ರೈತ ಮತ್ತು ಸಾರ್ವಜನಿಕರಿಂದ ಲೂಟಿಯನ್ನು ನಿಲ್ಲಿಸಿ ಹಾಗೂ ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹ. ಕರ್ನಾಟಕ ಪ್ರಾಂತ ರೈತ ಸಂಘಟನೆ(ಕೆಪಿಆರ್ಎಸ್)ಯಿಂದ ಅಗ್ರಹ…
ಈ ಮೂಲಕ ಕರ್ನಾಟಕ ಪ್ರಾಂತ ರೈತ ಸಂಘಟನೆ(ಕೆಪಿಆರ್‌ಎಸ್) ಲಿಂಗಸ್ಗೂರು ತಾಲೂಕು ಸಮಿತಿ ತಮಗೆ ತಿಳಿಸುವುದೇನೆಂದನೆ, ಲಿಂಗಸ್ಗೂರು ತಾಲೂಕಿನಲ್ಲಿ ರೈತರಿಗೆ ಹಾಗೂ ಸಾರ್ವಜನಿಕರಿಗೆ ಜೆಸ್ಕಾಂ ಇಲಾಖೆಯಿಂದ ಸರಿಯಾದ ಸ್ಪಂದನೆ ಮತ್ತು ಸೇವೆ ನೀಡದೇ ಇರೋದರಿಂದ ರೈತರಿಗೆ ಭಾರೀ ನಷ್ಟ ಉಂಟಾಗುತ್ತಿದೆ. ಅಲ್ಲದೇ ಟಿಸಿ ಸುಟ್ಟರೆ ರೈತರಿಗೆ ೬೦೦೦-೧೦,೦೦೦ ಸಾವಿರ ರೂಪಾಯಿ ವರೆಗೆ ಹಣಕ್ಕೆ ಬೇಡಿಕೆ ಇಡಲಾಗುತ್ತಿದೆ. ಹಣ ಕೊಟ್ಟರೂ ರೈತರ ಕೆಲಸ ಮಾಡದೇ ಸತಾಯಿಸಿ ಕಚೇರಿಗೆ ಅಲೆಯುವಂತೆ ಮಾಡಲಾಗುತ್ತಿದೆ. ಕೆಲವರಿಗೆ ಬ್ಲಾಕ್‌ಮೇಲ್ ಮಾಡಿ ಹಣ ವಸೂಲಿ ಮಾಡಲಾಗುತ್ತಿದೆ. ರೈತರು ಹಾಗೂ ಸಾರ್ವಜನಿಕರು ಸಮಸ್ಯೆ ತಿಳಿಸಲು ಕಾಲ್ ಮಾಡಿದ್ರೆ ಕಾಲ್ ಮಾಡಿದವರ ನಂಬರ್‌ಗಳನ್ನು ಬ್ಲಾಕ್‌ಲಿಸ್ಟ್ಗೆ ಹಾಕಲಾಗುತ್ತಿದೆ. ಇದು ರೈತ ಮತ್ತು ಜನವಿರೋಧಿ ನೀತಿಯಾಗಿದ್ದು, ಇದನ್ನು ಕೆಪಿಆರ್‌ಎಸ್ ತಾಲೂಕು ಸಮಿತಿ ಲಿಂಗಸ್ಗೂರು ತೀವ್ರವಾಗಿ ಖಂಡಿಸುತ್ತದೆ.
ಹಟ್ಟಿ ಶಾಖಾ ಅಧಿಕಾರಿ ಬಸಪ್ಪ ಅವರು ಕೂಡಾ ಈ ರೀತಿಯ ದುರ್ವರ್ತನೆ, ಬೇಜವಬ್ದಾರಿತನ ತೋರಿಸಿದ್ದು, ಹಲವು ಬಾರಿ ಈ ಬಗ್ಗೆ ದೂರು ನೀಡಲಾಗಿದೆ. ಒಂದು ಟಿಸಿ ನೀಡಲು ತಿಂಗಳು ವರ್ಷಗಟ್ಟಲೇ ಸತಾಯಿಸುತ್ತಾರೆ. ಟಿಸಿ ಬೇಕಿದ್ರೆ ನಿಮ್ಮದೇ ಗಾಡಿ ಹಾಗೂ ಲೇಬರ್ ಕೊಡಬೇಕು ಅಂದರೆ ಟಿಸಿ ಕೋಡ್ತೀವಿ ಎಂದು ಬೇಜವಾಬ್ದಾರಿಯಾಗಿ ಮಾತನಾಡುತ್ತಾರೆ. ಕಂಬಗಳು ಶಿಥಿಲಾವಸ್ಥೆ ತಲುಪಿ ಜನರ ಮೇಲೆ ಬೀಳುವ ಸ್ಥಿತಿ ತಲುಪಿದ್ರೂ ಹೊಸ ಕಂಬದ ವ್ಯವಸ್ಥೆ ಮಾಡೋದಿಲ್ಲ. ವಯರ್ ನೆಲಕ್ಕೆ ಜೋತು ಬಿದ್ರು ಅದನ್ನು ಟೈಟ್ ಮಾಡಿಸೊಲ್ಲ, ರೈತರಿಂದ ಈಗಾಗಲೇ ಸಾವಿರಾರು ರೂಪಾಯಿಗಳನ್ನು ಪೀಕಿದ್ದಾರೆ. ಕೆಲಸಗಳನ್ನೂ ಮಾಡಿಕೊಟ್ಟಿಲ್ಲ. ಆದ್ದರಿಂದ ಇವರ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಗೆಜ್ಜಲಗಟ್ಟಾ ಗ್ರಾಪಂಗೆ ಯಾಕೆ ಲೈನ್‌ಮನ್ ಕೊಟ್ಟಿಲ್ಲ. ಈ ಕೂಡಲೇ ಲೈನ್‌ಮನ್ ಹಾಕಿ ಅವರ ಒಎಂ ಕಾಫಿ ನೀಡಿ. ಇವತ್ತೇ ನಿರ್ಧಾರ ಮಾಡಿ.. ಲೈನ್‌ಮನ್ ಪಂಚಾಯ್ತಿಗೆ ಬರಬೇಕು. ಈಗಾಗಲೇ ಗ್ರಾಮ ಪಂಚಾಯ್ತಿಯಿAದ ರೆಜಿಲ್ಯೂಷನ್ ಪಾಸ್ ಮಾಡಿ ಆ ಪ್ರತಿಯನ್ನು ಎಇಇ ಗೆ ನೀಡಿ ಒಂದು ವಾರ ಕಳೆದರೂ ಲೈನ್ ಮನ್ ಕೊಟ್ಟಿರುವುದಿಲ್ಲ. ಅದ್ದರಿಂದ ಈ ಬಗ್ಗೆ ಕೂಡಲೇ ಕ್ರಮ ತೆಗೆದುಕೊಳ್ಳಬೇಕು. ನಿಗದಿತ ಸಮಯದೊಳಗೆ ಈ ಕೆಳಗಿನ ಬೇಡಿಕೆಗಳನ್ನು ಈಡೇರಿಸಬೇಕು, 1) ಗೆಜ್ಜಲಗಟ್ಟಾ ಗ್ರಾಪಂಗೆ ಒಂದು ಲೈನ್ ಮನ್ ನ್ನು ಹಾಕಬೇಕು. 2) ನಾರಾಯಣ ಪೇಟೆ ಓಣಿಗೆ ೨೫ ಕೆವಿಎಯ ಟಿಸಿ ನೀಡಬೇಕು. 3) ನಿಲೋಗಲ್ ವಿಲೇಜ್ ನ ೧೦೦ ಕೆವಿಎ ನ ಟಿಸಿ ಇದ್ದದ್ದನ್ನು ೬೩ ದ್ದ ನ್ನು ಅಳವಡಿಸಿದ್ದೀರಿ. ಈ ಕೂಡಲೇ ೧೦೦ ಞಗಿಂ ನ್ನು ಅಳವಡಿಸಬೆಡಕು 4) ಪ್ರತೀ ಕೆಲಸಗಳಿಗೂ ಹಣ ಸರಿಯಾದ ನಿರ್ವಹಣೆ ಇಲ್ಲ. IP seಣ ಟಿಸಿ ಸುಟ್ಟರೆ ೬-೧೦ ಸಾವಿರ ಹಣ ಇಸ್ಕೊಂಡಿದ್ದಾರೆ. ಈ ಬಗ್ಗೆ ಪರೀಶಿಲಿಸಿ ಹಣ ವಾಪಿಸ್ ನೀಡಬೇಕು. 5) ವೀರಭದ್ರ ಪ್ಪ ಅವರ ಮನೆಮೇಲೆ ಲೈನ್ ಓಗಿದ್ದಿ ತೆರವು ಗೊಳಿಸಬೇಕು. 6) ನಿಲೋಗಲ್ ಗ್ರಾಮದ ಅಗಸಿ ಮುಂದಿರುವ ಎಲ್ ಟಿ ವಯರ್ ಚೇಂಜ್ ಮಾಡಬೇಕು, 7) ಹರುಜನ ಓಣಿಯ ಶೌಚಾಲಯ ಲಹತ್ತಿರ ಕಂಬ ಸಿಪ್ಟಿಂಗ್ವಮಾಡಬೇಕು 8) ಗೆಜ್ಜಲಗಟ್ಟಾ ದ ಅಂಗಡಿಯವರ ಹೊಲದ ಲೈನ್ ನ ಜಂಪ್ ತೆಗೆದು ವಾರವಾದರೂ ಲೈನ್ ಕೊಡೊಲ್ಲ. ಈ ಪ್ರದೇಶದಲ್ಲಿ ರೈತರಿಗಟ್ಟೇ ಅಲ್ಲ.. ಹೊಲಗಳಲ್ಲೇ ೮-೧೦ ಮನೆಗಳಿದ್ದು ಇಲ್ಲಿಯ ನಿವಾಸಿಗಳು ಕತ್ತಲ್ಲಲ್ಲೇ ಕಾಲ ಕಳೆಯಬೇಕಾಗುತ್ತೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು. 9) ವೀರಾಪೂರು ಕ್ರಾಸ್ ಗೆ ಎಸ್ಸಿ ಎಸ್ಟಿ ಮನೆಗಳು ಇದ್ದು ೧೫ ವರ್ಷಗಳಿಂದ ಕತ್ತಲೆಯಲ್ಲಿ ವಾಸುತ್ತಿದ್ದಾರೆ. ಆದ್ದರಿಂದ ಈ ಕೂಡಲೇ ಅಲ್ಲಿ ಟಿಸಿ ಹಾಕಿ ವಿದ್ಯುತ್ ಸಂಪರ್ಕ ಕಲ್ಪಿಸಬೇಕು, 10) ವೀರಾಪೂರು ಗ್ರಾಮದಲ್ಲಿ ಅನೇಕ ಓಣಿಗಳಿಗೆ ವಿದ್ಯುತ್ ಕಂಬಗಳು ಇಲ್ಲ. ಈ ಕೂಡಲೇ ಕಂಬ ಹಾಕಬೇಕು. ಸಿಸಿ ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಈ ಕೂಡಲೇ ಕಂಬಗಳನ್ನು ಹಾಕಬೇಕು. 11) ವೀರಾಪೂರು ಗ್ರಾಮದ ವಾಟರ್ ಸಪ್ಲೇ ಟಿಸಿ ನಾಪತ್ತೆಯಾಗಿದೆ .. ಯಾರಿಗೆ ಮಾರಿಕೊಂಡ್ರಿ. ಈ ಟಿಸಿ ಕೂಡಲೇ ಹಾಕಬೇಕು, 12) ಗೋನವಾಟ್ಲ ತಾಂಡಾದಲ್ಲಿ ಟಿಸಿ ಸುಟ್ಟು ೩ ತಿಂಗಳು ಕಳೆದರೂ ಟಿಸಿ ಅಳವಡಿಸಿಲ್ಲ. ಸಗರಪ್ಪನ ದೊಡ್ಡಿಯ ೨೫ Sಇ ಮನೆಗಳಿಗೆ ಟಿಸಿ ಅಳವಡಿಸಬೇಕು. 13) ಕಾಳಾಪೂರದ ೧ ನೇ ವಾರ್ಡಿನ ಎಸ್ಸಿ ಓಣಿಯ ಟಿಸಿ ಸ್ಥಳಾಂತರ ಮಾಡಬೇಕು. 14) ರೈತರ ಹಾಗೂ ಸಾರ್ವಜನಿಕರ ಕರೆ ಹಾಗೂ ದೂರು ಗಳಿಗೆ ಕೂಡಲೇ ಸ್ಪಂಧಿಸಬೇಕು. 15) ಹಣದ ದಂಧೆಗೆ ಬ್ರೇಕ್ ಹಾಕಬೇಕು. ಎಂದರು ಇದಕ್ಕೆ ಸಂಬಂದಿಸಿದಂತ್ತೆ ಇವರುಗಳಿಗೆ ಪ್ರತಿಗಳು ಅಂದರೆ 1) ಮಾನ್ಯ ಶಾಖಾ ಅಧಿಕಾರಿಗಳು ಲಿಂಗಸ್ಗೂರು. 2) ಮಾನ್ಯ ಕಾರ್ಯನಿವಾಹಕ ಅಭಿಯಂತರರು ಸಿಂಧನೂರು. 3) ಮಾನ್ಯ ಎಸ್‌ಇ ರಾಯಚೂರು. 4) ಮಾನ್ಯ ಡಿ.ಎಸ್.ಹೂಲಿಗೇರಿ, ಶಾಸಕರು, ಲಿಂಗಸ್ಗೂರು..ಕಳಿಸಲಾಯಿತು.
ವರದಿ – ಸೋಮನಾಥ ಹೆಚ್. ಮುಳ‍್ಳೂರು