ಶಿವಮೊಗ್ಗ ಜಿಲ್ಲಾ ಬಿಜೆಪಿ ವತಿಯಿಂದ ವೇಬೇಕ್ಸ್ ತಂತ್ರಾಂಶದ ಮೂಲಕ ನಡೆದ #ರಾಷ್ಟ್ರೀಯ_ಸುರಕ್ಷತೆ ವಿಶೇಷ ವಿಚಾರ ಸಂಕಿರಣದ ವರ್ಚುಯಲ್ ಸಭೆ….
ರಾಜ್ಯ ಕಂದಾಯ ಸಚಿವರಾದ ಶ್ರೀ ಆರ್.ಅಶೋಕ್ ಅವರು ಈ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ದೇಶದ ಆಂತರಿಕ ಭದ್ರತೆ, ಗಡಿ ಭದ್ರತೆ ಹಾಗೂ ಯೋಧರಿಗೆ ನೀಡಿರುವ ಅತ್ಯಾಧುನಿಕ ಮೂಲಭೂತ ಸೌಕರ್ಯಗಳ ಬಗ್ಗೆ ಮತ್ತು ಶತ್ರು ರಾಷ್ಟ್ರ ಪಾಕಿಸ್ತಾನದ ವಿರುದ್ಧ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಕುರಿತು, ಚೀನಾ ದೇಶದ ಸೊಕ್ಕನ್ನು ಮುರಿದ ರೀತಿಯ ಕುರಿತು ಹಾಗೂ ಇನ್ನು ಹಲವಾರು ಪ್ರಮುಖ ಘಟನಾವಳಿಗಳ ಬಗ್ಗೆ ಸವಿಸ್ತಾರವಾಗಿ ಪ್ರಸ್ತಾಪಿಸಿದರು.
ವರದಿ – ಮಹೇಶ ಶರ್ಮಾ