ಶಿವಶರಣ ಹಡಪದ ಅಪ್ಪಣ್ಣನವರ ಜಯಂತಿ ಆಚರಣೆ. ಶರಣರ ವಿಚಾರಧಾರೆ ಜಗತ್ತಿಗೆ ಮಾದರಿ…..
ಚಿಟಗುಪ್ಪಾ : ಜಿಲ್ಲಾ ಕರುನಾಡು ಸಾಹಿತ್ಯ ಪರಿಷತ್ತು ಬೀದರ ಹಾಗೂ ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಸಂಯುಕ್ತ ಆಶ್ರಯದಲ್ಲಿ ಇಂದು ಕಲ್ಯಾಣ ಕಾಯಕ ಪ್ರತಿಷ್ಠಾನದ ಕಚೇರಿಯಲ್ಲಿ ಶಿವಶರಣ ಹಡಪದ ಅಪ್ಪಣ್ಣನವರ ಜಯಂತಿಯನ್ನು ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಆಚರಣೆ ಮಾಡಲಾಯಿತು. ಪೂಜೆ ಸಲ್ಲಿಸಿ ನಿವೃತ್ತ ಜಿಲ್ಲಾ ತೆರಿಗೆ ಅಧಿಕಾರಿಯಾದ ದಯಾನಂದ ಕಾಂಬ್ಳೆಯವರು ಮಾತನಾಡಿ 12ನೇ ಶತಮಾನದ ಬಸವಾದಿ ಪ್ರಮಥರು ಜಗತ್ತಿಗೆ ಸಮಾನತೆ, ಸಹೋದರತೆ ಬೋಧನೆ ಮಾಡಿದಾರೆ. ಮೊಟ್ಟ ಮೊದಲ ಸಂಸತ್ತಿನ ಪರಿಕಲ್ಪನೆ ತೋರಿದವರು ಶರಣರು , ಲಿಂಗಭೇದ, ಜಾತಿಭೇದ, ಮೇಲುಕಿಳುಗಳೆನ್ನುವ ಪಿಡುಗುಗಳನ್ನು ಸಮಾಜದಿಂದ ಹೋಗಲಾಡಿಸಲು ಸತತವಾಗಿ ಪ್ರಯತ್ನ ಮಾಡುವ ಮೂಲಕ ಸರ್ವರಿಗೂ ಒಳ್ಳೆಯದನ್ನು ಬಯಸಿದ್ದಾರೆ ಎಂದರು.
ಉಪನ್ಯಾಸಕ ಆನಂದ ಚೌದರಿಯವರು ಮಾತನಾಡಿ ಪ್ರತಿಯೊಬ್ಬರಿಗೂ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಸಮಾಜದಲ್ಲಿ ಸಮಾನತೆಯಿಂದ ಬಾಳಬೇಕೆಂದು ವಿಶ್ವಗುರು ಬಸವಣ್ಣನವರು ಸೇರಿದಂತೆ ಸರ್ವ ಶರಣರ ಆಶಯವಾಗಿತ್ತು. ಅದರಂತೆ ಶರಣ ಹಡಪದ ಅಪ್ಪಣ್ಣನವರ ಸಂದೇಶವಾಗಿತ್ತು ಎಂದರು. ಸಮಾಜಿಕ ಕಾರ್ಯಕರ್ತರಾದ ರಾಜು ಹಡಪದ ರವರು ಮಾತನಾಡಿ ಶರಣರ ಆಶಯದಂತೆ ನಾವೆಲ್ಲರೂ ಬದುಕು ಸಾಗಿಸಬೇಕಾಗಿದೆ.ಅಪ್ಪಣ್ಣನವರ ವಿಚಾರಧಾರೆಯಂತೆ ಕಾಯಕಜೀವಿಗಳಾಗಿ ಮುನ್ನಡೆಯಬೇಕಾಗಿದೆ.ಈ ದಿಸೆಯಲ್ಲಿ ಶರಣ ಸಾಹಿತ್ಯ ಪರಿಷತ್ತು ಕೆಲಸ ಮಾಡುತ್ತಿರುವುದು ಹೆಮ್ಮೆ ಜೊತೆಗೆ ಅತ್ಯುತ್ತಮ ಬೆಳವಣಿಗೆ ಎಂದರು. ಅಧ್ಯಕ್ಷತೆ ವಹಿಸಿದ್ದ, ಪರಿಷತ್ತಿನ ಅಧ್ಯಕ್ಷರು, ಸಾಹಿತಿಯಾದ ಸಂಗಮೇಶ ಎನ್ ಜವಾದಿಯವರು ಮಾತನಾಡಿ 12ನೇ ಶತಮಾನದ ಬಸವಾದಿ ಶರಣರ ಸಂಕುಲದಲ್ಲಿ ಪ್ರಮುಖ ಶರಣರಾಗಿ ಕಂಡವರು ಹಡಪದ ಅಪ್ಪಣ್ಣನವರು.ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿ,ಅನುಭವ ಮಂಟಪದ ಸಂಚಾಲಕರಾಗಿ ಮಾಡಿರುವ ಸೇವೆ ಅಪಾರವಾದದ್ದು. ಅವರ ಕಾಯಕ ವೃತ್ತಿಯೊಂದಿಗೆ ದಿನನಿತ್ಯ ದಾಸೋಹ ವ್ಯವಸ್ಥೆ ಮಾಡುವುದರೊಂದಿಗೆ ವಚನ ರಚನೆಗಳಲ್ಲಿ ತೊಡಗಿಸಿಕೊಂಡು ಸಮಾನತೆ ಹಾಗೂ ಮಾನವೀಯ ಮೌಲ್ಯಗಳ ಸಂದೇಶಗಳನ್ನು ಜಾಗತಿಕ ಮಟ್ಟದಲ್ಲಿ ಸಾರಿದ್ದಾರೆ.ಹಾಗಾಗಿ ಶರಣರ ವಿಚಾರಧಾರೆಗಳೂ ಜಗತ್ತಿಗೆ ಮಾದರಿಯಾಗಿವೆ.ಅದರಂತೆ ನಾವೆಲ್ಲರೂ ಇಂದು ಒಂದು ದಿನ ಇವರ ಜಯಂತಿ ಆಚರಣೆ ಮಾಡಿ ಮರೆಯುವಂತಿಲ್ಲ. ಅವರ ಆದರ್ಶ ವಿಚಾರಗಳು ನಾವೆಲ್ಲರೂ ನಮ್ಮ ಜೀವನದಲ್ಲಿ ಅಳವಡಿಸಿಕೊಂಡು,ಸಮಾಜಕ್ಕೆ ಮಾದರಿಯಾಗಿ ಬದುಕುವ ಮೂಲಕ ನಮ್ಮ ಋಣವನ್ನು ತೀರಿಸುವ ಪ್ರಯತ್ನ ಮಾಡಬೇಕು. ಅಂದಾಗ ಮಾತ್ರ ಜಯಂತಿ ಆಚರಣೆ ಮಾಡಿರುವುದಕ್ಕೂ ಸ್ವಾರ್ಥಕವಾಗುತ್ತದೆ. ಆದಕಾರಣ ನಾವೆಲ್ಲರೂ ಈ ದಿಸೆಯಲ್ಲಿ ಹೆಜ್ಜೆ ಹಾಕೋಣವೆಂದು ಕರೆಯನ್ನು ನೀಡಿದರು. ಕಾರ್ಯಕ್ರಮದಲ್ಲಿ ತಾಲೂಕು ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷರಾದ ರಾಜಪ್ಪಾ ಜಮಾದಾರ್, ಸಹಕಾರಿ ಧುರೀಣ ತಿಪ್ಪಣ್ಣಾ ಶರ್ಮಾ, ಅಯ್ಯಪ್ಪ ಪದವಿ ಮಾಹಾವಿಧ್ಯಾಲಯದ ಪ್ರಾಚಾರ್ಯ ಎನ್ ಎಸ್ ಮಲ್ಲಶೆಟ್ಟಿ, ಉಪನ್ಯಾಸಕ ಮಲ್ಲಿಕಾರ್ಜುನ ತೀರಲಾಪೂರೆ, ಮನೋಹರ್ ಜಕ್ಕಾ,ಚನ್ನಬಸಪ್ಪ ಅಂಬಲಗಿ ಸೇರಿದಂತೆ ಪರಿಷತ್ತಿನ ಪದಾಧಿಕಾರಿಗಳು, ಹಪಡದ ಸಮಾಜದ ಮುಖಂಡರುಗಳಾದ ಮಲ್ಲಿಕಾರ್ಜುನ ಎಸ್.ಕಟ್ಟಿಮನಿ,ರಾಜಕುಮಾರ್ ಆರ್.ಹಡಪದ,ರೇವಣ್ಣಸಿದ್ದಪ್ಪಾ ಹಡಪದ,ಅಭಿಷೇಕ್ ಹಡಪದ, ಪ್ರಭು ಹಡಪದ ರಾಹುಲ್, ಉಪಸ್ಥಿತರಿದ್ದರು.ಬೀಮಶೇಟ್ಟಿ ವಡ್ಡನಕೇರಾ ರವರು ನಿರೂಪಿಸಿ,ವಂದಿಸಿದರು.
ವರದಿ – ಸಂಗಮೇಶ ಎನ್ ಜವಾದಿ