ನಿನ್ನೆ ಕೊಪ್ಪಳದಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದ ಎಲ್ಲಾ ಜನರಿಗೂ ಮತ್ತು ದಲಿತ ಸಂಘಟಕರಿಗೂ, ಪ್ರಗತಿಪರ ಚಿಂತಕರಿಗೂ ಧನ್ಯವಾದಗಳು.
ಜಾತಿ ವ್ಯವಸ್ಥೆಯನ್ನು ಅಸ್ಪೃಶ್ಯತೆ ಆಚರಣೆ, ಅಸಮಾನತೆಯನ್ನು ಮರು ಸ್ಥಾಪಿಸುವ ಕೋಮುವಾದಿ ಶಕ್ತಿಗಳು ಅಧಿಕಾರದಲ್ಲಿರುವುದರಿಂದ, ದೇಶದಲ್ಲಿ, ದಲಿತ ದಮನಿತರ ಕೊಲೆ, ದೌರ್ಜನ್ಯ ಮತ್ತು ಮಹಿಳೆಯರ ಮೇಲಿನ ಅತ್ಯಾಚಾರಗಳು ತೀವ್ರಗೊಂಡಿವೆ. ಕರ್ನಾಟಕ, ಉತ್ತರ ಪ್ರದೇಶ, ಬಿಹಾರ, ಗುಜರಾತ್ ರಾಜ್ಯಗಳು ಸೇರಿದಂತೆ ದೇಶಾದ್ಯಂತ್ಯ ಅತ್ಯಾಚಾರ ದೌರ್ಜನ್ಯಗಳು ನಿರಂತರವಾಗಿ ಮುಂದುವರೆದಿವೆ. ಮನುವಾದಿಗಳ (ಮನಸ್ಪೃತಿ ಪ್ರತಿಪಾದಕರು) ರಾಜಕೀಯ ಅಜೆಂಡಗಳನ್ನು ಮತ್ತು ಸರ್ಕಾರದ ನೀತಿಗಳು, ದೌರ್ಜನ್ಯ, ದಬ್ಬಾಳಿಕೆಗಳನ್ನು ವಿರೋಧಿಸುವವರ ಮೇಲೆ ದೇಶ ದ್ರೋಹದ ಕೇಸ್ ದಾಖಲಿಸಿ ಬಂಧಿಸಲಾಗಿದೆ. ಅಂಬೇಡ್ಕರ್ ಕುಟುಂಬದ ಸಹೋದರ ಸಂಬಂಧಿ ಮತ್ತು ಖ್ಯಾತ ಬರಹಗಾರರಾದ ಆನಂದ ತೇಲ್ತುಂಬ್ಡಿ ಸೇರಿದಂತೆ ಅನೇಕ ಜನಪರ ಸಾಹಿತಿಗಳನ್ನು, ಮಾನವ ಹಕ್ಕುಗಳ ಹೋರಾಟಗಾರರನ್ನು ಬಂಧಿಸಲಾಗಿದೆ. ಕ್ರಾಂತಿಕಾರಿ ಕವಿ ವರವರಾವ್, ಸುಧಾ ಭಾರದ್ವಜ ಇತರೆ ಅನೇಕ ಪ್ರಗತಿಪರ ಚಿಂತಕರನ್ನು ಬೀಮ ಕೊರೆಗಾಂವ ಪ್ರಕರಣದಲ್ಲಿ ಸಿಲುಕಿಸಿ ಕಳೆದ ಎರಡು ವರ್ಷಗಳಿಂದ ಜೈಲಿನಲ್ಲಿಟ್ಟಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಮೋದಿ ಸರ್ಕಾರ ದೇಶ ದ್ರೋಹ ಕಾನೂನನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ನ್ಯಾಯಾದೀಶರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಹರಿಯಾಣದ ಹೋರಾಟ ನಿರತ ನೂರು ಜನ ರೈತರನ್ನು ದೇಶ ದ್ರೋಹ ಕೇಸ್ ನಲ್ಲಿ ಬಂಧಿಸಲಾಗಿದೆ. ಬ್ರಿಟಿಷ್ ಕಾಲದ ದೇಶ ದ್ರೋಹ ಕಾನೂನು ಐಪಿಸಿ ಸೆಕ್ಷನ್ 124 (ಎ) ರದ್ದುಗೊಳಿಸಲು ಸುಪ್ರೀಂ ಕೋರ್ಟ್ ಕೇಂದ್ರಸರ್ಕಾರ ಕ್ಕೆತಾಕಿತು ಮಾಡಿದೆ. ಸರಕಾರದ ಕೋಮುವಾದಿ (ಮನಸ್ಪೃತಿ ಸಿದ್ದಾಂತ) ಅಜೆಂಡಗಳನ್ನು ಮತ್ತು ದೇಶಕ್ಕೆ ಅಪಾಯ ತಂದೊಡ್ಡುವ ರಾಜಕೀಯ ಆರ್ಥಿಕ ನೀತಿಗಳನ್ನು ವಿರೋಧಿಸಿ ಹೋರಾಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಜಾತಿಯ ದುಡಿಯುವ ಜನರು, ಜಾತಿ ಮತಗಳ ಬೇದಗಳನ್ನು ಬದಿಗೊತ್ತಿ ಐಕ್ಯಗೊಳ್ಳಬೇಕಾಗಿದೆ. ಡಿ.ಹೆಚ್.ಪೂಜಾರ.
ವರದಿ – ಸಂಪಾದಕೀಯ