ನೀರಾವರಿ ಅಕ್ರಮ ಗುತ್ತಿಗೆ, 26 ರಂದು ಅಧಿಕಾರಿಗಳ ಸಭೆ,22, ರ ರಸ್ತೆ ತಡೆ ಮುಂದೂಡಿಕೆ, ಮಾನ್ಸಯ್ಯ ಆರ್……
ಕೆ ಬಿ ಜೆ ಎನ್ ಎಲ. ಅಕ್ರಮ ಗುತ್ತಿಗೆ ವಿರುದ್ಧ ಸಿಪಿಐ(ಎಂಎಲ್)ರೆಡ್ ಸ್ಟಾರ್ ಕಾನೂನು ಹೋರಾಟ !
ಲಿಂಗಸುಗೂರ ವರದಿ .ಜುಲೈ 21 ಲಿಂಗಸುಗೂರ ನಲ್ಲಿ ಸಿಪಿಐ(ಎಂಎಲ್) ರೆಡ್ ಸ್ಟಾರ್ ಪಕ್ಷದ ಆರ್.ಮಾನಸಯ್ಯ ಪತ್ರಿಕಾ ಭವನದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತಾನಾಡಿದ ಅವರು .ಎನ.ಆರ್.ಬಿ.ಸಿ. ಯ ಒಂದರಿಂದ ಹದಿನೈದರವರೆಗೆ ಬಹುತೇಕ ವಿತರಣೆ ಹಾಗೂ ಉಪ ಕಾಲುವೆಗಳನ್ನು ಗುತ್ತಿಗೆ ಅಗ್ರಿಮೆಂಟ್ ಹಾಗೂ ವರ್ಕ್ ಆರ್ಡರ್ ಇಲ್ಲದೆ ಕಿತ್ತಿಹಾಕಿ, ಅಚ್ಚುಕಟ್ಟು ಪ್ರದೇಶದ ರೈತರ ಜಮೀನಿಗೆ ಈ ಬಾರಿ ನೀರು ಸಿಗದಂತೆ ಮಾಡಿದ ಮೇ: ಎನ್.ಡಿ. ವಡ್ಡರ & ಕಂಪನಿಯ ಮತ್ತು ಕೆಬಿಜೆಎನ್ಎಲ್ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸುವಂತೆ ನಾವು ದಿನಾಂಕ : 13.07.2021ರಂದು ಲಿಂಗಸೂಗೂರು ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇವೆ. ಈ ದೂರನ್ನು ಲಿಂಗಸೂಗೂರು ಪೋಲಿಸರು FIR ಮಾಡದೆ, KBJNL ಅಧಿಕಾರಿಗಳೊಂದಿಗೆ ಶ್ಯಾಮೀಲಾಗಿ, ಗುತ್ತೇದಾರರನ್ನು ರಕ್ಷಿಸುವ ಉದ್ದೇಶದಿಂದ ಪ್ರಕರಣದ ವಿಚಾರಣೆಯನ್ನು ಮುಕ್ತಾಯಗೊಳಿಸಿ, ನಮಗೆ ನಿನ್ನೆ ದಿನಾಂಕ : 20.07 2021ರಂದು ಹಿಂಬರಹ ನೀಡಿದ್ದಾರೆ. ಇದರಿಂದ ಪೊಲೀಸ್ ಇಲಾಖೆಯು ಈ ಅಕ್ರಮದಲ್ಲಿ ನೇರವಾಗಿ ಭಾಗಿಯಾಗಿದೆ ಎಂದು ಸಾಬೀತಾಗಿದೆ. ಆಪಾದಿತ ಕಂಪೆನಿಯು ಕಳೆದ ಒಂದೂವರೆ ತಿಂಗಳುಗಳಿಂದ ಅಗ್ರಿಮೆಂಟ್ ವರ್ಕ್ ಆರ್ಡರ್ ಇಲ್ಲದೆ ಸರಕಾರದ ಕಾಲುವೆಗಳನ್ನು ಧ್ವಂಸಗೊಳಿಸಿದ, ಜೀವಂತ ಸಾಕ್ಷಿ ಇದ್ದರೂ ಇದಕ್ಕೆ ಸಂಬಂಧಿಸಿದ ದಾಖಲಾತಿ ಪುರಾವೆ ಇದ್ದರೂ ಕೆ ಬಿ ಜೆ ಎನ್ ಎಲ್ ಅಧಿಕಾರಿಗಳ ಪೂರ್ವಸಿದ್ಧತೆ ಎಂಬ ಕಟ್ಟು ಕಥೆಯನ್ನು ಬರೆದುಕೊಂಡು ಲಕ್ಷಾಂತರ ಎಕರೆ ರೈತರ ಜಮೀನಿಗೆ ನೀರು ಬರದಂತೆ ಮಾಡುವಲ್ಲಿ ಪೊಲೀಸರು ಕೆಲಸ ಮಾಡುತ್ತಿದ್ದಾರೆ. ನೀರಾವರಿ ಸಲಹಾ ಸಮಿತಿಯಿಂದ ಅಕ್ರಮಕ್ಕೆ ನೇರ ಬೆಂಬಲ ದಿನಾಂಕ : 17.07.2021ರಂದು ಮೆ : ಎನ್.ಡಿ.ವಡ್ಡರ್ ಕಂಪನಿಗೆ ಬರೆದ ಪತ್ರದಲ್ಲಿ ಕೆಬಿಜೆಎನ್ಎಲ್ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಹಾಗೆಯೇ ಸದರಿ ಟೆಂಡರ್ ನ ಅನುಮೋದನೆಯ ಕೆಲಸ ನಿಗಮದ ನಿರ್ದೇಶಕ ಮಂಡಳಿಯ ಸಭೆಯ ಮುಂದೆ ಇದೆ ಎಂದು ಹೇಳುವುದರ ಮೂಲಕ 1466 ಕೋಟಿ ಮೊತ್ತದ ಟೆಂಡರ್ ಆಗಿಲ್ಲ ಎಂದು ಘೋಷಿಸಿದೆ. ಅದೇ ಹೊತ್ತಲ್ಲಿ ಪೂರ್ವಸಿದ್ಧತೆಯ ಹೆಸರಿನಲ್ಲಿ ಇದೇ ಕಂಪೆನಿಯು ವಿತರಣಾ ಕಾಲುವೆ ಉಪಕಾಲುವೆಗಳ ಕಿತ್ತಿ ಹಾಕಿದ್ದನ್ನು ಈ ಕುರಿತು ಇದೇ ಕಂಪನಿಗೆ ನೋಟಿಸ್ ನೀಡಿ ಕೆಲಸ ನೀಡಿದ್ದನ್ನು ಸ್ಪಷ್ಟಪಡಿಸಲಾಗಿದೆ. ಆದರೆ, ದಿನಾಂಕ : 17.07.2021ರಂದು ಜರುಗಿದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಇದೇ ಕಂಪನಿ ಅವರಿಂದಲೇ ಕಿತ್ತಿಹೋದ ಕಾಲುವೆಯನ್ನು ಸರಿಪಡಿಸಿಕೊಡುವಂತೆ ನಿರ್ಧರಿಸಲಾಗಿದೆಯೆಂದು, ಇದೇ ಅಕ್ರಮ ಕಂಪೆನಿಗೆ ಸೂಚಿಸಲಾಗಿದೆ ಎಂದು ಹೇಳಲಾಗಿದೆ. ಈ ಮೂಲಕ ಇದೇ ಅಕ್ರಮವನ್ನೇ ಕೆಬಿಜೆಎನ್ಎಲ್ ಅಧಿಕಾರಿಗಳು ನೀರಾವರಿ ಸಲಹಾ ಮಂಡಳಿಯ ಸಭೆಯ ಮೂಲಕ ಸಕ್ರಮಗೊಳಿಸಿಬಿಟ್ಟಿದ್ದಾರೆ. ಆದರೆ ಸದರಿ ಕೆಲಸಕ್ಕೆ ಯಾವ ಹೆಡ್ ನಿಂದ ಹಣ ಪಾವತಿ ಮಾಡಲಾಗುತ್ತದೆ?. ಹಾಗೆಯೇ ನೀರಾವರಿ ಸಲಹಾ ಸಮಿತಿಯಲ್ಲಿ ಈ ರೀತಿ ನಿರ್ಣಯ ಮಾಡಿದ್ದು ನಿಜವೇ? ಇದನ್ನು ಉಮೇಶ್ ಕತ್ತಿಯವರು’ ಹುಲಿಗೇರಿಯವರು,ಶಿವನಗೌಡ ನಾಯಕ ಅವರು ಸ್ಪಷ್ಟಪಡಿಸಬೇಕು. ಆರ್.ಮಾನಸಯ್ಯ ಮುಖಂಡರು ಸಿಪಿಐ(ಎಂಎಲ್) ಜಿ.ಅಮರೇಶ ಜಿಲ್ಲಾ ಕಾರ್ಯದರ್ಶಿ ಸಿಪಿಐ(ಎಂಎಲ್) ಶಾಂತಕುಮಾರ ತಾಲೂಕು ಕಾರ್ಯದರ್ಶಿ ಇನ್ನಿತರರು ಉಪಸ್ಥಿತರಿದ್ದರು.
ವರದಿ – ಸಂಪಾದಕೀಯ