ವಿದ್ಯಾರ್ಥಿಗಳಿಗೆ ಸಲ್ಯೂಟ್ ಮೂಲಕ ಸ್ವಾಗತಿಸಿದ ಅಧೀಕ್ಷಕ ಕಸ್ಟೋಡಿಯನ್….
ಹಬ್ಬದ ವಾತಾವರಣದಂತೆ ಸಿಂಗಾರಗೊಂಡ SSLC ಪರೀಕ್ಷಾ ಕೇಂದ್ರಗಳು ಕೊಪ್ಪಳ : ಜಿಲ್ಲೆಯಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ಎಲ್ಲಾ ಸಿದ್ಧತೆ ಮಾಡಿಕೊಂಡು ವಿಶೇಷವಾಗಿ ಯಲಬುರ್ಗಾ ತಾಲೂಕಿನಾದ್ಯಂತ ಪರೀಕ್ಷಾ ಕೇಂದ್ರಗಳು ಹಬ್ಬದ ವಾತಾವರಣದಂತೆ ಸಿಂಗಾರಗೊಂಡಿದ್ದವು ಪರೀಕ್ಷೆ ಬರೆಯಲು ಬರುತ್ತಿರುವ ವಿದ್ಯಾರ್ಥಿಗಳಿಗೆ ಸಲ್ಯೂಟ್ ಮೂಲಕ ಬರಮಾಡಿಕೊಂಡು ಪರೀಕ್ಷಾ ಕೊಠಡಿಯ ಸಿಬ್ಬಂದಿಗಳು ಸ್ವಾಗತಿಸಿದರು ಮತ್ತು ಅವರಿಗೆ ಆತ್ಮಸ್ಥೈರ್ಯ ತುಂಬಿ ಪರೀಕ್ಷೆ ಬರೆಯಲು ಬರುತ್ತಿರುವ ವಿದ್ಯಾರ್ಥಿಗಳಿಗೆ ಸ್ಯಾನಿಟೈಸರ್ ಮಾಸ್ಕ್ ವಿತರಣೆ ಮಾಡುವ ಮೂಲಕ ಸುರಕ್ಷತಾ ನಿಯಮಗಳನ್ನು ಅನುಸರಿಸಿದರು. ಯಲಬುರ್ಗಾ ತಾಲ್ಲೂಕಿನ ಮುಧೋಳ ಶ್ರೀ ತ್ರೀಲಿಂಗೇಶ್ವರ ಪ್ರೌಢಶಾಲೆ ಪರೀಕ್ಷಾ ಕೇಂದ್ರಕ್ಕೆ ತಾಲ್ಲೂಕಿನ ತಸಿಲ್ದಾರ್ ಆದ ಶ್ರೀಶೈಲ್ ತಳವಾರ್ ಅವರು ಭೇಟಿ ನೀಡಿ ಎಲ್ಲಾ ಪರೀಕ್ಷಾ ಕೊಠಡಿಗಳನ್ನು ಪರಿಶೀಲನೆ ನಡೆಸಿ ಮಾತನಾಡಿದರು ಯಲಬುರ್ಗಾ ತಾಲೂಕಿನಲ್ಲಿ 21 ಪರೀಕ್ಷಾ ಕೇಂದ್ರಗಳಿವೆ ಪ್ರತಿ ಕೇಂದ್ರಕ್ಕೆ ಒಬ್ಬ ಮುಖ್ಯ ಅಧೀಕ್ಷಕ ಕಸ್ಟೋಡಿಯನ್ ಸ್ಥಾನಿಕ ಜಾಗೃತದಳ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಎಂದು ಮಾತನಾಡಿದರು ಮತ್ತು ಮುಧೋಳ ಗ್ರಾಮ ಪಂಚಾಯಿತಿ ಪಿ ಡಿ ಓ ಫಕೀರಪ್ಪ ಕಟ್ಟಿಮನಿಯವರು ಕೂಡ ಭೇಟಿ ನೀಡಿದರು.
ವರದಿ – ಹುಸೇನ್ ಮೋತೆಖಾನ್