ಗಂಗಾವತಿ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ಇಂದು ಸ್ವಚ್ಚತೆ ಹಾಗೂ ಸಸಿನೆಡುವ ಕಾರ್ಯ ಮಾಡಲಾಯಿತು…
ಹೆಬ್ಬಾಳ ಗ್ರಾಮದಲ್ಲಿ ಸಮಾನ ಮನಸ್ಕರರಿಂದ ಪರಿಸರ ಕಾಳಜಿ ಐತಿಹಾಸಿಕ ಸ್ಥಳಗಳ ಸ್ವಚ್ಛತೆ. ಕಾ್ಯಕ್ರಮವು ಗಂಗಾವತಿ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿನ ಐತಿಹಾಸಿಕ ಪುರಾತನ ಕಾಲದ ಸ್ಥಳವಾದ ಶ್ರೀ ಸೋಮನಾಥ ದೇವಲಾಯ ಸುತ್ತಲು ಬೆಳದಿರುವ ಕಸ , ಹಾಗೂ ವಿವಿದ ಮುಳ್ಳಿನ ಪೊದೆ ಮತ್ತು ಸುತ್ತುವರೆದ ಕಸಗಳನ್ನು ಗ್ರಾಮದ ಆಸಕ್ತ ಸಮಾನ ಮನಸ್ಕರು ಹಿರಿಯರು ,ಯುವಕರು , ಮಕ್ಕಳು ಸೇರಿ ಸ್ವಚ್ಚತೆ ಮಾಡಲಾಯಿತು. ಹಿಂದಿನ ಕಾಲದ ಐತಿಹಾಸಿಕ ದೆವಾಸ್ಥಾನಗಳು ಕಾಣದೆ ಮರೆಯಾಗುತ್ತಿದ್ದು ನಮ್ಮ ದುರ್ದೈವ ಈ ನಿಟ್ಟಿನಲ್ಲಿ ಹೆಬ್ಬಾಳ ಗ್ರಾಮದ ಹಿರಿಯರು ಹಾಗೂ ಸಮಾನ ಮನಸ್ಕರರು ಹಾಗೂ ಮಕ್ಕಳು ಸೇರಿ ಶ್ರೀ ಸೋಮನಾಥ ದೇವಾಲ ಆವರಣ ಹಾಗೂ ಮುಂದುಗಡೆ ಸಸಿಗಳನ್ನು ನೆಟ್ಟು , ಪರಿಸರ ಕಾಳಜಿ ಹಾಗೂ ಐತಿಹಾಸಿಕ ಪರಂಪರೆಯ ದೆವಾಸ್ಥಾನವನ್ನು ಉಳಿಸುವ ಪ್ರಯತ್ನ ಮಾಡಲಾಯಿತು. ಈ ಸಂದರ್ಭದಲ್ಲಿ ಹಬ್ಬಾಳ ಗ್ರಾಮದ ಆಸಕ್ತರಾದ ಧರ್ಮಣ್ಣ ಕೃಷಿ ಅಧಿಕಾರಿಗಳು ಹಾಗೂ ಯಮನೂರಪ್ಪ ವಕೀಲರು , ಭರಮಪ್ಪ ಸಿಂಗ್ರಿ , ಉಮೇಶ ಹೆಚ್ , ಪಾತಪ್ಪ ಹೋಟಲ್ ವೀರೇಶ , ಹನುಮಂತ , ಉಮೇಶ ಹೆಚ್ , ಯಮನೂರ ಹಸಿರು ಬಳಗ ಡಣಾಪೂರ ಬಸವರಾಜ , ಹನುಮೇಶ ಹಾಗೂ ಗ್ರಾಮದ ಯುವಕರು ಹಿರಿಯರು ಸಣ್ಣ ಮಕ್ಕಳು ಬಾಗಿ ಇದ್ದರು.
ವರದಿ – ಅಮಾಜಪ್ಪ ಹೆಚ್.ಜುಮಲಾಪೂರ