ಪರಿಸರ ಸಂರಕ್ಷಣೆ ಮಾಡಿದರೆ ಮಾತ್ರ ನಮಗೆ ಉಳಿಗಾಲ……
ಇಂದು ಪರಿಸರ ಉಳಿಸುವ ಮತ್ತು ಬೆಳೆಸುವ ದಿಸೆಯಲ್ಲಿ ನಾವೆಲ್ಲರೂ ಮುಕ್ತ ಮನಸ್ಸಿನಿಂದ ಆಲೋಚನೆ ಮಾಡುವ ಮೂಲಕ ಇದರ ರಕ್ಷಣೆಗಾಗಿ ಹೆಜ್ಜೆ ಹಾಕುವುದು ಅನಿವಾರ್ಯವಾಗಿದೆ. ಅಂದರೆ ಪರಿಸರ ಸಂರಕ್ಷಣೆಯ ಉಳಿವಿಗಾಗಿ,ನಾವೆಲ್ಲರೂ ನಮ್ಮ ಮೊಂಡುತನದ ಸ್ವಾರ್ಥ ಬಿಟ್ಟು,ಸಕಲ ಜೀವರಾಶಿಗಳ ಬದುಕಿಗಾಗಿ ಪರಿಸರ ಉಳಿಸುವ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ಹಾಕಿಕೊಂಡು,ಸರಿಯಾದ ರೀತಿಯಲ್ಲಿ ಯೋಜನೆಗಳನ್ನು ಸಕಾರ ರೂಪಕ್ಕೆ ತರುವ ಕೆಲಸ ಮಾಡುವುದು ಸೇರಿದಂತೆ ಎಲ್ಲರೂ ಒಂದೊಂದು ಸಸಿಗಳು ವಾರಕ್ಕೊಮ್ಮೆವಾದರೂ ನೆಡುವ ಕೆಲಸ ಮಾಡಬೇಕಾಗಿದೆ. ಹೀಗಾದರೆ ಪರಿಸರ ಸ್ನೇಹಿ ಜೀವನವನ್ನು ನಡೆಸಲು ಸಾಧ್ಯವಾಗಬಹುದು.ಅದೇ ರೀತಿ ಆಕ್ಸಿಜನ್ ಸಮಸ್ಯೆ ಸಹ ನೀಗಬಹುದು. ಆದಕಾರಣ ಬಂಧುಗಳೇ, ಪರಿಸರ ಸಂರಕ್ಷಣೆ ಮಾಡಿದರೆ ಮಾತ್ರ ನಮಗೆ ಉಳಿಗಾಲ,ಇಲ್ಲವಾದಲ್ಲಿ ಪ್ರಕೃತಿಯ ಹೊಡೆತಕ್ಕೆ ನಾವು ಭೂಮಿ ಮೇಲೆ ಬಾಳುವುದು ದುಸ್ಥಿತಿರ ಎನ್ನುವದಂತು ಸತ್ಯ, ಇದನ್ನು ಸದಾ ನಾವುಗಳು ನೆನಪಿನಲ್ಲಿ ಇಟ್ಟುಕೊಳ್ಳಬೇಕಾಗಿರುವ ಸಂಗತಿ ಎಂದರೆ ತಪ್ಪಾಗಲಾರದು. ಅದಕ್ಕಾಗಿ ನಾವೆಲ್ಲ ಮರೆಯದೆ ಪ್ರತಿಯೊಬ್ಬರು ಒಂದೊಂದು ಅಥವಾ ನಮ್ಮ ಕೈಲಾದಷ್ಟು ಗಿಡಗಳನ್ನು ಹುಟ್ಟು ಹಬ್ಬ, ಮದುವೆ ಸಮಾರಂಭ, ಸರಕಾರಿ ಹಾಗೂ ಖಾಸಗಿ ಸಂಸ್ಥೆಗಳ ಕಾರ್ಯಕ್ರಮ ಉದ್ಘಾಟನೆಯ ಸಮಯದಲ್ಲಿ ನೆಟ್ಟು ಕೃತಜ್ಞರಾಗೋಣ. “ಕೆಲವರು ಕೇಳುತ್ತಾರಲ್ಲ, ಸಮಾಜಕ್ಕೆ ನಮ್ಮ ಕೊಡುಗೆ ಏನು ಎಂದು”. ಆಗ ನಾವು ಧೈರ್ಯದಿಂದ ಹೇಳಬಹುದು. ಸಸಿಗಳನ್ನು ನೆಡುವುದರ ಮೂಲಕ, ಮುಖಾಂತರ ಸಮಾಜಕ್ಕೆ ನನ್ನ ಸಣ್ಣ ಋಣ ತೀರಿಸಲು ಪ್ರಯತ್ನ ಮಾಡಿರುವೆನೆಂದು. ಆದ್ದರಿಂದ ಸಧ್ಯದ ಈಗಿನ ಆಧುನಿಕ ಯುಗದಲ್ಲಿ ಎಲ್ಲವೂ ಕಾಂಕ್ರೀಟ್ ಮಯವಾಗುತ್ತಿದೆ.ಇದನ್ನು ತಪ್ಪಿಸಿ, ಪರಿಸರ ಸ್ನೇಹಿಮಯ ಕಾಲ ಮಾಡುವುದು ನಮ್ಮೆಲ್ಲರ ಕೈಯಲ್ಲಿ ಖಂಡಿತಾ ಇದೆ ಎಂಬುದು ಯಾರು ಅಲ್ಲಗಳೆಯುವಂತಿಲ್ಲ. ಆದುದರಿಂದ ಈ ಸಮಯವನ್ನು ನಾವು – ನೀವು ಹಾಳು ಮಾಡಿಕೊಳ್ಳದೇ ಸಸಿಗಳು ನೆಟ್ಟು,ಸುಂದರ, ಸಮೃದ್ಧ ಹಸಿರು ವನವನ್ನಾಗಿ ಮಾಡುವ ಮೂಲಕ ಮುಂದಿನ ದಿನಗಳಲ್ಲಿ ಆಕ್ಸಿಜನ್ ಕೊರತೆ ಜೊತೆಗೆ ಮಳೆಯ ಅಭಾವ, ಕುಡಿಯುವ ನೀರಿನ ಪ್ರಮಾಣ ಕಡಿಮೆ ಆಗದಂತೆ ಪ್ರಯತ್ನ ಮಾಡಬಹುದು.ಏನಂತೀರಿ. ಮನೆಗೊಂದು ಮರ, ಊರಿಗೊಂದ ವನ ತತ್ವ ಪಾಲಿಸೋಣ, ಪರಿಸರ ರಕ್ಷಿಸೋಣ. 🌳🌳🌱🌿☘️🍀🌳 ನೆಲ, ಜಲ, ಕಾಡು ಇದ್ದರೆ ಸಮೃಧನಾಡು ನಮ್ಮ ಮುಂದಿನ ಪೀಳಿಗೆಗೆ ಪರಿಸರವನ್ನು ರಕ್ಷಿಸೋಣ ಗಿಡಮರಗಳನ್ನು ಹೆಚ್ಚೆಚ್ಚು ಬೆಳೆಸೋಣ. ಸದಾ ಹಸಿರಿನಿಂದ ಕೂಡಿದ ಪರಿಸರವನ್ನು ಪಡೆಯೋಣ. ಪರಿಸರವನ್ನು ನಾವು ರಕ್ಷಿಸಿದರೆ ಅದು ನಮ್ಮನ್ನು ಸಂರಕ್ಷಿಸುತ್ತದೆ. ಪರಿಸರವನ್ನು ಮಲಿನಗೊಳಿಸದೆ, ದುರ್ಬಳಕೆ ಮಾಡದೆ ನೈಸರ್ಗಿಕ ಪ್ರಕೃತಿಯನ್ನು ಕಾಪಾಡಿ, ಸಂರಕ್ಷಿಸೋಣ. ಸಮಾಜಕ್ಕೆ ಮಾದರಿಯಾಗೋಣ. ಸರ್ವರೂ ಪರಿಸರ ಸಂರಕ್ಷಣೆ ಮಾಡುವ ದೃಢ ಸಂಕಲ್ಪ ಮಾಡೋಣ.
ಲೇಖಕರು – ಸಂಗಮೇಶ ಎನ್ ಜವಾದಿ,