ಭಾರತ ಸರಕಾರ ಶಿವಮೂರ್ತಿ ಮುರುಘಾ ಶರಣರಿಗೆ ಗೌರವಿಸಲಿ….
ಈ ಹಿಂದೆ,ಹಿಂದೆಂದೂ ಆಗಿರದ ರೀತಿಯಲ್ಲಿ ಈ ಬಾರಿ ಕೇಂದ್ರ ಸರ್ಕಾರವು ಒಂದು ಅತ್ಯುತ್ತಮ ಹೆಜ್ಜೆ ಜನಸಾಮಾನ್ಯರ ಮುಂದಿಟ್ಟಿರುವುದು ಮಹತ್ವ ಪೂರ್ಣ ಬೆಳವಣಿಗೆ,ಇದು ಕಾರ್ಯರೂಪಕ್ಕೆ ಬಂದರೆ,ಕೇಂದ್ರ ಸರ್ಕಾರದ ಕೀರ್ತಿ ವಿಶ್ವ ಮಟ್ಟದಲ್ಲಿ ಬೆಳಗುತ್ತದೆ ಎಂಬುವುದರಲ್ಲಿ ಎರಡು ಮಾತುಗಳಿಲ್ಲ, ಎನ್ನುವ ನಮ್ಮ ಅಭಿಪ್ರಾಯ ಇಲ್ಲಿ ಹಂಚಿಕೊಳ್ಳುತ್ತಾ,ಈ ಬಾರಿ ಪದ್ಮವಿಭೂಷಣ, ಪದ್ಮಭೂಷಣ, ಪದ್ಮಶ್ರೀ ಪ್ರಶಸ್ತಿಗಳನ್ನು ಜನರ ನೀಡುವ ಆಯ್ಕೆಯ ಮೇಲೆ ಪ್ರಶಸ್ತಿಗಳು ನೀಡಲು ಮೋದಿಜಿ ಸರ್ಕಾರ ನಿರ್ಧರಿಸಿದ ಈ ನಿಟ್ಟಿನಲ್ಲಿ ಭಾರತ ದೇಶದ ಜನಸಾಮಾನ್ಯರ ಮಠ ಎಂದೇ ಗೌರವ ಪಡೆದಿರುವ ಕರ್ನಾಟಕದ ಶೂನ್ಯಪೀಠ ಪರಂಪರೆಯ ಸುಪ್ರಸಿದ್ಧ ಚಿತ್ರದುರ್ಗ ನಗರದಲ್ಲಿರುವ ಮುರುಘಾ ಶ್ರೀ ಮಠವು ಒಂದು. ಶ್ರೀ ಮಠದ ಪೀಠಾಧಿಪತಿಗಳಾದ ಪರಮ ಪೂಜ್ಯ ಶಿವಮೂರ್ತಿ ಮುರುಘಾ ಶರಣರು ನಮ್ಮ ದೇಶ ಕಂಡ ಅತ್ಯುತ್ತಮ ಪ್ರಗತಿಪರ ವೈಜ್ಞಾನಿಕ ಮತ್ತು ವೈಚಾರಿಕ ಚಿಂತಕರು,ಸೌಹಾರ್ದತೆಯ ಪ್ರತಿಪಾದಕರು, ಸರ್ವ ಧರ್ಮಗಳ ಸಮನ್ವಕಾರರು, ವಿಶ್ವ ಭಾತೃತ್ವ ಪ್ರತಿರೂಪವೇ ಆಗಿ ನಿಸ್ವಾರ್ಥ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸಮತಾವಾದ ಹರಿಕಾರ,ಸಕಲ ಜೀವಿಗಳಿಗೆ ಲೇಸನ್ನೇ ಬಯಸಿದ ವಿಶ್ವ ಬಂಧು ಅಣ್ಣ ಬಸವಣ್ಣನವರ ಆಶಯದಂತೆ ಸರ್ವರ ಹಿತಕ್ಕಾಗಿ ಶ್ರಮಿಸುತ್ತಿದ್ದಾರೆ. ಅಲ್ಲದೆ ಮಾನವೀಯತೆ, ಸಮಾನತೆಯನ್ನು ದೇಶದ ಉದ್ದಗಲಕ್ಕೂ ವಿಸ್ತರಿಸಿ, ಬಿದ್ದವರನ್ನು ಮೇಲೆತ್ತುವ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿರುವುದು ನಾವೆಲ್ಲರೂ ಕಾಣುತ್ತೀದೇವೆ. ಹೀಗೆ ಚಿತ್ರದುರ್ಗ ಸುತ್ತಮುತ್ತಲಿನ ಜಿಲ್ಲೆ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ, ವಿದೇಶದಲ್ಲೂ ಅಪಾರ ಸದ್ಭಕ್ತರನ್ನು ಹೊಂದಿರುವ ಶ್ರೀಗಳು, ಈ ನಮ್ಮ ನಾಡಿನ ನಡೆದಾಡುವ ಶರಣರೆಂದೆ ಚಿರಪರಿಚಿತರಾಗಿದಾರೆ. ಆದಕಾರಣ ಈ ಬಾರಿಯಾದರೂ ಪರಮ ಪೂಜ್ಯ ಶಿವಮೂರ್ತಿ ಮುರುಘಾ ಶರಣರಿಗೆ ಪದ್ಮಶ್ರೀ,ಪದ್ಮಭೂಷಣ, ಪದ್ಮವಿಭೂಷಣ ಪ್ರಶಸ್ತಿಗಳಲ್ಲಿ ಯಾವುದಾದರೂಂದು ಪ್ರಶಸ್ತಿಯನ್ನು ನೀಡಿ,ಭಾರತ ಸರ್ಕಾರ ಗೌರವಿಸಿಬೇಕು, ಗೌರವಿಸುವ ಮೂಲಕ ಕೇಂದ್ರ ಸರ್ಕಾರ ತಮ್ಮ ಘನತೆಯನ್ನು ಹೆಚ್ಚಿಸಿಕೊಳ್ಳುವ ಕೆಲಸ ಮಾಡಬೇಕೆಂಬುವುದು ಈ ನಾಡಿನ ಪ್ರಜ್ಞಾವಂತ ಜನರ ಒತ್ತಾಸೆಯಾಗಿದೆ.ಈ ದಿಸೆಯಲ್ಲಿ ಇಂದಿನ ಭಾರತ ಸರಕಾರ ಹೆಜ್ಜೆ ಮುಂದಡಿ ಇಡುತ್ತದೆ ಎನ್ನುವ ಆಶಾಕಿರಣ ನಮ್ಮಲ್ಲಿ ಮೂಡುತ್ತಿದೆ. ಶರಣರ ಚಿಂತನೆ : ಬಸವಣ್ಣನವರು ಸೇರಿದಂತೆ ವಿಶ್ವ ದಾರ್ಶನಿಕರು ಕೇವಲ ಇಂದು ಭಾಷಣದ ವಸ್ತುಗಳಾಗಿದ್ದಾರೆ ಹೊರತು ಆಚರಣೆಯಲಿಲ್ಲ. ಮೌಲ್ಯಧಾರಿತ ಆಲೋಚನೆಗಳು ಮಾಯವಾಗಿ ಸಮಾಜ ತಪ್ಪು ದಾರಿಗೆ ಹೋಗುತ್ತಿದೆ ಎನ್ನುವ ಆತಂಕ ಕಾಡುತ್ತಿದೆ. ಇದಕ್ಕೆ ತಾರ್ತಿಕ ಅಂತ್ಯ ಹಾಡಲು ಶಿವಮೂರ್ತಿ ಶರಣರು ನವ ಸಮಾಜ ನಿರ್ಮಾಣದ ಅಭಿವೃದ್ಧಿಗಾಗಿ ಹಗಲಿರುಳು ಚಿಂತನೆ ನಡೆಸುತ್ತಿರುವುದು ಮತ್ತು ಅದೇ ದಿಸೆಯಲ್ಲಿ ಹೆಜ್ಜೆ ಹಾಕುತ್ತಿರುವುದು ಉತ್ತಮ ಬೆಳವಣಿಗೆ ಎನ್ನಬಹುದು.ಅಂತೆಯೇ
ಶಿವಮೂರ್ತಿ ಶರಣರು ವಿಚಾರ ಕ್ರಾಂತಿಗೆ ಮುನ್ನುಡಿ ಬರೆಯುತ್ತಿದ್ದಾರೆ.ಗೊಡ್ಡು ಸಂಪ್ರದಾಯಗಳ ವಿರುದ್ಧ ನಿರಂತರ ಹೋರಾಟ ನಡೆಸುತ್ತಿದ್ದಾರೆ, ಸಾಮಾಜಿಕ ಅನಿಷ್ಟ ಪದ್ಧತಿಗಳ ವಿರುದ್ಧ ಸಮರ ಸಾರಿದ್ದಾರೆ, ಅಸ್ಪೃಶ್ಯತೆಯಂಥ ಸಾಮಾಜಿಕ ಪಿಡುಗಿನ ವಿರುದ್ಧ ಸದಾ ದ್ವನಿ ಎತ್ತುತ್ತಿದ್ದಾರೆ. ಜನರಲ್ಲಿ ವೈಜ್ಞಾನಿಕ – ವೈಚಾರಿಕ ತಿಳುವಳಿಕೆಗಳ ಬಗ್ಗೆ ಅರಿವು ಮೂಡಿಸಲು ಸತತವಾಗಿ ಶ್ರಮಿಸುತ್ತಿದ್ದಾರೆ.ಹಾಗಿಯೇ ನಿರ್ಲಿಕ್ಷಿತ ಸಮುದಾಯಕ್ಕೆ ಆಸರೆಯಾ ದುಡಿಯುತ್ತಿದ್ದಾರೆ. ವಚನ ಚಳವಳಿ ಆಶಯಗಳನ್ನು ಹೊತ್ತು ಜನಸಾಮಾನ್ಯರನ್ನು ಎಚ್ಚರಿಸಿ ಸಮಾನತೆಗಾಗಿ ತಮ್ಮ ಇಡೀ ಜೀವನ ಸಾಗಿಸುವ ಪ್ರತಿಜ್ಞೆಯನ್ನು ಮಾಡಿದ್ದಾರೆ. ಇಂದು ಸಮಾಜದಲ್ಲಿ ದ್ವೇಷದ ಕ್ರಾಂತಿ ಬೇಡ, ಪ್ರೀತಿ – ಸ್ನೇಹ, ಸೌಹಾರ್ದತೆಯ ಶಾಂತಿ ಬೇಕಾಗಿದೆ ಎಂದು ಜನ ಜಾಗೃತಿ ಕಾರ್ಯಕ್ರಮಗಳು ಹಮ್ಮಿಕೊಂಡು ಜನರಲ್ಲಿ ಮಾನವೀಯ ಮೌಲ್ಯಗಳನ್ನು ಬಿತ್ತುವ ಅಭಿಯಾನಗಳು ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದಾರೆ. ಹೀಗೆ ಬಸವಾದಿ ಶರಣರ ವಿಚಾರಗಳನ್ನು ಮೈಗೂಡಿಸಿಕೊಂಡು ಸುಂದರ,ನೆಮ್ಮದಿಯ ಬದುಕಿನತ್ತ ಶಿವಮೂರ್ತಿ ಶರಣರ ವಿಚಾರ – ಚಿಂತನೆಗಳು ಸಾಗುತ್ತಿವೆ. ಗೌರವದ ನುಡಿ: ಶರಣರ ತತ್ವ ಸಿದ್ಧಾಂತಗಳಾದ ಕಾಯಕ, ದಾಸೋಹ,ಶಿಕ್ಷಣ,ಸಮಾನತೆ, ಮಾನವೀಯತೆ ಎಂಬ ನಿಸ್ವಾರ್ಥ ಸೇವೆಗಳು ಜನಸಾಮಾನ್ಯರಿಗೆ ಹಂಚುತ್ತಾ, ಶೈಕ್ಷಣಿಕ,ಸಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ವಿಭಾಗ ಸೇರಿದಂತೆ ವಿವಿಧ ಜನಪರ,ರೈತಪರ ಸೇವಾ ಕೈಂಕರ್ಯಗಳು ಶಿವಮೂರ್ತಿ ಶರಣರು ಸದ್ದುಗದಲ್ಲವಿಲದೆ ಮಾಡುತ್ತಿದ್ದಾರೆ. ಹೀಗಾಗಿಯೇ ಇಂದು ಶೂನ್ಯಪೀಠ ಮುರುಘಾ ಮಠ ಈ ದೇಶದ ಪ್ರಮುಖ ಮಠಗಳಲ್ಲಿ ಅಗ್ರಗಣ್ಯ ಪ್ರಮುಖ ಮಠವಾಗಿ ಹೊರಹೊಮ್ಮಿದೆ ಮತ್ತು ಬೆಳಗುತ್ತಿದೆ. ಈ ದಿಸೆಯಲ್ಲಿ ಶರಣರ ವಿಚಾರ ಧಾರೆಗಳ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಪಾಲಿಸಿಕೊಂಡು ಮತ್ತು ಹೊತ್ತುಕೊಂಡು ಸಾಗುತ್ತಿರುವ ಶ್ರೀ ಮಠವು ಇಂದು ವಿಶ್ವ ಶ್ರೇಷ್ಠ ಮಠವನ್ನಾಗಿ ಮಾಡಿದ ಕೀರ್ತಿ ಶಿವಮೂರ್ತಿ ಮುರುಘಾ ಶರಣರಿಗೆ ಸಲ್ಲುತ್ತದೆ. ಹೀಗಾಗಿ ಶ್ರೀ ಮಠವೂ ವಿಶ್ವ ಖ್ಯಾತಿಯನ್ನು ಪಡೆದುಕೊಂಡಿದೆ ಶರಣ ಬಂಧುಗಳೆ. ಆದಕಾರಣ ಶ್ರೀಗಳ ನಿಷ್ಕಲ್ಮಶ, ನಿಷ್ಕಳಂಕ, ನಿಸ್ವಾರ್ಥ ಸೇವಾ ಚಟುವಟಿಕೆಗಳು ಗುರುತಿಸಿ ಪರಮ ಪೂಜ್ಯ ಶರಣರನ್ನು ಭಾರತ ಸರಕಾರ ಸೇರಿದಂತೆ ವಿಶ್ವ ಸಂಸ್ಥೆ, ಜಾಗತಿಕ ಸಮುದಾಯವು ಗೌರವಿಸಬೇಕು, ಗೌರವಿಸುವುದು ಸರಕಾರದ ಆದ್ಯ ಕರ್ತವ್ಯವಾಗಿದೆ.
***** ಲೇಖಕರು – ಸಂಗಮೇಶ ಎನ್ ಜವಾದಿ, ಬೀದರ ಜಿಲ್ಲೆ. ರಾಜ್ಯ ಸಂಚಾಲಕರು : ಲೋಕಪ್ರಕಾಶ ಶಿಕ್ಷಣ ಸಂಸ್ಕೃತಿ ಸಾಹಿತ್ಯ ಸೇವಾ ಸಂಸ್ಥೆ ದಾರವಾಡ. ಹಾಗೂ ಜಿಲ್ಲಾಧ್ಯಕ್ಷರು : ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ಹಾಗೂ ಕರುನಾಡು ಸಾಹಿತ್ಯ ಪರಿಷತ್ತು ಬೀದರ ಜಿಲ್ಲೆ.
ವರದಿ – ಸಂಗಮೇಶ ಎನ್ ಜವಾದಿ
ಬಸವತತ್ವ ಮಾತಾಡುವ ಜನ ಸಾವಿರಾರು ಕೃತಿ ರೂಪದಲ್ಲಿ ತಂದಿದ್ದಾರೆ ಭಾರತ ರತ್ನ ಕೊಡುವ ಪ್ರಯತ್ನ ಆಗಬೇಕು
ಸತ್ಯವಾದ ಮಾತು ಗುರುವೇ