಂಗ್ರೆಸ್ ಮುಖಂಡರ ತೀರ್ಮಾನವನ್ನು ತಿಳಿಸಿದಾಗ  ಉತ್ಸಾಹಿ ಸುರ್ಜಿತ್ ಗೆ ಕಾಂಗ್ರೆಸ್ ನಡೆಯನ್ನು ಒಪ್ಪದೆ ಧ್ವಜ ಹಾರಿಸದೇ ಇರುವುದು ಸರಿಯಲ್ಲವೆಂದು ಹೇಳ್ತಾರೆ. ಆಗ ಅಲ್ಲಿದ್ದ ಕೆಲವರು ಹಾಗಾದರೆ “ನೀನು ಧ್ವಜ ಹಾರಿಸು ನೋಡೊಣ” ಪಂಥಾಹ್ವಾನ ನೀಡಿದಂತೆ ಹಾಸ್ಯ ಮಾಡುತ್ತಾರೆ. ಇದರಿಂದ ಮತ್ತಷ್ಟು ಕೆರಳಿದ ಸುರ್ಜಿತ್ ಹೋಷಿಯಾಪುರ್ ನ್ಯಾಯಾಲದ ಕಂಪೌಂಡಿನೊಳಗೆ  ಗೋಡೆ ಹಾರಿ ಬ್ರಿಟಿಷರು ಹಾರಿಸುತ್ತಿರುವ ಶರ ವೇಗದಲ್ಲಿ ಬರುವ ಬಂದೂಕಿನ ಗುಂಡುಗಳನ್ನು ಲೆಕ್ಕಿಸದೆ ಧೈರ್ಯದಿಂದ ಬ್ರಿಟನ್ ನ ಯೂನಿಯನ್ ಜ್ಯಾಕ್ (ಆಂಗ್ಲರ ಧ್ವಜ) ಕೆಳಗಿಳಿಸಿ ಭಾರತದ ತ್ರಿವರ್ಣ ಧ್ವಜ ಹಾರಿಸಿ ದೇಶಪ್ರೇಮ ಮೆರೆದು ಸಣ್ಣವಯಸ್ಸಿನಲ್ಲೇ ಬಂಧನಕ್ಕೊಳಗಾಗಿ ಕ್ರಾಂತಿಕಾರಿಯಾಗಿ ಇಡೀ ದೇಶದ ಗಮನ ಸೆಳೆಯುತ್ತಾರೆ. ನ್ಯಾಯಾಲಯದ ಮುಂದೆ ಹಾಜರುಪಡಿಸಿದಾಗ ತನ್ನ ಹೆಸರು ಲಂಡನ್ ತೋಡ್ ಸಿಂಗ್ (#ಲಂಡನ್ಹೊಡೆದುರುಳಿಸುವಸಿಂಗ್) ಎಂದು ಜೋರಾಗಿ ನಕ್ಕು ಹೇಳುತ್ತಾ ನ್ಯಾಯಮೂರ್ತಿಯನ್ನು ಬೆರಗಾಗಿಸಿದ ಬಾಲಕ…. ಅಂದು ನ್ಯಾಯಾಲಯ ಆ ಬಾಲಕನಿಗೆ ಮರಣ ದಂಡನೆಯನ್ನು ವಿಧಿಸಿದರೂ ಹದಿನೈದು ವರ್ಷ ತುಂಬಲು ಇನ್ನೂ ಕೆಲವು ದಿನಗಳು ಬಾಕಿ ಇರುವುದರಿಂದ ಮರಣದಂಡನೆಯ ಬದಲಾಗಿ ಧೀರ್ಘ ಒಂಬತ್ತು ವರ್ಷಗಳ ಕಾಲ ಅಂಡಮಾನ್ ನಿಕೋಬಾರ್ ದ್ವೀಪದ ಜೈಲಿನಲ್ಲಿ ಸೆರೆಮನೆವಾಸದ ಶಿಕ್ಷೆಗೊಳಗಾಗುತ್ತಾರೆ.   ಒಂದಿಷ್ಟು ಬೆಳಕು ಕೂಡಾ ಹಾದುಹೋಗದ ಕಗ್ಗತ್ತಲೆಯ ಕೋಣೆಯೊಳಗೆ ದೀರ್ಘ ಒಂಬತ್ತು ವರ್ಷಗಳ ಕಾಲ ಸೆರೆವಾಸ ಅನುಭವಿಸಿ ಹೊರಬರುವಾಗ ಕಣ್ಣಿನ ದೃಷ್ಟಿಯೂ ಇಲ್ಲದಂತಾಗಿರುತ್ತದೆ.   ಇಂತಹ ದೇಶಪ್ರೇಮಿ, ಸ್ವಾತಂತ್ರ್ಯ ಪ್ರೇಮಿ ಸುರ್ಜಿತ್ ಅವರು  ಸಾಮ್ರಾಜ್ಯಶಾಹಿ ವಿರುಧ್ಧ ಹೋರಾಟಗಳ ಮೂಲಕ ಬೆಳೆದು ಮುಂದೆ ದೇಶದ ರೈತ ಚಳುವಳಿ ಅಖಿಲ ಭಾರತ ಕಿಸಾನ್ ಸಭಾ #AIKS ಕಟ್ಟಿ ರಾಷ್ಟ್ರೀಯ ‌ನಾಯಕರಾಗುತ್ತಾರಲ್ಲದೇ ದುಡಿಯುವ ಜನರ ಆಶಾಕಿರಣ #CPIM ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೂ ಆಗುತ್ತಾರೆ ಕಾಮ್ರೆಡ್ ಹರಿಕಿಷನ್ ಸುರ್ಜಿತ್. ಈ ನಮ್ಮ ಹೆಮ್ಮೆಯ ಸಂಗಾತಿಯು  ವಿದ್ಯಾರ್ಥಿ ದೆಸೆಯಿಂದ ಕೊನೆಯ ಉಸಿರಿರುವ ತನಕ ದೇಶಕ್ಕಾಗಿ ಜನರ ಸಮಸ್ಯೆಗಳ ಪರಿಹಾರಕ್ಕಾಗಿ ಶ್ರಮಿಸಿದ ಮಹಾನ್ ದೇಶಪ್ರೇಮಿ ಚೇತನವಾಗಿದ್ದ ಸುರ್ಜಿತ್ ಅವರು 1 ಆಗಸ್ಟ್ 2008 ರಂದು ನಿಧನರಾದರು. ಇಂತಹ ದೇಶಪ್ರೇಮಿ ಕ್ರಾಂತಿಕಾರಿಯ ತ್ಯಾಗ ಬಲಿದಾನದ ನೈಜ ಇತಿಹಾಸವನ್ನು ವಿದ್ಯಾರ್ಥಿ- ಯುವಜನರಿಗೆ ತಿಳಿಸುವ ಹಾಗೂ ಅವರ ದಾರಿಯಲ್ಲೇ ನಡೆದು ಜನರಿಗಾಗಿ ಸದಾ ಮಿಡಿಯುವುದರ ಮೂಲಕ  ಕ್ರಾಂತಿಕಾರಿ ಚೇತನವನ್ನು ಸ್ಮರಿಸಿ ನಮಿಸಬೇಕಿದೆ.  ಕೆಂಪು ನಮನಗಳು ಸಂಗಾತಿ  ನಿಮಗಿದೊ ನಮ್ಮಯ ವೀರ ವಂದನೆ  ವೀರ ವಂದನೆ. Red Salute Comrade Harkishan sing Surjith

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *