ಕುಷ್ಟಗಿ ತಾಲೂಕಿನ ಮೆತ್ತನಾಳ ಗ್ರಾಮದಲ್ಲಿ ಕರ್ನಾಟಕ ರೈತ ಸಂಘಟನೆಯ ಗ್ರಾಮ ಶಾಖೆ ಉದ್ಘಾಟನೆ ಮತ್ತು ದೆಹಲಿ ರೈತರ ಹೋರಾಟದ ಜಾಗೃತಿ ಸಭೆ ನಡೆಯಿತು.
ಕರ್ನಾಟಕ ರೈತ ಸಂಘ (AIKKS) ದ ರಾಜ್ಯಾಧ್ಯಕ್ಷರಾದ ಕಾ: ಡಿ.ಹೆಚ್. ಪೂಜಾರ್ಕಾರ್ಯಕ್ರಮವನ್ನು ಉದ್ಘಾಟಸಿದರೆ.
ನಂತರ ನಡೆದ ಸಭೆಯಲ್ಲಿ, ದೆಹಲಿಯಲ್ಲಿ ನಡೆದಿರುವ ಹೋರಾಟದ ಕುರಿತು ಸಮಗ್ರವಾದ ವಿಷಯವನ್ನು ತಿಳಿಸಲಾಯಿತು. ಕೃಷಿ ಕ್ಷೇತ್ರದ ರಕ್ಷಣೆಗಾಗಿ ದೆಹಲಿಯಲ್ಲಿ ನಡೆದಿರುವ ಹೋರಾಟ 100 ನೇ ದಿನದಲ್ಲಿ ಮುಂದುವರೆದಿದೆ. 240 ಕ್ಕೂ ಹೆಚ್ಚು ರೈತರು ತಮ್ಮ ಪ್ರಾಣವನ್ನು ಹೋರಾಟಕ್ಕೆ ಸಮರ್ಪಿಸಿದ್ದಾರೆ. ಈಗಿರುವ ಕನಿಷ್ಠ ಬೆಂಬಲ ಬೆಲೆ (ಪಿನಿಮೆಮ್ ಸಪೋರ್ಟ್ ಪ್ರೈಸ್–MSP) ನೀತಿಯಿಂದ ರೈತರಿಗೆ ಯಾವ ಅನುಕೂಲವಿಲ್ಲ. ಸರ್ಕಾರ ಮೊಸಳೆ ಕಣ್ಣೀರು ಸುರಿಸುವ ಕಾರ್ಯ ಮಾಡಿ, ಜವಾಬ್ದಾರಿಯಿಂದ ಜಾರಿಕ್ಕೊಳ್ಳುತ್ತಿದೆ. ಈಗಿರುವ ಬೆಂಬಲ ಬೆಲೆ ವಂಚನೆಯಿಂದ ಕೂಡಿದೆ.ಸ್ವಾಮಿ ನಾಥನ್ ಆಯೋಗದ ವರದಿ ಜಾರಿಗೊಳಿಸಿ ವೈಜ್ಞಾನಿಕ ಬೆಲೆ ನೀಡಲು ಒತ್ತಾಯಿಸಲಾಯಿತು. MSP ಯನ್ನು ಕಾಯ್ದೆ ವ್ಯಾಪ್ತಿಗೊಳಪಡಿಸಿ, ಖಾಸಗಿ ವ್ಯಾಪಾರಿಗಳು ಕೂಡಾ ಸರ್ಕಾರ ನಿಗದಿ ಮಾಡಿದ ಬೆಲೆಯಲ್ಲಿಯೇ ಕೃಷಿ ಉತ್ಪನ್ನಗಳನ್ನು ಖರೀದಿ ಮಾಡಲು ಕಟ್ಟುನಿಟ್ಟಿನ ಆದೇಶ ಮಾಡಬೇಕು.
ತಿದ್ದುಪಡಿಗೊಂಡ ಮೂರು ಕೃಷಿ ಕಾಯ್ದೆಗಳು ಜಾರಿಯಾದರೆ ನಮ್ಮ ಹಳ್ಳಿಗಳ ಭೂಮಿ ಅಂಬಾನಿ, ಆದಾನಿ ಕಂಪನಿಗಳು ಕಸಿದುಕೊಳ್ಳುತ್ತವೆ. ನೀರಾವರಿ ಅನುಕೂಲ ಇಲ್ಲದ ಈ ಭಾಗದಲ್ಲಿ ಎಕರೆಗೆ 5 ಲಕ್ಷಕ್ಕಿಂತ ಹೆಚ್ಚಿನ ಬೆಲೆ ಬಂದರೆ, ರೈತರು ಮಾರಾಟ ಮಾಡುವ ಒತ್ತಾಯಕ್ಕೊಳಗಾಗುತ್ತಾರೆ. ಹಾಗಾಗಿ ಕೆರೆ ತುಂಬಿಸುವ ಯೋಜನೆ ಮತ್ತು ಕೃಷ್ಣ ಬಿ.ಸ್ಕೀಂ ಯೋಜನೆಯಲ್ಲಿ ನೀರಾವರಿ ಸೌಲಭ್ಯಗಳನ್ನು ಪಡೆಯುವ ಹೋರಾಟಕ್ಕೆ ಮುಂದಾಗಬೇಕು. ಆ ಮೂಲಕ ಕೃಷಿಯಲ್ಲಿ ಹೆಚ್ಚಿನ ಅಭಿವೃದ್ಧಿ ಸಾದಿಸಬೇಕೆಂದು ರೈತರನ್ನು ಎಚ್ಚರಿಸುವ ಮಾತನಾಡಿದರು. ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷರಾದ ಮಲ್ಲೇಶ ಗೌಡ ಕನ್ನಾರಮಡುಗ, ಜಿಲ್ಲಾ ಕಾರ್ಯದರ್ಶಿ ಬಸವರಾಜ ನರೆಗಲ್, ಜಿಲ್ಲಾ ಉಪಾಧ್ಯಕ್ಷರ ದೇವಪ್ಪ ಕಂಬಳಿ, ಕುಷ್ಟಗಿ ತಾ: ಕಾರ್ಯದರ್ಶಿ ಯಮನೂರಪ್ಪ, ಶಾಮೀದ್ ಸಾಬ್, ದ್ಯಾಮಮ್ಮ, ಬೆಟ್ಟಪ್ಪ, ದುರ್ಗೇಶ, ಬಾಲಪ್ಪ, ಯಮನೂರಪ್ಪ ಮಲ್ಲಾಪುರ ಇತರರು ಇದ್ದರು.
ಇಂತಿ ತಮ
ದೇವಪ್ಪ ಕಂಬಳಿ ತಾಲೂಕ
ಅಧ್ಯಕ್ಷರು ತಾಲೂಕ ಸಮಿತಿ ಕುಷ್ಟಗಿ
ವರದಿ :- ಸೋಮನಾಥ ಸಂಗನಾಳ