ಗುರಿ–ಗುರು ಇದ್ದರೆ ಬಾಳು ಬಂಗಾರ,ಯೋಗ ಶಿಕ್ಷಕಿ–ಬಿ. ಗೌರಮ್ಮ….
ವಿಜಯನಗರ ಜಿಲ್ಲೆ ಕೂಡ್ಲಿಗಿ, ಮನುಷ್ಯನಿಗೆ ಗುರಿ ಇದ್ದರಷ್ಟೆ ಸಾಲದು ಗುರಿ ತಲುಪುವ ಮಾರ್ಗವನ್ನು ತಿಳಿಸಲು ಗುರು ಬೇಕೇ ಬೇಕು.ಗುರು ಇದ್ದರೆ ಮಾತ್ರ ನಮ್ಮ ಬದುಕು ಬಂಗಾರ ಆಗಲಿದೆ ಎಂದು ಪತಂಜಲಿ ಯೋಗ ಪರಿವಾರದ ಬಳ್ಳಾರಿ ಜಿಲ್ಲಾ ಮಹಿಳಾ ಪ್ರಭಾರಿ ಹಾಗೂ ನಿವೃತ್ತ ಶಿಕ್ಷಕಿ ಬಿ.ಗೌರಮ್ಮ ಅಭಿಪ್ರಾಯಪಟ್ಟರು. ಗುರುಪೂರ್ಣಿಮೆಯ ನಿಮಿತ್ತ ಪತಂಜಲಿ ಯೋಗ ಪರಿವಾರ ಕೂಡ್ಲಿಗಿ ಶಾಖೆಯಿಂದ,ಪಟ್ಟಣದ ಜೂನಿಯರ್ ಕಾಲೇಜ್ ಮೈದಾನದಲ್ಲಿ ಹಮ್ಮಿಕೊಂಡಿದ್ದ. ಯೋಗ ಕಕ್ಷೆಯಲ್ಲಿ ಪಾಲ್ಗೊಂಡು ಮಾತನಾಡಿದರು,ಇಂದು ಆನೇಕರಲ್ಲಿ ಗುರಿಯೂ ಇಲ್ಲ,ಗುರು ಮೊದಲೇ ಇಲ್ಲ.ಹೀಗಾಗಿ ಅವರ ಬಾಳು ಗೊತ್ತು ಗುರಿ ಇಲ್ಲದೆ,ಸೂತ್ರ ಹರಿದ ಗಾಳಿಪಟದಂತೆ ಸಾಗಿದೆ.ಇದು ಕಳವಳಕಾರಿ ವಿಷಯವಾಗಿದೆ, ಪ್ರತಿಯೊಬ್ಬರಲ್ಲಿ ಮುಂದೆ ಗುರಿ, ಹಿಂದೆ ಗುರು ಇರಬೇಕು.ಬದುಕಿನಲ್ಲಿ ವಿಶೇಷವಾಗಿ ಗುರುವಿಗೆ ಮಹತ್ತರ ಸ್ಥಾನ ಇದ್ದು,ಗುರುವೇ ದೇವರು ನಮಗೆಲ್ಲ.ಹೀಗಾಗಿ ನಿತ್ಯ ನಾವು ಗುರುವನ್ನು ಸ್ಮರಿಸುತ್ತಾ ನಮ್ಮ ದಿನದ ಕಾರ್ಯ ಆರಂಭಿಸಬೇಕು.ಆಗ ಬದುಕಿನಲ್ಲಿ ಶ್ರೇಯಸ್ಸು ಸಿಗುತ್ತದೆ ಎಂದರು.ಯೋಗ ಸಾಧಕರಾದ ಕೋಟೇಶ್ ಚಿತ್ರಗಾರ್,ಸ್ವರೂಪ್ ಕೊಟ್ಟೂರು,ಚಕ್ರಪಾಣಿ,ಗಂಟಿ ವಿಜಯ ಲಕ್ಷ್ಮಿ,ಗುರುರಾಜ್, ಮಾತನಾಡಿ ಗುರುವಿನ ಮಹತ್ವವನ್ನು ಕೊಂಡಾಡಿದರು.ಇದೇ ವೇಳೆ ನಿವೃತ್ತ ಶಿಕ್ಷಕಿ ಗೌರಮ್ಮ ಅಗ್ನಿಹೋತ್ರ ಮಾಡಿ, ಅದರ ಮಹತ್ವವನ್ನು ಎಲ್ಲರಿಗೂ ತಿಳಿಸಿದರು.ಕಾರ್ಯಕ್ರಮದಲ್ಲಿ ಯೋಗ ಸಾಧಕರಾದ ಸುನೀಲ್, ಸುರೇಶ್,ಮಾಣಿಕ್ಯ,ಜ್ಯೋತಿ ಮಾಣಿಕ್ಯ,ಚನ್ನಕೇಶವ,ಸರಸ್ವತಿ ಚಿತ್ರಗಾರ್,ಸುಮಾಸುರೇಶ್ ಮುಂತಾದವರು ಇದ್ದರು. ವರದಿ – ಚಲುವಾದಿ ಅಣ್ಣಪ್ಪ