ಪದೇ ಪದೇ ನೇನಪಾಗುತ್ತೀಯ
ದಿನವಿಡಿ ಕಾಡುತ್ತೀಯ
ನಿನ್ನೆನಪಿನ ಸುರಿಮಳೆಯ
ನೀನೊಂದು ಅದ್ಭುತ ಪರಿಚಯ
ನೀನಿದ್ದರೆ ಬದುಕೇ ರಸಮಯ
ಮನೆ ಮಿಡಿಯುತ್ತಿದೆ ಇನಿಯ
ನೀನಿರಬೇಕು ಸನಿಯ
ಕನಸಲು ಕನವರಿಸುವ ನಿನ್ನ ಧ್ವನಿಯ
ಪ್ರತಿ ಮಿಡಿತದಲ್ಲೂ ನುಡಿಸುತ್ತಿದೆ ನಾದಮಯ
ಎಬ್ಬಿಸುತ್ತಿದೇ ಭಾವನೆಗಳ ಅಲೆಯ
ಬಿಡಿಸುತ್ತಿದೆ ಹೃದಯದಲ್ಲಿ ಪ್ರೀತಿಯ ರಂಗೋಲಿಯ
ನೀನಂದ್ರೆ ನಂಗಿಷ್ಟ
ನಿನ್ನ ಮಾತುಗಳ ಆಲಿಸುತ್ತಿದ್ದರೆ
ಕರ್ಣಗಳಿಗೆ ನಾರದ ಇಂಪು
ಮುಂಗುರುಳ ಸರಸಿ ನೋಡುತ್ತಿದ್ದರೆ
ಹೆಚ್ಚುತ್ತಿದೆ ನನ್ನದರಗಳಲಿ ಕೆಂಪು
ನೀನೊಮ್ಮೆ ಹತ್ತಿರ ಬಂದರೆ
ನಾಚಿ ನೀರಾಗುವ ವದನ
ನಿನ್ನ ಮುಗುಳುನಗೆ ಕಂಡರೆ
ಮನವೆಲ್ಲ ಅರಳಿದ ಹೂಬನ
ಕಾಣದಿದ್ದರೆ ನಿನ್ನ ಮೊಗ
ಉಸಿರು ಸಿಕ್ಕಿಹಾಕಿಕೊಂಡಷ್ಟು ಕಷ್ಟ
ನಿನಗಾಗಿ ಹಾಕುತ್ತಿರುವೆ ಲಾಗ
ಯಾಕಂದ್ರೆ ನೀನಂದ್ರೆ ನಂಗಿಷ್ಟ…
ಜಾನಕಿ.ಜಿ.
ತಾ/ಸೊಂಡೂರು