ಮಕ್ಕಳ ಆರೋಗ್ಯಕ್ಕೆ ಹೆಚ್ಚಿನ ಮಹತ್ವ ನೀಡಬೇಕಿದೆ : ರೊಟೇರಿಯನ್ ಎನ್ ಬಾಲಾಜಿ…..
ನೆಲಮಂಗಲ : ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಆದ ಕಾರಣ ಪೋಷಕರು ಮತ್ತು ಸರ್ಕಾರ ಮಕ್ಕಳ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದು ವಿದ್ಯಾರಣ್ಯಪುರ ರೋಟರಿ ಕ್ಲಬ್ ಅಧ್ಯಕ್ಷ ರೊಟೇರಿಯನ್ ಎನ್.ಬಾಲಾಜಿ ಅವರು ತಿಳಿಸಿದರು. ಅವರು 2020-21ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯುತ್ತಿರುವ ನೆಲಮಂಗಲ ತಾಲ್ಲೂಕಿನ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ವಿತರಿಸಲು ನೆಲಮಂಗಲ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಗೆ 3000 N95ಮಾಸ್ಕ್ ಗಳನ್ನು ರೋಟರಿ ಕ್ಲಬ್ ವಿದ್ಯಾರಣ್ಯಪುರ ಘಟಕದ ವತಿಯಿಂದ ತಲುಪಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ರೊಟೇರಿಯನ್ ಸುರೇಶ್ ಸಿತಾರಾಮು (ರೋಟರಿ ಕ್ಲಬ್ ಮಾಜಿ ಅಧ್ಯಕ್ಷರು ವಿದ್ಯಾರಣ್ಯಪುರ) ಅವರು ರೋಟರಿ ಜಿಲ್ಲೆ 3190 ವತಿಯಿಂದ ರಾಜ್ಯಾದ್ಯಾಂತ ಸುಮಾರು ಒಂದೂವರೆ ಲಕ್ಷ ಮಾಸ್ಕ್ ಗಳನ್ನು ಎಸ್.ಎಸ್.ಎಲ್.ಸಿ ಪರೀಕ್ಷ ಬರೆಯುತ್ತಿರುವ ವಿದ್ಯಾರ್ಥಿಗಳಿಗಾಗಿ ಒದಗಿಸಲಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಸಮಾಜ ಸೇವಕ ಹುಲುಕುಂಟೆ ಮಹೇಶ, ರೋಟರಿ ಕ್ಲಬ್ ವಿದ್ಯಾರಣ್ಯಪುರ ಘಟಕದ ನಿರ್ದೇಶಕರಾದ ರೊಟೇರಿಯನ್ ಪಾರ್ಥಸಾರಥಿ, ರೋಟರಿ ಕ್ಲಬ್ ಸದಸ್ಯರಾದ ರೊಟೇರಿಯನ್ ರಾಹುಲ್, ದೈಹಿಕ ಶಿಕ್ಷಕರಾದ ನಾರಯಣ್, ಪತ್ರಕರ್ತರಾದ, ವಿಜಯ್ ಮುಂತಾದವರು ಉಪಸ್ಥಿತರಿದ್ದರು.
ವರದಿ :- ಮೌನೇಶ್ ರಾಥೋಡ್ ಬೆಂಗಳೂರು