ಜುಮಲಾಪೂರ ಪಂಚಾಯತಿ ಅಡವಿಬಾವಿ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಅವ್ಯವಹಾರ. ಬಸಯ್ಯ ಹೀರೆಮಠ, ಅಮರೇಶ ಇವರಿಂದ ಆರೋಪ. ದೂರು ದಾಖಲಿಸಿದರೂ ಸೂಕ್ತ ಕ್ರಮಕ್ಕೆ ಮುಂದಾಗದ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ…..
ಕೊಪ್ಪಳ ಜಿಲ್ಲೆಯಲ್ಲಿ ಬ್ರಷ್ಟಚಾರಕ್ಕೆ ಬ್ರೇಕ್ ಹಾಕಲು ಕೆಲವು ಅಧಿಕಾರಿಗಳು ನಾನಾ ರೀತಿಯಲ್ಲಿ ಪ್ರಯತ್ನ ಪಡುತ್ತಿದ್ದಾರೆ, ಆದರೆ ಕುಷ್ಟಗಿ ತಾಲ್ಲೂಕಿನ ಜುಮಲಾಪೂರ ಗ್ರಾಮ ಪಂಚಾಯಿತಿಯಲ್ಲಿ 20118 ರಿಂದ 2019 ಹಾಗೂ 2020 ನೇ ಸಾಲಿನಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಜುಮಲಾಪೂರ ಪಂಚಾಯತಿ ವ್ಯಾಪ್ತಿಯ ಅಡವಿಬಾವಿ ಗ್ರಾಮದಲ್ಲಿ ಅಂದಿನ ಅಭಿವೃದ್ಧಿ ಅಧಿಕಾರಿಗಳಾದ ಚಂದ್ರಶೇಖರ್ ಕಂದಕೂರವರು ಉದ್ಯೋಗ ಖಾತ್ರಿ ಯೋಜನೆಯನ್ನು ಕೂಲಿಕಾರರರಿಗೆ ಏಳು ದಿನಗಳ ಕೆಲಸವನ್ನು ಎರಡುಬಾರಿ ನೀಡಿ ಹಾಗೆ ಹನ್ನೆರಡು ದಿನಗಳ ಕೆಲಸವನ್ನು ಒಂದು ಬಾರಿ ನೀಡಿ ಕೂಲಿ ಕಾರ್ಮಿಕರರಿಗೆ ದಿನಗೂಲಿ ಹಣವನ್ನು ಕಡಿಮೆ ಹಾಕಿ ಸಾಮಗ್ರಿ ಮೊತ್ತವನ್ನು ಹೆಚ್ಚಿಗೆ ಮಾಡಿ ಅಂದಾಜು ಮೊತ್ತ 6.60.196 ರೂ ಗಳನ್ನು. (ಬಿ ಓ ಸಿ) ಮುಖಾಂತರ ಬಿಲ್ ಮಾಡಿಕೊಂಡು ಕೂಲಿ ಕಾರ್ಮಿಕರಿಗೆ ಹಾಗೂ ಸರ್ಕಾರಕ್ಕೆ ಅನ್ಯಾಯ ವೆಸಗಿದ್ದಾರೆ ಎಂದು ಅಡವಿಬಾವಿ ಗ್ರಾಮದ ಬಸಯ್ಯ ಹೀರೆಮಠ ಹಾಗೂ ಅಮರೇಶ ಮಾಲಿ ಪಾಟೀಲ ಆರೋಪ ಮಾಡಿದ್ದಾರೆ. ಹಾಗೆ ಲಿಖಿತವಾಗಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗೆ ದೂರು ನಿಡಿದ್ದಾರೆ. ದೂರು ನೀಡಿ ಮೂರು ತಿಂಗಳಾದರೂ ಇತ್ತ ಮುಖ ಮಾಡದ ತಾಲೂಕು ಮಟ್ಟದ ಅಧಿಕಾರಿಗಳು ವಿರುದ್ಧ ಅಸಮಾಧಾನ ಹೋರ ಹಾಕಿ, ಹಾಗೆ ಈ ಉದ್ಯೋಗ ಖಾತ್ರಿ ಅವ್ಯವಹಾರದ ಈ ನಮ್ಮ ದೂರಿಗೆ ಸ್ಪಂದಿಸಿದೆ ಹೋದರೆ ತಾಲೂಕು ಪಂಚಾಯಿತಿ ಮುಂಭಾಗದಲ್ಲಿ ಧರಣಿ ಕೂಡಲಾಗುವದು ಎಂದು ತಿಳಿಸಿದರು. ಜುಮಲಾಪೂರ ಪಂಚಾಯತಿ 18 19 ಹಾಗೂ 20 ನೆ ಸಾಲಿನಲ್ಲಿ ಅಡವಿಬಾವಿ ಉದ್ಯೋಗ ಖಾತ್ರಿ ಅವ್ಯವಹಾರ. ಬಸಯ್ಯ ಹೀರೆಮಠ ಅಮರೇಶ ಅವರಿಂದ ಆರೋಪ. ದೂರು ದಾಖಲಿಸಿದರೂ ಸೂಕ್ತ ಕ್ರಮಕ್ಕೆ ಮುಂದಾಗದ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು.
ವರದಿ – ಅಮಾಜಪ್ಪ ಹೆಚ್.ಜುಮಲಾಪೂರ