ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆಯಲ್ಲಿ ಜಿಲ್ಲಾಧಿಲಾರಿ ಆರ್.ರಾಮಚಂದ್ರನ್ ಅಭಿಮತ….
ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿ ಸರ್ಕಾರದ ಕಣ್ತೆರೆಸುವಲ್ಲಿ ಪತ್ರಕರ್ತರ ಪಾತ್ರ ಅತ್ಯಂತ ಮಹತ್ವದ್ದು ಬೀದರ್: ಸಾಮಾಜಿಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಮೂಲಕ ಸರ್ಕಾರದ ಕಣ್ತೆರೆಸುವ ಪತ್ರಕರ್ತರ ಕಾರ್ಯ ನಿಜಕ್ಕೂ ಪ್ರಶಂಸನೀಯ ಎಂದು ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಹೇಳಿದರು. ಜಿಲ್ಲಾ ಕೇಂದ್ರ ಬೀದರನ ಎಸ್.ಆರ್.ಎಸ್ ಸಭಾ ಮಂಟಪದಲ್ಲಿ ವಾರ್ತಾ ಮತ್ತು ಪ್ರಚಾರ ಇಲಾಖೆ ಮತ್ತು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಅಧಿಕಾರಿ, ಚುನಾಯಿತ ಪ್ರತಿನಿಗಳು ರಷ್ಟೇ ಗಮನಿಸಿದರೂ ಅದೆಷ್ಟೋ ಸಮಸ್ಯೆ ಗಮನಕ್ಕೆ ಬರುವುದಿಲ್ಲ. ಅಂಥ ಸಮಸ್ಯೆ ಕುರಿತು ದಿನಪತ್ರಿಕೆಗಳೇ ಬೆಳಕಿಗೆ ತರುವ ಮೂಲಕ ಅಭಿವೃದ್ಧಿಗೆ ಕಾರಣರಾಗುತ್ತಾರೆ. ಜಿಲ್ಲೆಯಲ್ಲಿ ಈಗ ಎಲ್ಲ ಪತ್ರಿಕೆಗಳ ಪತ್ರಕರ್ತರು ಚೆನ್ನಾಗಿ ಕರ್ತವ್ಯ ನಿಭಾಯಿಸುತ್ತಿರುವುದು ಆರೋಗ್ಯಪೂರ್ಣ ಸಂಗತಿ. ಮುಂದಿನ ದಿನಗಳಲ್ಲಿ ಅದನ್ನು ಇನ್ನಷ್ಟು ಚುರುಕುಗೊಳಿಸಬೇಕು ಎಂದು ಸಲಹೆ ನೀಡಿದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ, ಸಂಘದ ಹುಟ್ಟು, ಬೆಳವಣಿಗೆ, ನೋಂದಾಯಿತ ಸದಸ್ಯರ ಕ್ಷೇಮಾಭಿವೃದ್ದಿಗಾಗಿ ಕೈಗೊಳ್ಳುತ್ತಿರುವ ವಿನೂತನ ಯೋಜನೆಗಳ ಕುರಿತು ವಿಸ್ತೃತ ವಿವರಿಸಿದರು. ದಿವ್ಯ ಸಾನಿಧ್ಯ ವಹಿಸಿದ್ದ ಬೀದರ್ ರಾಮಕೃಷ್ಣ ವಿವೇಕಾನಂದ ಆಶ್ರಮದ ಜ್ಯೋತಿರ್ಮಯಾನಂದ ಸ್ವಾಮೀಜಿ ಪತ್ರಿಕೆಗಳು ಸಮಾಜದ ವಸ್ತುಸ್ಥಿತಿ ಬಿಂಬಿಸುವ ಕನ್ನಡಿಯಂತೆ. ಅದಕ್ಕೆ ಬದ್ಧರಾಗಿ ಕರ್ತವ್ಯ ನಿರ್ವಹಿಸಬೇಕು ಎಂದರು. ಅಕ್ಕ ಡಾ.ಗಂಗಾಂಬಿಕೆ ಪಾಟೀಲ ಮಾತನಾಡಿದರು. ಜಿಲ್ಲಾ ಅಧ್ಯಕ್ಷ ಅಶೋಕಕುಮಾರ ಕರಂಜಿ ಅಧ್ಯಕ್ಷತೆ ವಹಿಸಿದ್ದರು. ಭಾರತ ವೈಭವ ಪತ್ರಿಕೆಯ ಬಸವಕಲ್ಯಾಣ ವರದಿಗಾರರೂ ಆದ ಸಂಘದ ಅಧ್ಯಕ್ಷ ವೀರಶೆಟ್ಟಿ ಮಲಶೆಟ್ಟಿ, ಭಾಲ್ಕಿ ವರದಿಗಾರ ಸಂತೋಷ ಬಿಜಿ ಪಾಟೀಲ, ಚಿಟಗುಪ್ಪ ವರದಿಗಾರ ಸಜೀಶ ಲುಂಬನೋರ, ಔರಾದ ವರದಿಗಾರ ಸೂರ್ಯಕಾಂತ ಎಕಲಾರೆ ಸೇರಿದಂತೆ ಇನ್ನೂ ವಿವಿಧ ಪತ್ರಿಕೆಗಳ ತಾಲ್ಲೂಕು ವರದಿಗಾರರು.
ವರದಿ – ಸಂಪಾದಕೀಯ