ಕಣ್ವ ಶ್ರೀ ಸಾಯಿ ಆಸ್ಪತ್ರೆ ವೈದ್ಯರಿಂದ ಯಶಸ್ವಿ ಮಣಿಕಟ್ಟು ಮರುಜೋಡಣೆ….
-ಕರೋನಾ ಕಾಲದಲ್ಲಿ ರಾಘವೇಂದ್ರ ರೂರಲ್ ಹೆಲ್ತ್ ಕೇರ್ ಫೌಂಡೇಶನ್ ನ ಕಣ್ವ ಶ್ರೀ ಸಾಯಿ ಆಸ್ಪತ್ರೆ ವೈದ್ಯರಿಂದ ಕ್ಲಿಷ್ಟಕರವಾದ ಶಸ್ತ್ರಚಿಕಿತ್ಸೆ -ವಿಶ್ವ ಪ್ಲಾಸ್ಟಿಕ್ ಸರ್ಜರಿ ದಿನದಂದು ರಾಘವೇಂಧ್ರ ರೂರಲ್ ಹೆಲ್ತ್ ಕೇರ್ ಫೌಂಡೇಶನ್ ವೈದ್ಯರಿಂದ ಶ್ಲಾಘನೀಯ ಕಾರ್ಯ ಬೆಂಗಳೂರು ಜುಲೈ 15: ದೇಹದಿಂದ ವಿಭಜನೆ ಅಗಿದ್ದ ಕೈ ಮಣಿಕಟ್ಟನ್ನು ಮತ್ತೊಮ್ಮೆ ಜೋಡಿಸಿ ಶೇಕಡಾ 90 ರಷ್ಟು ಚಲನೆ ಸಾಧ್ಯವಾಗುವಂತಹ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಯನ್ನು ಬೆಂಗಳೂರು ನಗರದ ರಾಘವೇಂದ್ರ ರೂರಲ್ ಹೆಲ್ತ್ ಕೇರ್ ಫೌಂಡೇಶನ್ ನ ಕಣ್ವ ಶ್ರೀ ಸಾಯಿ ಆಸ್ಪತ್ರೆಯ ವೈದ್ಯರು ಮಾಡಿದ್ದಾರೆ. ಜೂನ್ 1 ರಂದು ಸಂಜೆ 7.30 ಕ್ಕೆ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವಾಗ ಯಂತ್ರಕ್ಕೆ ಸಿಲುಕಿ ಎಡಗೈನ ಮಣಿಕಟ್ಟು ದೇಹದಿಂದ ಬೇರ್ಪಟ್ಟಿತ್ತು. ಕರೋನಾ ಸಾಂಕ್ರಾಮಿಕ ರೋಗ ಹೆಚ್ಚಾಗಿದ್ದ ಸಂದರ್ಭದಲ್ಲಿ ಬಹಳಷ್ಟು ಆಸ್ಪತ್ರೆಗಳು ಈ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಯನ್ನು ನಡೆಸಲು ನಿರಾಕರಿಸಿದ್ದರು. ಈ ಸಂದರ್ಭವನ್ನು ಸವಾಲಾಗಿ ಸ್ವೀಕರಿಸಿದ ಬೆಂಗಳೂರು ನಗರದ ರಾಘವೇಂದ್ರ ರೂರಲ್ ಹೆಲ್ತ್ ಕೇರ್ ಫೌಂಡೇಶನ್ ನ ಕಣ್ವ ಶ್ರೀ ಸಾಯಿ ಆಸ್ಪತ್ರೆಯ ಡಾ.ಪ್ರಶಾಂತ ಕೇಸರಿ, ಡಾ ಪ್ರದೀಪ್ ಕುಮಾರ್ ಎನ್, ಡಾ ಸಮೀರ್ ಕುಮಾರ್ ಮತ್ತು ಡಾ ಜಯರಾಜ್ ನೇತೃತ್ವದ ತಂಡ ಅತ್ಯಂತ ಕ್ಲಿಷ್ಟಕರ ಮೈಕ್ರೋವಾಸ್ಕುಲರ್ ಶಸ್ತ್ರಚಿಕಿತ್ಸೆಯನ್ನು ನಡೆಸಿ ಮಣಿಕಟ್ಟಿನ ವರೆಗಿನ ಹ್ಯಾಂಡ್ ರಿ-ಇಂಪ್ಲಾಂಟೇಶನ್ ನನ್ನು ನಡೆಸಿತು. ಈ ಶಸ್ತ್ರಚಿಕಿತ್ಸೆ ಸುಮಾರು 6 ಗಂಟೆಗಳ ಕಾಲ ನಡೆಯಿತು. ಈ ಸಂಧರ್ಭದಲ್ಲಿ ಬಹಳಷ್ಟು ರಕ್ತಸ್ರಾವದಂತಹ ಯಾವುದೇ ರೀತಿಯ ಸವಾಲುಗಳಿಗೂ ವೈದ್ಯರ ತಂಡ ಸಿದ್ದವಾಗಿತ್ತು. ಇಂತಹ ಶಸ್ತ್ರಚಿಕಿತ್ಸೆಗಳ ಯಶಸ್ಸು ಸಾಮಾನ್ಯವಾಗಿ ಶೇಕಡಾ 50 ರಿಂದ 60 ರಷ್ಟು ಮಾತ್ರ. ಅತ್ಯಂತ ಕ್ಷಿಪ್ರವಾಗಿ ಹಾಗೂ ಸಮಯೋಚಿತವಾದ ನಿರ್ಧಾರದಿಂದಾಗಿ ರಾಹುಲ್ (ಹೆಸರು ಬದಲಿಸಲಾಗಿದೆ) ಅವರ ಕೈಯನ್ನು ಉಳಿಸಲು ಸಾಧ್ಯವಾಯಿತು ಎಂದು ಶಸ್ತ್ರಚಿಕಿತ್ಸೆ ನಡೆಸಿದ ಡಾ ಪ್ರಶಾಂತ್ ಕೇಸರಿ ಹಾಗೂ ಡಾ ಪ್ರದೀಪ್ ಕುಮಾರ್ ಎನ್ ತಿಳಿಸಿದರು. ಆಸ್ಪತ್ರೆಯ ಎಂಡಿ ಡಾ ಪ್ರದೀಪ್ ಎಸ್ ಜೆ ಮಾತನಾಡಿ, ಇಂತಹ ಶಸ್ತ್ರಚಿಕಿತ್ಸೆಗಳನ್ನು ನಡೆಸುವುದು ಬಹಳ ಕ್ಲಿಷ್ಟಕರ. ಅಲ್ಲದೆ, ಈ ಶಸ್ತ್ರಚಿಕಿತ್ಸೆಯ ಯಶಸ್ಸು ಪಡೆಯುವಲ್ಲಿ ನಮ್ಮ ವೈದ್ಯಕೀಯ ಸಿಬ್ಬಂದಿ ತಂಡದ ಶ್ರಮ ಬಹಳಷ್ಟಿದೆ. ಕರೋನಾ ಕಾಲದಲ್ಲಿ ಇದನ್ನು ಸವಾಲಾಗಿ ಸ್ವೀಕರಿಸಿ ನಮ್ಮ ಆಸ್ಪತ್ರೆಯಲ್ಲಿ ಬಹಳ ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡಿದ್ದೆವೆ ಎಂದು ಹೇಳಿದರು. ವಿಶ್ವ ಪ್ಯಾಸ್ಟಿಕ್ ಸರ್ಜರಿ ದಿನದ ಸಂಧರ್ಭದಲ್ಲೇ ಇಂತಹ ಹೆಮ್ಮೆಯ ಸುದ್ದಿಯನ್ನು ತಿಳಿಸುತ್ತಿರುವುದು ಸಂತಸದ ವಿಷಯವಾಗಿದೆ. ಬೆಂಗಳೂರು ನಗರದ ರಾಘವೇಂದ್ರ ರೂರಲ್ ಹೆಲ್ತ್ ಕೇರ್ ಫೌಂಡೇಶನ್ ನ ಕಣ್ವ ಶ್ರೀ ಸಾಯಿ ಆಸ್ಪತ್ರೆಯ ನಂದಿನಿ ಲೇಔಟ್ ನಲ್ಲಿದೆ. ಇಲ್ಲಿ ಎಲ್ಲಾ ರೀತಿಯ ವೈದ್ಯಕೀಯ ಸೌಲಭ್ಯಗಳು ಲಭ್ಯವಿರುತ್ತವೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಡಾ. ಪ್ರದೀಪ್ ಎಸ್ ಜೆ, ಎಂಡಿ ಕಣ್ವ ಶ್ರೀ ಸಾಯಿ ಆಸ್ಪತ್ರೆ (ರಾಘವೇಂದ್ರ ರೂರಲ್ ಹೆಲ್ತ್ ಕೇರ್ ಫೌಂಡೇಶನ್ ನಿಂದ ನಿರ್ವಹಿತ)
ವರದಿ – ಹರೀಶ ಶೇಟ್ಟಿ ಬೆಂಗಳೂರು