ರೈತರಿಗೆ ಸಮರ್ಪಕವಾಗಿ ಯೂರಿಯಾ ರಸಗೊಬ್ಬರ ಪ್ರತಿಯೊಬ್ಬರಿಗೂ ಪೂರೈಕೆಯಾಗಬೇಕು ಹಾಗೂ ಮಳೆಗೆ ಬಿದ್ದ ಮನೆಗಳಿಗೆ ಸೂಕ್ತ ಪರಿಹಾರ ನೀಡಲು ಜೆಡಿಎಸ್ ಮುಖಂಡರಿಂದ ಪ್ರತಿಭಟನೆ….

Spread the love

ರೈತರಿಗೆ ಸಮರ್ಪಕವಾಗಿ ಯೂರಿಯಾ ರಸಗೊಬ್ಬರ ಪ್ರತಿಯೊಬ್ಬರಿಗೂ ಪೂರೈಕೆಯಾಗಬೇಕು ಹಾಗೂ ಮಳೆಗೆ ಬಿದ್ದ ಮನೆಗಳಿಗೆ ಸೂಕ್ತ ಪರಿಹಾರ ನೀಡಲು ಜೆಡಿಎಸ್ ಮುಖಂಡರಿಂದ ಪ್ರತಿಭಟನೆ….

ಯಲಬುರ್ಗಾ ಪಟ್ಟಣದಲ್ಲಿ ಜೆಡಿಎಸ್ ತಾಲೂಕು ಘಟಕದ ಕಾರ್ಯಕರ್ತರು ಸ್ಥಳೀಯ ಕಿತ್ತೂರು ರಾಣಿ ಚೆನ್ನಮ್ಮ ಸರ್ಕಲ್ ನಲ್ಲಿ ನಿಂದ ಹೊರಟು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ತಹಸೀಲ್ದಾರ್ ಕಚೇರಿಗೆ ತೆರಳಿ ಪ್ರತಿಭಟನೆ ನಡೆಸಿದರು.

ತಾಲ್ಲೂಕು ಜೆಡಿಎಸ್ ಅಧ್ಯಕ್ಷರಾದ ಮಲ್ಲನಗೌಡ ಕೋನನ ಗೌಡರ್ ಅವರು ಮಾತನಾಡಿ. ರೈತರಿಗೆ ಸಮರ್ಪಕವಾಗಿ ಯೂರಿಯಾ ರಸ ಗೊಬ್ಬರವನ್ನು ಸಮರ್ಪಕವಾಗಿ ಪೂರೈಸಬೇಕು  ಮತ್ತು ಮಳೆಯಿಂದ ಆಗಿರುವ ಬೆಳೆ ಹಾನಿಯ ಪರಿಹಾರವನ್ನು ಅತಿಶೀಘ್ರವಾಗಿ ವಿತರಿಸಲು ಕ್ರಮ ಕೈಗೊಳ್ಳಬೇಕು ಹಾಗೂ ತಾಲೂಕಿನಾದ್ಯಂತ ನಿರಂತರ ಬಿಟ್ಟುಬಿಡದೆ ಕಾಡುತ್ತಿರುವ ಜಿಟಿ ಜಿಟಿ ಮಳೆಯು ಸುರಿಯುತ್ತಿರುವುದರಿಂದ ಕುಸಿದು ಬಿದ್ದ ಮನೆಗಳಿಗೆ ಹಾಗೂ ಶಿಥಿಲಾವಸ್ಥೆ ತಲುಪಿದ ಮನೆಗಳಿಗೆ ಪರಿಹಾರ ವಿತರಿಸಬೇಕು ಪರ್ಯಾಯ ಮನೆಗಳಿಗೆ ನಿರ್ಮಾಣ ಮಾಡಿಕೊಡಬೇಕು. ಕೊಪ್ಪಳ ಜಿಲ್ಲೆಗೆ ಮಂಜೂರಾದ ವಿಶ್ವವಿದ್ಯಾಲಯವನ್ನು ಹಿಂದುಳಿದ ತಾಲೂಕು ಯಲಬುರ್ಗಾ ಪಟ್ಟಣದಲ್ಲಿ ಸ್ಥಾಪನೆ ಮಾಡಬೇಕು ಎಂದು ಒತ್ತಾಯಿಸಿದರು ಜೆಡಿಎಸ್  ಕಾರ್ಯಾಧ್ಯಕ್ಷರಾದ ಶರಣಪ್ಪ ರಾಂಪುರ್ ಅವರು ಮಾತನಾಡಿದರು.  ರಾಜ್ಯ ಸರ್ಕಾರ ರೈತರ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸಬೇಕು ಇಲ್ಲದಿದ್ದರೆ ಮುಂದಿನ ದಿನಮಾನಗಳಲ್ಲಿ ನಮ್ಮ ಪಕ್ಷದಿಂದ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಗ್ರೇಡ್ 2 ತಹಸಿಲ್ದಾರ್ ರಾದ ನಾಗಪ್ಪ ಸಜ್ಜನ್ ಅವರಿಗೆ ಮನವಿಯನ್ನು ಸಲ್ಲಿಸಿದರು.  ಈ ಸಂದರ್ಭದಲ್ಲಿ ಕುಕನೂರು ಜೆಡಿಎಸ್ ತಾಲೂಕ್ ಅಧ್ಯಕ್ಷರಾದ ಸುರೇಶ ಗುರಿಕಾರ್ ಮತ್ತು ಪ್ರಧಾನ ಕಾರ್ಯದರ್ಶಿಗಳಾದ ಬಸವರಾಜ್ ಗುಳಗುಳಿ ಉಪಾಧ್ಯಕ್ಷರಾದ ಕರಿಯಪ್ಪ ತಳವಾರ. ಮಾರುತಿ ಸೂಳಿಕೇರಿ ಗವಿ ಹಳ್ಳಿ ನಿಂಗನಗೌಡ ಟಣಕನಕಲ್ ಹನುಮಂತಗೌಡ ಮಾಲಿಪಾಟೀಲ್ ಕರಿಯಪ್ಪ ನಂದಿಹಾಳ ವೀರಣ್ಣಗೌಡ ಹಿರೇಗೌಡರ ಇನ್ನುಳಿದ ಮುಖಂಡರು ಮತ್ತಿತರರು ಭಾಗಿಯಾಗಿದ್ದರು.

ವರದಿ – ಹುಸೇನ್ ಮೋತೆಖಾನ್

Leave a Reply

Your email address will not be published. Required fields are marked *