ಯಲಬುರ್ಗಾ : ಪಟ್ಟಣದಲ್ಲಿ ಹಡಪದ ಅಪ್ಪಣ್ಣನವರ 887 ನೇ ಜಯಂತ….
ಅಪ್ಪಣ್ಣ ಸಮಾಜದವರು 12ನೇ ಶತಮಾನದ ವಚನ ಚಳವಳಿ ಮತ್ತು ಸಾಮಾಜಿಕ ಕ್ರಾಂತಿಯ ಹರಿಕಾರರಲ್ಲಿ ಒಬ್ಬರಾಗಿದ್ದಾರೆ ಎಂದು ತಾಲೂಕ ಅಧ್ಯಕ್ಷರಾದ ಶಿವಪ್ಪ ಶಾಸ್ತ್ರಿಯವರು ಹೇಳಿದರು ಪಟ್ಟಣದ ಶ್ರೀ ಹಡಪದ ಅಪ್ಪಣ್ಣ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಶಿವಶರಣ ಹಡಪದ ಅಪ್ಪಣ್ಣನವರ 887 ನೇ ಜಯಂತಿಗೆ ಚಾಲನೆ ನೀಡಿ ಮಾತನಾಡಿದರು. ಶರಣರ ಆದರ್ಶಗಳು ಕೇವಲ ಆಚರಣೆಗೆ ಸೀಮಿತವಾಗದೆ ನಮ್ಮೆಲ್ಲರ ಬದುಕಿಗೆ ಪ್ರೇರಣೆಯಾಗಬೇಕು ಎಂದು 12ನೇ ಶತಮಾನದಲ್ಲಿ ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿದ್ದ ಅಪ್ಪಣ್ಣನವರು ಸಾಕಷ್ಟು ವಚನಗಳನ್ನು ರಚಿಸುವ ಮೂಲಕ ಸಮಾಜಕ್ಕೆ ದಾರಿದೀಪವಾಗಿದ್ದಾರೆ ಎಂದು ಮಾತನಾಡಿದರು. ಸಂಸ್ಥಾನ ಹಿರೇಮಠದ ಸಿದ್ದಯ್ಯ ಸ್ವಾಮಿ ಅವರಿಂದ ಹಡಪದ ಅಪ್ಪಣ್ಣ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ನೀಲಪ್ಪ ತಳಕಲ್. ಚನ್ನಪ್ಪನ ನೀಡಸೇಷಿ. ಮಹದೇವಪ್ಪ ಹಡಪದ್ ಪ್ರಭು ಮಾರನಾಳ ಮಂಜುನಾಥ್ ಹಡಪದ್ ವೀರಭದ್ರಪ್ಪ ಹಡಪದ್ ಸುರೇಶ್ ಜಾಲಿಹಾಳ್ ಶರಣಪ್ಪ ಹಡಪದ್ ಇನ್ನು ಹಲವಾರು ಉಪಸ್ಥಿತರು ಭಾಗಿಯಾಗಿದ್ದರು.
ವರದಿ – ಹುಸೇನ್ ಮೋತೆಖಾನ್