ಎನ್,ಆರ.ಬಿ ಸಿ ಅಧುನಿಕರಣಕಾಮಗಾರಿ ಅಧಿಕಾರಿಗಳ ವಿರುದ್ದ ಕ್ರಮಕ್ಕೆ ರೈತರ ಬೃಹತ ಪ್ರತಿಭಟನೆ.
ಲಿಂಗಸುಗೂರ:ಜು14ರಾಯಚೂರ ಜಿಲ್ಲೆಯ ಪ್ರಮುಖ ನೀರಾವರಿ ಯೋಜನೆಯಾದ ನಾರಾಯಣಪೂರ ಬಲದಂಡೆನಾಲೆ ಮುಖ್ಯಹಾಗೂ ಉಪಕಾಲುವೆಗಳ ಅಧುನಿಕರಣ ಕಾಮಗಾರಿಯಲಿ ಅನೇಕ ಲೋಪದೊಷಗಳಿದ್ದು ಕಳಪೆ ಗುಣಮಟ್ಟದ್ದಾಗಿದ್ದು ಸರಕಾರದಗಮನಸೇಳದರು ಗುತ್ತಿಗೆದಾರರ ಹಿತ ಕಾಪಾಡುವಸಲುವಾಗಿ ಯಾವು ಕ್ರಮ ಜರುಗಿಸಿಲ್ಲಾ ಕಾರಣ ಸಮಗ್ರ ತನಿಖೆ ನಡೆಸಿಸಂಬಂದಿಸಿದ ಕೆಬಿಜೆಎನೆಎಲ್ ಅಭಿಯಂತರ ವಿರುದ್ದ ಕ್ರಮಕ್ಕೆ ಒತ್ತಾಯಿಸಿ ರಾಜ್ಯ ರೈತಸಂಘ ನೂರಾರು ರೈತರು ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲಪಾಟೀಲ್ ಉಪಾಧ್ಯಕ್ಷ ಅಮರಣ್ಣ ಗುಡಿಹಾಳ ನೇತೃತ್ವದಲ್ಲಿ ಪಟ್ಟಣದಲ್ಲಿ ಬೃಹತ ಪ್ರತಿಭಟನೆ ನಡೆಸಿ ನಂತರಮುಖ್ಯ ಮಂತ್ರಿಗಳಿಗೆ ಬರೆದ ಮನವಿಯನ್ನು ಸಹಾಯಕ ಆಯುಕ್ತರಿಗೆ ಸಲ್ಲಿಸಿದರು. ನಾರಾಯಣಪೂರ ಬಲದಂಡೆ ನಾಲೆಗೆ ೨೦೨೦ಏಪ್ರಿಲ್ ೧೦ರಂದು ನೀರು ಬಿಡುಗಡೆ ಮಾಡಿದ ಮೇಲೆಅಧುನಿಕರಣ ಕಾಮಗಾರಿಗಳ ಬಗ್ಗೆ ಪೂರ್ವಸಿದ್ದತೆ ನಡೆಸದೆ ನೀರು ಬಿಡುವ ಸಮಯದಲ್ಲಿ ಕಾಮಗಾರಿಪ್ರಾರಂಭಿಸಿರುವದು ಈ ಭಾಗದ ರೈತರಲ್ಲಿ ಆತಂಕ ಮುಡಿಸಿದೆ ೧೪೬೬ಕೋಟಿರೂ ವಿತರಣಾ ನಾಲೆ ಅಧುನಿಕರಣ ಕಾಮಗಾರಿ ಪೂರ್ವ ಭಾವಿ ತಯಾರಿ ನಡೆಸದೆ ಕಾಮಗಾರಿಗೆಗುತ್ತಿಗೆದಾರರು ಮುಂದಾಗಿರುವದು.ನಂದವಾಡಗಿ ಮೂಲ ವಿನ್ಯಾಸಬದಲಾಯಿಸಿದ್ದು ಏಕೆ? ಅಧುನಿಕರಣ ಕಾಮಗಾರಿಯಲ್ಲಿ ಭ್ರಷ್ಠಾಚಾರದಲ್ಲಿ ಯಾರ ಪಾಲಿದೆತನಿಖೆ ನಡೆಸಿ ಮಹಿತಿ ನೀಡಬೇಕು ಎಂದು ವಿವಿಧ ಹಕ್ಕೋತ್ತಾಯಗಳಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ರಾಜ್ಯ ಉಪಾಧ್ಯಕ್ಷ ದೊಡ್ಡಬಸವನಗೌಡ ಸೂಗರಯ್ಯಮಠ,ಬಸವರಾಜ ಮಾಲಿಪಾಟೀಲ್, ಪ್ರಭಾಕರ ಪಾಟೀಲ್ ಜಯಕುಮಾರ, ಹುಚ್ಚರಡ್ಡಿಅಮೀನಗಡ. ವೀರನಗೌಡ ಹಟ್ಟಿ ಬೂದಯ್ಯಸ್ವಾಮಿ ಶಂಕ್ರಪ್ಪ ಮಲ್ಲಣ್ಣ ಗೌಡೂರ ಸಿದ್ದೇಶಗೌಡೂರ ಬಸವನಗೌಡ ಮಟ್ಟೂರ ವೆಂಕೋಬ ಬಾಲನಗೌಡ ಅಮರಣ್ಣಳಲಿ ಗಂಗಾಧರನಿಲೋಗಿ ಇತರರೂ ಭಾಗವಹಿಸಿದ್ದರು.
ವರದಿ – ಸಂಪಾದಕೀಯ