ವಿವಿದ ಸಮುದಾಯಗಳ ಭವನಗಳ ಉದ್ಘಾಟಿಸಿದ ಬಸವಜ್ಯೋತಿ ಯೂಥ ಫೌಂಡೇಶನ ಅಧ್ಯಕ್ಷ್ಯರಾದ ಕು. ಬಸವಪ್ರಸಾದ ಜೊಲ್ಲೆ ಯವರು….
ಯಕ್ಸಂಬಾ ಪಟ್ಟಣದಲ್ಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ 14 ನೇ ಹಣಕಾಸು ಯೋಜನೆಯಡಿ ಮಂಜೂರಾದ ಮಹಾದೇವ ಮಂದಿರದ ಸಮುದಾಯ ಭವನ 20 ಲಕ್ಷ ರೂ. ಹಾಗೂ ಆದಿನಾಥ ದಿಗಂಬರ ಜೈನ್ ಮಂದಿರದ ಸಮುದಾಯ ಭವನ 20 ಲಕ್ಷ ರೂ. ಮತ್ತು ಮರಾಠಾ ಮಂಡಳ ಸಮುದಾಯ ಭವನ 20 ಲಕ್ಷ ರೂ .ಮೊತ್ತದಲ್ಲಿ ಮಂಜೂರಾದ ಭವನಗಳನ್ನು ಆಶಾಜ್ಯೋತಿ ವಿಶೇಷ ಮಕ್ಕಳ ಶಾಲೆಯ ಅಧ್ಯಕ್ಷರಾದ ಕು. ಜ್ಯೋತಿಪ್ರಸಾದ ಜೊಲ್ಲೆ ಹಾಗೂ ಬಸವಜ್ಯೋತಿ ಯೂಥ ಫೌಂಡೇಶನ ಅಧ್ಯಕ್ಷ್ಯರಾದ ಕು. ಬಸವಪ್ರಸಾದ ಜೊಲ್ಲೆ ಯವರು ಉದ್ಘಾಟಿಸಿ, ಮಾತನಾಡಿದರು. ಬಳಿಕ ಪ್ರಧಾನಮಂತ್ರಿ ಆವಾಸ ಯೋಜನೆಯಡಿ 261 ಫಲಾನುಭವಿಗಳಿಗೆ ಮಂಜೂರಾದ ಮನೆಯ ಆದೇಶ ಪತ್ರಗಳನ್ನು ವಿತರಿಸಿದರು. ಬಳಿಕ ಜಲ ಶುದ್ಧಿಕರಣ ಘಟಕದ 3 ಲಕ್ಷ ಲೀ ನೀರಿನ ಸಂಗ್ರಹಣೆಯ ಸಾಮರ್ಥ್ಯದ ಮೇಲ್ಮಟ್ಟದ ಜಲಸಂಗ್ರಾಹಾಲಯದ (ಓವರ್ ಹೆಡ್) ಭೂಮಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಬೀರೇಶ್ವರ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಜಯಾನಂದ ಜಾಧವ,ಜ್ಯೋತಿ ಸಂಸ್ಥೆಯ ನಿರ್ದೇಶಕರಾದ ಶ್ರೀ ಕಲ್ಲಪ್ಪಾ ಜಾಧವ, ಪಟ್ಟಣ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ಶ್ರೀದೇವಿ ಮಠಪತಿ, ಉಪಾಧ್ಯಕ್ಷರಾದ ಶ್ರೀಮತಿ ಗೀತಾ ನಾಯಿಕ, ಸದಸ್ಯರಾದ ಶ್ರೀ ಮತಾಬ ಮಕಾಂದಾರ, ಶ್ರೀ ಮನೋಹರ ಕುಪ್ಪಾನಟ್ಟಿ,ಶ್ರೀ ರಾಜು ಪಾಂಗಮ, ಶ್ರೀ ಉಮೇಶ ಪೋತದಾರ, ಶ್ರೀ ಶೀತಲ ಖೋತ, ಶ್ರೀಮತಿ ಸುಜಾತಾ ಖೋತ, ಶ್ರೀ ದಯಾನಂದ ಕಾಡಾಪುರೆ, ಶ್ರೀ ಶಿವರಾಜ ಜೊಲ್ಲೆ, ಶ್ರೀಮತಿ ಮಂಜುಶ್ರೀ ಕಟ್ಟಿಕರ, ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ – ಮಹೇಶ್ ಶರ್ಮಾ